ಅಂದು ಸಚಿನ್, ಇಂದು ಉಸ್ಮಾನ್ ಖವಾಜಾ; ದ್ವಿಶತಕದಂಚಿನಲ್ಲಿ ನಾಯಕರಿಂದ ಮಹಾಮೋಸ!

| Updated By: ಪೃಥ್ವಿಶಂಕರ

Updated on: Jan 07, 2023 | 2:02 PM

2004 ರಲ್ಲಿ, ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧ ಮುಲ್ತಾನ್ ಟೆಸ್ಟ್‌ನಲ್ಲಿ 194 ರನ್ ಗಳಿಸಿದರು. ದ್ವಿಶತಕಕ್ಕೆ ಕೇವಲ 6 ರನ್‌ಗಳ ಅಂತರದಲ್ಲಿದ್ದಾಗ ಆಗಿನ ತಂಡದ ನಾಯಕ ಹಾಗೂ ಇಂದಿನ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು.

ಅಂದು ಸಚಿನ್, ಇಂದು ಉಸ್ಮಾನ್ ಖವಾಜಾ; ದ್ವಿಶತಕದಂಚಿನಲ್ಲಿ ನಾಯಕರಿಂದ ಮಹಾಮೋಸ!
ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಉಸ್ಮಾನ್ ಖವಾಜಾ
Follow us on

ಇಡೀ ಕ್ರೀಡಾಂಗಣ ದ್ವಿಶತಕದ ಸಂಭ್ರಮಕ್ಕೆ ಕಾದು ನಿಂತಿತ್ತು. ಆಸೀಸ್ ಬ್ಯಾಟರ್ ಉಸ್ಮಾನ್ ಖವಾಜಾ (Usman Khawaja) ಕೂಡ ತಮ್ಮ ವೃತ್ತಿಜೀವನದ ಮೊದಲ ದ್ವಿಶತಕವನ್ನು ಬೌಂಡರಿ ಅಥವಾ ಸಿಕ್ಸರ್‌ನೊಂದಿಗೆ ಪೂರ್ಣಗೊಳಿಸಬೇಕೆ ಎಂಬ ಸಿದ್ಧತೆಯಲ್ಲಿದ್ದರು. ಆದರೆ ಅಷ್ಟರಲ್ಲಾಗಲೇ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ (Pat Cummins) ತೆಗೆದುಕೊಂಡ ಅದೊಂದು ನಿರ್ಧಾರ ಚೊಚ್ಚಲ ದ್ವಿಶತಕ ಸಿಡಿಸುವ ಸಂತಸದಲ್ಲಿದ್ದ ಉಸ್ಮಾನ್ ಖವಾಜಾ ಅವರ ಕನಸನ್ನು ನೂಚ್ಚು ನೂರು ಮಾಡಿತು. ಇದರೊಂದಿಗೆ ದ್ವಿಶತಕಕ್ಕೆ ಇನ್ನೇನು ಕೆಲವೇ ರನ್​​ಗಳ ಅಂತರದಲ್ಲಿದ್ದರೂ, ನಾಯಕನ ಇನ್ನಿಂಗ್ಸ್ ಡಿಕ್ಲೇರ್​ ನಿರ್ಧಾರದಿಂದಾಗಿ ದ್ವಿಶತಕ ಪೂರೈಸಲು ಸಾಧ್ಯವಾಗದ ದುರಾದೃಷ್ಟ ಬ್ಯಾಟ್ಸ್​ಮನ್​ಗಳ ಪಟ್ಟಿಗೆ ಖವಾಜಾ ಕೂಡ ಸೇರಿಕೊಂಡರು.

ಈ ರೀತಿ ದ್ವಿಶತಕದಂಚಿನಲ್ಲಿ ಅಜೇಯರಾಗಿ ಪೆವಿಲಿಯನ್ ಸೇರಿಕೊಂಡ ಆಟಗಾರರ ಪಟ್ಟಿಯಲ್ಲಿ ಉಸ್ಮಾನ್ ಖವಾಜಾ ಒಬ್ಬರೇ ಇಲ್ಲ. ಇವರಿಗೂ ಮೊದಲು, ಫ್ರಾಂಕ್ ವೊರೆಲ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ ನಾಯಕರ ನಿರ್ಧಾರದಿಂದ ದ್ವಿಶತಕ ವಂಚಿತರಾಗಿದ್ದಾರೆ. ವಾಸ್ತವವಾಗಿ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಖವಾಜಾ 195 ರನ್ ಗಳಿಸಿ, ದ್ವಿಶತಕದತ್ತ ಸಾಗುತ್ತಿದ್ದರು. ಆದರೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ತೆಗೆದುಕೊಂಡ ಇನ್ನಿಂಗ್ಸ್ ಡಿಕ್ಲೇರ್​ ನಿರ್ಧಾರದಿಂದಾಗಿ ಉಸ್ಮಾನ್ ಖವಾಜಾ ದ್ವಿಶತಕದಿಂದ ವಂಚಿತರಾದರು. ಅಂತಿಮವಾಗಿ ಆಸ್ಟ್ರೇಲಿಯಾ 4 ವಿಕೆಟ್‌ ಕಳೆದುಕೊಂಡು 475 ರನ್ ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

IND vs SL: ರೋಹಿತ್​ಗೆ ಫಿಟ್ನೆಸ್​ನ​ದ್ದೇ ಚಿಂತೆ; ಏಕದಿನ ಸರಣಿಗೂ ಮುನ್ನ ಜಿಮ್​ನಲ್ಲಿ ಬೆವರು ಹರಿಸಿದ ಹಿಟ್​ಮ್ಯಾನ್

ತಡವಾಗಿ ಆರಂಭವಾದ ಆಟ

ವಾಸ್ತವವಾಗಿ ಮಳೆಯಿಂದಾಗಿ ದಿನದಾಟ ತಡವಾಗಿ ಆರಂಭವಾಯಿತು. ಊಟದ ವಿರಾಮದ ತನಕ ಪಂದ್ಯವನ್ನು ಆಡಲಾಗದಿದ್ದರಿಂದ ಆಸ್ಟ್ರೇಲಿಯಾ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರಕ್ಕೆ ಬರಬೇಕಾಯಿತು. ಹೀಗಾಗಿ ತಮ್ಮ ಇನ್ನಿಂಗ್ಸ್​ನಲ್ಲಿ 19 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 195 ರನ್‌ ಕಲೆಹಾಕಿದ ಉಸ್ಮಾನ್ ಖವಾಜಾ ಅಜೇಯರಾಗಿ ಪೆವಿಲಿಯನ್​ಗೆ ಮರಳಿದರು.

19 ವರ್ಷಗಳ ಹಿಂದೆ ತೆಂಡೂಲ್ಕರ್​ಗೂ ಹೀಗೆ ಆಗಿತ್ತು

ಖವಾಜಾಗೂ ಮೊದಲು ಟೀಂ ಇಂಡಿಯಾ ದಂತಕಥೆ ಸಚಿನ್ ತೆಂಡಲ್ಕೂರ್ ಕೂಡ ಒಂದು ಪಂದ್ಯದಲ್ಲಿ ದ್ವಿಶತಕದಿಂದ ವಂಚಿತರಾಗಿದ್ದರು. ಅವರಿಗೂ ಮೊದಲು 1960 ರಲ್ಲಿ, ವೆಸ್ಟ್ ಇಂಡೀಸ್‌ನ ಫ್ರಾಂಕ್ ವೊರೆಲ್ 197 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ನಾಯಕ ಗ್ಯಾರಿ ಅಲೆಕ್ಸಾಂಡರ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ದ್ವಿಶತಕದಂಚಿನಲ್ಲಿ ಅಜೇಯರಾಗಿ ಪೆವಿಲಿಯನ್​ಗೆ ಮರಳಿದ ಘಟನೆ ನಡೆದಿತ್ತು. ಬಳಿಕ ಹಲವು ವರ್ಷಗಳ ನಂತರ, 2004 ರಲ್ಲಿ, ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧ ಮುಲ್ತಾನ್ ಟೆಸ್ಟ್‌ನಲ್ಲಿ 194 ರನ್ ಗಳಿಸಿ ಆಡುತ್ತಿದ್ದರು. ದ್ವಿಶತಕಕ್ಕೆ ಕೇವಲ 6 ರನ್‌ಗಳ ಅಂತರದಲ್ಲಿದ್ದಾಗ ಆಗಿನ ತಂಡದ ನಾಯಕ ಹಾಗೂ ಇಂದಿನ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Sat, 7 January 23