AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಇವತ್ತು ಯಾಕೋ ಹೊಡಿಬೇಕು ಅನಿಸ್ತಿಲ್ಲ: ನೆಕ್ಸ್ಟ್ ಬಾಲ್​ಗೆ ಸೂರ್ಯ ಔಟ್..!

T20 World Cup 2022: ಅಂತಿಮವಾಗಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ಅವರ ಮೊದಲೆರಡು ಎಸೆತಗಳಲ್ಲಿ ಪ್ಯಾಟ್ ಕಮಿನ್ಸ್​ ಎರೆಡೆರಡು ರನ್ ಓಡಿದರು.

VIDEO: ಇವತ್ತು ಯಾಕೋ ಹೊಡಿಬೇಕು ಅನಿಸ್ತಿಲ್ಲ: ನೆಕ್ಸ್ಟ್ ಬಾಲ್​ಗೆ ಸೂರ್ಯ ಔಟ್..!
Suryakumar Yadav
TV9 Web
| Edited By: |

Updated on:Oct 17, 2022 | 11:01 PM

Share

T20 World Cup 2022: ಟೀಮ್ ಇಂಡಿಯಾದ (Team India) 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಆಸ್ಟ್ರೇಲಿಯಾದ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಸೂರ್ಯ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಇದಾಗ್ಯೂ ಅವರ ಸಿಡಿಲಬ್ಬರ ಕಂಡು ಬಂದಿರಲಿಲ್ಲ ಎಂದೇ ಹೇಳಬಹುದು. ಏಕೆಂದರೆ ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಸ್ಪೋಟಕ ಬ್ಯಾಟಿಂಗ್ ನಡೆಸುವ ಸೂರ್ಯ ಆಸೀಸ್ ವಿರುದ್ಧ ತುಸು ನಿಧಾನವಾಗಿ ಬ್ಯಾಟ್ ಬೀಸಿದ್ದರು. ಇದಾಗ್ಯೂ ಅವರು 33 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಅರ್ಧಶತಕ ಬಾರಿಸಿದ್ದರು. ಆದರೆ ಸಾಮಾನ್ಯವಾಗಿ 20-30 ಎಸೆತಗಳ ನಡುವೆ ಹಾಫ್ ಸೆಂಚುರಿ ಸಿಡಿಸುವ ಸೂರ್ಯ ಇವತ್ತು ತುಸು ಮಂಕಾಗಿದ್ದರು. ಇದಕ್ಕೆ ಸಾಕ್ಷಿಯಾಗಿ ಅವರೇ ಹೇಳಿದ ಮಾತುಗಳು ವೈರಲ್ ಆಗಿದೆ.

20ನೇ ಓವರ್​ನಲ್ಲಿ ಕೇನ್ ರಿಚರ್ಡ್ಸನ್ ಎಸೆತವನ್ನು ಎದುರಿಸಿದ್ದ ಸೂರ್ಯಕುಮಾರ್ ಯಾದವ್ ನಾನ್​ ಸ್ಟ್ರೈಕ್​ನಲ್ಲಿದ್ದ ಅಕ್ಷರ್ ಪಟೇಲ್ ಜೊತೆ ಇವತ್ತು ಯಾಕೋ ಹೊಡಿಯಬೇಕು ಎಂದು ಅನಿಸುತ್ತಾ ಇಲ್ಲ ಎಂದಿದ್ದರು. ಅಚ್ಚರಿ ಎಂದರೆ ಕೇನ್ ರಿಚರ್ಡ್ಸನ್ ಅವರ ಮುಂದಿನ ಫುಲ್ ಟಾಸ್ ಎಸೆತದಲ್ಲೇ ಸೂರ್ಯ ಸುಲಭ ಕ್ಯಾಚ್ ನೀಡಿದ್ದರು. ಇತ್ತ ಸುಲಭ ಕ್ಯಾಚ್ ಹಿಡಿದು ನಗುವಿನೊಂದಿಗೆ ರಿಚರ್ಡ್ಸನ್ ಸೂರ್ಯಕುಮಾರ್ ಅವರನ್ನು ಅಣಕಿಸಿದರು.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
Image
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
Image
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Image
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಇದೀಗ ಮೈದಾನದಲ್ಲಿ ಸೂರ್ಯಕುಮಾರ್ ಹೇಳಿದ ಮಾತುಗಳು ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕೆಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್​ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ನಾಯಕ ಆರೋನ್ ಫಿಂಚ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆರಂಭದಿಂದಲೇ ಟೀಮ್ ಇಂಡಿಯಾ ಬೌಲರುಗಳನ್ನು ದಂಡಿಸಲಾರಂಭಿಸಿದ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಮತ್ತೊಂದು ತುದಿಯಿಂದ ಫಿಂಚ್​ಗೆ ಉತ್ತಮ ಸಾಥ್ ದೊರಕಿರಲಿಲ್ಲ.

ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್ (11), ಗ್ಲೆನ್ ಮ್ಯಾಕ್ಸ್​ವೆಲ್ (23), ಮಾರ್ಕಸ್ ಸ್ಟೊಯಿನಿಸ್ (7) ಕೈ ಕೊಟ್ಟಿದ್ದರು. ಪರಿಣಾಮ ಕೊನೆಯ 2 ಓವರ್​ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 16 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆಯೂ ಆರೋನ್ ಫಿಂಚ್ ಕ್ರೀಸ್​ನಲ್ಲಿದ್ದರು. ಹೀಗಾಗಿ ಆಸೀಸ್ ತಂಡ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಮೊದಲ ಎಸೆತದಲ್ಲೇ ಫಿಂಚ್ (79) ವಿಕೆಟ್ ಕಬಳಿಸುವ ಮೂಲಕ ಹರ್ಷಲ್ ಪಟೇಲ್ ಯಶಸ್ಸು ತಂದುಕೊಟ್ಟರು.

ಇದಾಗ್ಯೂ ಟಿಮ್ ಡೇವಿಡ್ ಕ್ರೀಸ್​ನಲ್ಲಿದ್ದ ಕಾರಣ ಅಂತಿಮ ಓವರ್​ಗಳ ವೇಳೆ ಬಿಗ್ ಹಿಟ್ ಅನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ವೇಳೆ ವಿರಾಟ್ ಕೊಹ್ಲಿ ಮಾಡಿದ ಅತ್ಯಾಧ್ಬುತ ಫೀಲ್ಡಿಂಗ್​ನಿಂದ ಟಿಮ್ ಡೇವಿಡ್ ಹೊರನಡೆಯಬೇಕಾಯಿತು. 19ನೇ ಓವರ್​ನ 2ನೇ ಎಸೆತದಲ್ಲಿ ಜೋಶ್ ಇಂಗ್ಲಿಸ್ ಫ್ರಂಟ್​ನಲ್ಲೇ ಬಾರಿಸಿ ಟಿಮ್ ಡೇವಿಡ್​ಗೆ ಸ್ಟ್ರೈಕ್ ನೀಡುವ ಯತ್ನ ಮಾಡಿದ್ದರು. ಆದರೆ ಅಲ್ಲೇ ಫೀಲ್ಡಿಂಗ್​ನಲ್ಲಿ ವಿರಾಟ್ ಕೊಹ್ಲಿ ಚಕ್ಕನೆ ಚೆಂಡನ್ನು ಹಿಡಿದು ವಿಕೆಟ್ ನೇರವಾಗಿ ಎಸೆಯುವ ಮೂಲಕ ಅದ್ಭುತ ರನೌಟ್ ಮಾಡಿದರು. ಈ ಮೂಲಕ ಟೀಮ್ ಇಂಡಿಯಾಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.

ಅಂತಿಮವಾಗಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ಅವರ ಮೊದಲೆರಡು ಎಸೆತಗಳಲ್ಲಿ ಪ್ಯಾಟ್ ಕಮಿನ್ಸ್​ ಎರೆಡೆರಡು ರನ್ ಓಡಿದರು. 3ನೇ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಕಮಿನ್ಸ್ ಚೆಂಡು ಸಿಕ್ಸ್ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ ಲಾಂಗ್ ಆನ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ವಿರಾಟ್ ಕೊಹ್ಲಿ ಅತ್ಯಾದ್ಭುತವಾಗಿ ಜಿಗಿಯುವ ಮೂಲಕ ಚೆಂಡನ್ನು ಹಿಡಿದರು. ಇನ್ನು ಕೊನೆಯ 3 ಎಸೆತಗಳಲ್ಲಿ 1 ರನೌಟ್ ಹಾಗೂ 2 ವಿಕೆಟ್ ಉರುಳಿಸುವ ಮೂಲಕ ಮೊಹಮ್ಮದ್ ಶಮಿ ಪರಾಕ್ರಮ ಮೆರೆದರು. ಪರಿಣಾಮ ಟೀಮ್ ಇಂಡಿಯಾ 6 ರನ್​ಗಳ ರೋಚಕ ಜಯ ಸಾಧಿಸಿತು.

Published On - 10:59 pm, Mon, 17 October 22

Follow Us
Web contact
Web contact

TV9 Kannada

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!