Pat Cummins: ಆಸ್ಟ್ರೇಲಿಯಾ ತಂಡಕ್ಕೆ ನೂತನ ನಾಯಕನ ಘೋಷಣೆ: ಕಾಂಗರೂ ಪಡೆಯಲ್ಲಿ ದೊಡ್ಡ ಬದಲಾವಣೆ

| Updated By: Vinay Bhat

Updated on: Oct 18, 2022 | 8:00 AM

Australia New ODI Captain: ಕಳೆದ ಸೆಪ್ಟೆಂಬರ್​ನಲ್ಲಿ ಆ್ಯರೋನ್ ಫಿಂಚ್ ಆಸ್ಟ್ರೇಲಿಯಾದ ಏಕದಿನ ತಂಡಕ್ಕೆ ನಾಯಕತ್ವದ ತ್ಯಜಿಸುವ ಜೊತೆ ವಿದಾಯ ಕೂಡ ಘೋಷಿಸಿದ್ದರು. ಸದ್ಯ ಟಿ20 ವಿಶ್ವಕಪ್​ನಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

Pat Cummins: ಆಸ್ಟ್ರೇಲಿಯಾ ತಂಡಕ್ಕೆ ನೂತನ ನಾಯಕನ ಘೋಷಣೆ: ಕಾಂಗರೂ ಪಡೆಯಲ್ಲಿ ದೊಡ್ಡ ಬದಲಾವಣೆ
ಪ್ಯಾಟ್ ಕಮ್ಮಿನ್ಸ್
Follow us on

ಆಸ್ಟ್ರೇಲಿಯಾ (Australia) ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರನ್ನು ಏಕದಿನ ತಂಡದ ನೂತನ ನಾಯಕನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆ ಮಾಡಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತ ಮಾಹಿತಿ ನೀಡಿದ್ದು ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದ 27ನೇ ಏಕದಿನ ತಂಡದ ನಾಯಕನಾಗಿದ್ದಾರೆ ಎಂದು ಹೇಳಿದೆ. ಈ ಮೂಲಕ ಆ್ಯರೋನ್ ಫಿಂಚ್ (Aaron Finch) ಜಾಗಕ್ಕೆ ಅನೇಕ ದಿನಗಳಿಂದ ಕೇಳಿಬರುತ್ತಿದ್ದ ನಾಯಕನ ಹೆಸರಿಗೆ ತೆರೆಬಿದ್ದಿದೆ. ”ನನಗೆ ಫಿಂಚ್ ನಾಯಕತ್ವದಡಿಯಲ್ಲಿ ಆಡಿದ್ದು ತುಂಬಾ ಸಂತಸವಿದೆ. ಅವರ ನಾಯಕತ್ವದಿಂದ ಸಾಕಷ್ಟು ಕಲಿತಿದ್ದೇನೆ. ಆ ಗುಣವನ್ನು ನನ್ನಲ್ಲಿ ಅಳವಡಿಸಿಕೊಳ್ಳುತ್ತೇನೆ,” ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್​ನಲ್ಲಿ ಆ್ಯರೋನ್ ಫಿಂಚ್ ಆಸ್ಟ್ರೇಲಿಯಾದ ಏಕದಿನ ತಂಡಕ್ಕೆ ನಾಯಕತ್ವದ ತ್ಯಜಿಸುವ ಜೊತೆ ವಿದಾಯ ಕೂಡ ಘೋಷಿಸಿದ್ದರು. ಸದ್ಯ ಟಿ20 ವಿಶ್ವಕಪ್​ನಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಫಿಂಚ್ ನಾಯಕತ್ವ ತ್ಯಜಿಸಿದ ಬಳಿಕ ಈ ಜಾಗಕ್ಕೆ ಅನೇಕರ ಹೆಸರುಗಳು ಕೇಳಿಬಂದಿದ್ದವು. ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಪೈಕಿ ಒಬ್ಬರು ನಾಯಕನಾಗುತ್ತಾರೆ ಎಂದು ಹೇಳಲಾಗಿತ್ತು. ಬಳಿಕ ದಿಢೀರ್ ಆಗಿ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಏಕದಿನ ತಂಡದ ಹೊಸ ನಾಯಕ ಎಂಬ ಸುದ್ದಿ ವೈರಲ್ ಆಗಿತ್ತು. ಆದರೀಗ ಈ ಎಲ್ಲ ಗಾಳಿ ಸುದ್ದಿಗೆ ತೆರೆಬಿದ್ದಿದ್ದು ಪ್ಯಾಟ್ ಕಮಿನ್ಸ್​​ಗೆ ಕ್ಯಾಪ್ಟನ್ ಪಟ್ಟ ಒಲಿದಿದೆ.

ಕಳೆದ ತಿಂಗಳು ಸೆಪ್ಟಂಬರ್ 11 ರಂದು ಫಿಂಚ್ ನ್ಯೂಜಿಲೆಂಡ್ ತಂಡದ ಎದುರು ತಮ್ಮ ಕೊನೆಯ ಏಕದಿನ ಪಂದ್ಯ ಆಡಿದರು. ಫಿಂಚ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟರ್​ಗಳಲ್ಲಿ ಒಬ್ಬರು. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟಿಂಗ್‌ ವಿಭಾಗದ ಪ್ರಮುಖ ಶಕ್ತಿಯಾಗಿದ್ದರು. ಆದರೆ, ಕಳೆದ ಕೆಲವು ತಿಂಂಗಳುಗಳಿಂದ ಸತತವಾಗಿ ರನ್ ಗಳಿಸಲು ವಿಫಲವಾಗುತ್ತಿರುವುದು ಟೀಕೆಗೆ ಗುರಿಯಾಗಿತ್ತು. ಫಿಂಚ್‌ ತಮ್ಮ ಕೊನೆಯ 7 ಏಕದಿನ ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 26 ರನ್ ಮಾತ್ರ. ಇದರಲ್ಲಿ ಮೂರು ಬಾರಿ ಡಕ್‌ಔಟ್‌ ಆಗಿರುವುದು ಕೂಡ ಸೇರಿದೆ.

ಇದನ್ನೂ ಓದಿ
VIDEO: ಇವತ್ತು ಯಾಕೋ ಹೊಡಿಬೇಕು ಅನಿಸ್ತಿಲ್ಲ: ನೆಕ್ಸ್ಟ್ ಬಾಲ್​ಗೆ ಸೂರ್ಯ ಔಟ್..!
Virat Kohli: ವಿರಾಟ್ ಕೊಹ್ಲಿಗೆ ಗಂಭೀರ ಸಲಹೆ ನೀಡಿದ ಗೌತವ್ ಗಂಭೀರ್: ಅಭಿಮಾನಿಗಳು ಆಕ್ರೋಶ
T20 World Cup 2022: ಟೀಮ್ ಇಂಡಿಯಾದ ಮತ್ತೋರ್ವ ಆಟಗಾರನಿಗೆ ಗಾಯ..!
T20 World Cup 2022: ಅಭ್ಯಾಸ ಪಂದ್ಯದಲ್ಲೇ ಪಾಕ್​ಗೆ ಹೀನಾಯ ಸೋಲು

ಆಸ್ಟ್ರೇಲಿಯಾ ತಂಡದ ಪರ ಫಿಂಚ್​ ಒಟ್ಟು 146 ಏಕದಿನ ಪಂದ್ಯಗಳನ್ನಾಡಿದ್ದು, 5406 ರನ್​​​ಗಳಿಸಿದ್ದಾರೆ. ಇದರಲ್ಲಿ 17 ಶತಕ ಸೇರಿಕೊಂಡಿವೆ. 2020ರಲ್ಲಿ ಏಕದಿನ ಕ್ರಿಕೆಟ್​​ನ ಪ್ಲೇಯರ್​ ಆಫ್​ ದಿ ಇಯರ್​ ಪ್ರಶಸ್ತಿ ಗೆದ್ದಿದ್ದರು. ಜೊತೆಗೆ 2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್​ ವಿಜೇತ ತಂಡದ ಭಾಗವಾಗಿದ್ದರು. ಇವರು 2013 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ನಾಯಕನಾಗಿ 52 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಫಿಂಚ್ ತನ್ನ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ 52.08 ರ ಗೆಲುವಿನ ಶೇಕಡಾವಾರು ಪ್ರಮಾಣ ಹೊಂದಿದ್ದಾರೆ.

Published On - 8:00 am, Tue, 18 October 22