KL Rahul: ಧೋನಿಯ ಹೆಲಿಕಾಫ್ಟರ್ ಶಾಟ್ ಹೊಡೆದು ಅಭಿಮಾನಿಗಳನ್ನು ದಂಗಾಗಿಸಿದ ಕೆಎಲ್ ರಾಹುಲ್: ವಿಡಿಯೋ ನೋಡಿ
India vs Australia Warm-up Match: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ 5ನೇ ಓವರ್ನ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಕೆಎಲ್ ರಾಹುಲ್ ಸಿಡಿಸಿದ ಸಿಕ್ಸ್ ಅಮೋಘವಾಗಿತ್ತು. ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರಯೋಗಿಸಿ ಚೆಂಡನ್ನು ಸಿಕ್ಸರ್ಗೆ ಅಟ್ಟಿದ ರೋಚಕ ವಿಡಿಯೋ ಇಲ್ಲಿದೆ ನೋಡಿ.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಗೆ ಚಾಲನೆ ಸಿಕ್ಕಿದ್ದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಇದರ ನಡುವೆ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿರುವ ತಂಡಗಳು ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಸೋಮವಾರ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳು ಮೊದಲ ಅಧಿಕೃತ ವಾರ್ಮ್-ಅಪ್ ಮ್ಯಾಚ್ನಲ್ಲಿ ಮುಖಾಮುಖಿ ಆಗಿದ್ದವು. ಕೊನೆಯ ಓವರ್ ವರೆಗೂ ನಡೆದ ರೋಚಕ ಕಾದಾಟದಲ್ಲಿ ಟೀಮ್ ಇಂಡಿಯಾ 6 ರನ್ಗಳಿಂದ ಗೆಲುವು ಸಾಧಿಸಿತು. ಭಾರತ ಪರ ಕೆಎಲ್ ರಾಹುಲ್ (KL Rahul) ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ನಲ್ಲಿ ಮಿಂಚಿದರೆ, ಮೊಹಮ್ಮದ್ ಶಮಿ ಕೊನೆಯ 20ನೇ ಓವರ್ ಬೌಲಿಂಗ್ ಮಾಡಿ ಸಂಚಲನ ಸೃಷ್ಟಿಸಿದರು. ಟೀಮ್ ಇಂಡಿಯಾಕ್ಕೆ ಸ್ಫೋಟಕ ಆರಂಭ ನೀಡಿದ್ದು ಕೆಎಲ್ ರಾಹುಲ್.
ಕೇವಲ 33 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಸಿಡಿಸಿ ಕೆಎಲ್ ರಾಹುಲ್ 57 ರನ್ ಚಚ್ಚಿದರು. ಮೊದಲ ಓವರ್ನಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ರಾಹುಲ್ ತಂಡದ ಮೊತ್ತವನ್ನು 7 ಓವರ್ ಆಗುವ ಹೊತ್ತಿಗೆ 75ಕ್ಕೆ ತಂದಿಟ್ಟರು. ಇಲ್ಲಿ 5 ಓವರ್ ಆಗುವಾಗ ಭಾರತದ ಸ್ಕೋರ್ 56 ಆಗಿದ್ದರೆ ರಾಹುಲ್ 25 ಎಸೆತಗಳಲ್ಲಿ 49 ರನ್ ಸಿಡಿಸಿದ್ದರು. ಆದರೆ, ರೋಹಿತ್ ಈ ಸಂದರ್ಭ ಕಲೆಹಾಕಿದ್ದು 5 ಎಸೆತಗಳಲ್ಲಿ 1 ರನ್ ಮಾತ್ರ. ಪವರ್ ಪ್ಲೇ ಅನ್ನು ಸಂಪೂರ್ಣವಾಗಿ ರಾಹುಲ್ ಅವರೇ ಆಡಿ ಮುಗಿಸಿದರು.
ಅದರಲ್ಲೂ 5ನೇ ಓವರ್ನ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಇವರು ಸಿಡಿಸಿದ ಸಿಕ್ಸ್ ಅಮೋಘವಾಗಿತ್ತು. ಕಠಿಣ ಬಾಲ್ ಅನ್ನು ಚೆನ್ನಾಗಿ ಅರಿತ ರಾಹುಲ್ ಓವರ್ ಮಿಡ್ ವಿಕೆಟ್ ಕಡೆ ಧೋನಿಯ ಹೆಲಿಕಾಫ್ಟರ್ ಶಾಟ್ ಪ್ರಯೋಗಿಸಿ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಹುಲ್ ಅವರ ಈ ಮನಮೋಹಕ ಹೊಡೆತಕ್ಕೆ ಅಭಿಮಾನಿಗಳಂತು ಫುಲ್ ಫಿದಾ ಆಗಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.
View this post on Instagram
ಅಭ್ಯಾಸ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ಗೆ ರಾಹುಲ್- ರೋಹಿತ್ ಶರ್ಮಾ 7.3 ಓವರ್ನಲ್ಲಿ 78 ರನ್ ಕಲೆಹಾಕಿದರು. ಕೆ.ಎಲ್ ರಾಹುಲ್ 57 ರನ್ ಗಳಿಸಿ ಔಟಾದರೆ, ರೋಹಿತ್ 15 ರನ್ಗೆ ನಿರ್ಗಮಿಸಿದರು. ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 19 ರನ್ಗಳ ಕೊಡುಗೆ ನೀಡಿದರು. ಹಾರ್ದಿಕ್ ಪಾಂಡ್ಯ 2 ಹಾಗೂ ದಿನೇಶ್ ಕಾರ್ತಿಕ್ 20 ರನ್ ಗಳಿಸಿದರು. ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ಅತ್ತ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಧಾರವಾಗಿ ನಿಂತರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಸೂರ್ಯಕುಮಾರ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 50 ರನ್ ಗಳಿಸಿದರು.
187 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಆಸ್ಟ್ರೇಲಿಯಾ ಕೂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕ ಆ್ಯರೋನ್ ಫಿಂಚ್ ಮತ್ತು ಮಿಚೆಲ್ ಮಾರ್ಷ್ ಜೊಡಿ 41 ರನ್ ಕಲೆಹಾಕಿತು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಫಿಂಚ್ 54 ಎಸೆತಗಳಲ್ಲಿ 76 ರನ್ ಕಲೆಹಾಕಿದರು. ಆಸ್ಟ್ರೇಲಿಯಾ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಜಯದ ಹಾದಿಯಲ್ಲಿದ್ದಾಗ ಡೇವಿಸ್ ರನೌಟ್ ಮತ್ತು ಪ್ಯಾಟ್ ಕಮ್ಮಿನ್ಸ್ ಕ್ಯಾಚ್ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಕೊನೆಯ 20ನೇ ಓವರ್ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 11 ರನ್ಗಳು ಬೇಕಾಯಿತು. ಈ ಓವರ್ನಲ್ಲಿ ಶಮಿ ಕೇವಲ 4 ರನ್ ನೀಡಿ ಒಂದು ರನೌಟ್ ಜೊತೆಗೆ 3 ವಿಕೆಟ್ ಪಡೆದುಕೊಂಡು ಆಸ್ಟ್ರೇಲಿಯಾವನ್ನು 180 ರನ್ಗೆ ಆಲೌಟ್ ಮಾಡಿದರು.
Published On - 10:13 am, Tue, 18 October 22