Asian Games 2023: ಪಾಕ್ ತಂಡಕ್ಕೆ ಭಾರಿ ಮುಖಭಂಗ; ಕಂಚು ಗೆದ್ದ ಬಾಂಗ್ಲಾದೇಶ
Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಭಾರೀ ಮುಖಭಂಗ ಅನುಭವಿಸಿದೆ. ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಪಾಕ್ ತಂಡವನ್ನು 5 ವಿಕೆಟ್ಗಳಿಂದ ಮಣಿಸುವಲ್ಲಿ ಬಾಂಗ್ಲಾದೇಶ ವನಿತಾ ತಂಡ ಯಶಸ್ವಿಯಾಗಿದೆ. ಈ ಮೂಲಕ 9 ವರ್ಷಗಳ ಹಿಂದಿನ ಸೋಲಿಗೆ ಬಾಂಗ್ಲಾ ತಂಡ ಸೇಡು ತೀರಿಸಿಕೊಂಡಿದೆ.
ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಭಾರೀ ಮುಖಭಂಗ ಅನುಭವಿಸಿದೆ. ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಪಾಕ್ ತಂಡವನ್ನು 5 ವಿಕೆಟ್ಗಳಿಂದ ಮಣಿಸುವಲ್ಲಿ ಬಾಂಗ್ಲಾದೇಶ (Pakistan vs Bangladesh) ವನಿತಾ ತಂಡ ಯಶಸ್ವಿಯಾಗಿದೆ. ಈ ಮೂಲಕ 9 ವರ್ಷಗಳ ಹಿಂದಿನ ಸೋಲಿಗೆ ಬಾಂಗ್ಲಾ ತಂಡ ಸೇಡು ತೀರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ, ಸೆಮಿಫೈನಲ್ ಪಂದ್ಯದಂತೆ ಈ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಫಲವಾಗಿ ತಂಡ ಕೇವಲ 64 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 18.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಉತ್ತಮ ಆರಂಭ ಸಿಗಲಿಲ್ಲ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಶಾವಲ್ ಜುಲ್ಫಿಕರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬರು ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ ಕೂಡ ಒಂದು ರನ್ ದಾಟಿ ಮುಂದಕ್ಕೆ ಹೋಗಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬಂದ ಸದಾಫ್ ಶಾಮ್ಸ್ 15 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ: ಏರ್ ರೈಫಲ್ನಲ್ಲಿ ಬೆಳ್ಳಿ
67 ರನ್ಗಳ ಟಾರ್ಗೆಟ್
ನಾಯಕಿ ನಿದಾ ದಾರ್ ಕೂಡ 14 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, 17 ರನ್ಗಳ ಕೊಡುಗೆ ನೀಡಿದ ಅಲಿಯಾ ರಿಯಾಜ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಬಿಟ್ಟರೆ ತಂಡದಿಂದ ಮತ್ತ್ಯಾರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಪಾಕ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 67 ರನ್ ಕಲೆಹಾಕಿತ್ತು.
ಪಂದ್ಯ ಗೆದ್ದ ಬಾಂಗ್ಲಾ
ಇನ್ನು 67 ರನ್ಗಳ ಅಲ್ಪ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಶಮೀಮಾ ಸುಲ್ತಾನ ಮತ್ತು ಶಥಿ ರಾಣಿ ಆರಂಭಿಕರಿಬ್ಬರು ತಲಾ 13 ರನ್ಗಳ ಕೊಡುಗೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಶೋರ್ನಾ ಅಖ್ತರ್ ಅಜೇಯರಾಗಿ ಉಳಿದು 14 ರನ್ಗಳ ಕೊಡುಗೆ ನೀಡಿದರು. ಅಂತಿಮವಾಗಿ ಬಾಂಗ್ಲಾದೇಶ ತಂಡ 18.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಈ ಗುರಿ ಸಾಧಿಸಿತು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಸೇಡು ತೀರಿಸಿಕೊಂಡಿತು.
ಸೇಡು ತೀರಿಸಿಕೊಂಡ ಬಾಂಗ್ಲಾದೇಶ
ವಾಸ್ತವವಾಗಿ, 9 ವರ್ಷಗಳ ಹಿಂದೆ, ಅಂದರೆ 2014 ರ ಇಂಚೆನ್ ಏಷ್ಯನ್ ಗೇಮ್ಸ್‌ನಲ್ಲಿ, ಬಾಂಗ್ಲಾದೇಶದ ಚಿನ್ನದ ಪದಕ ಗೆಲ್ಲುವ ಕನಸನ್ನು ಪಾಕಿಸ್ತಾನ ಮುರಿದಿತ್ತು. ಈ ಬಾರಿ ಬಾಂಗ್ಲಾದೇಶವು ಪಾಕಿಸ್ತಾನವನ್ನು ನಿರ್ಣಾಯಕ ಘಟ್ಟದಲ್ಲಿ ಸೋಲಿಸಿ ಯಾವುದೇ ಪದಕವನ್ನು ಗೆಲ್ಲದಂತೆ ಮಾಡಿದೆ. 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಾಕ್ ಇದೀಗ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಯಾವುದೇ ಪದಕವಿಲ್ಲದೆ ಖಾಲಿ ಕೈಯಲ್ಲಿ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ