ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್

|

Updated on: Nov 09, 2023 | 8:27 AM

Meg Lanning announces retirement: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ವಿಚಾರ ಹೇಳಲು ತುಂಬಾ ಕಷ್ಟವಾಗುತ್ತಿದೆ. ಆದರೆ, ಇದು ಸರಿಯಾದ ನಿರ್ಧಾರ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್
Meg Lanning retirement
Follow us on

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ (Meg Lanning) ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಆಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕಿ ಎನಿಸಿಕೊಂಡಿರುವ ಇವರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕ್ರಿಕೆಟ್‌ನಿಂದ ಅನಿರ್ದಿಷ್ಟ ವಿರಾಮವನ್ನು ಪಡೆದುಕೊಂಡಿದ್ದರು. ಆದಾಗ್ಯೂ, ಆಸ್ಟ್ರೇಲಿಯನ್ ಬೋರ್ಡ್ ಇವರು ಸದ್ಯದಲ್ಲೇ ಪುನರಾಗಮನ ಮಾಡಲಿದ್ದಾರೆ ಎಂದು ಹೇಳಿತ್ತು. ಆದರೆ ಲ್ಯಾನಿಂಗ್ 31 ನೇ ವಯಸ್ಸಿನಲ್ಲಿ ಕ್ರಿಕೆಟ್‌ನಿಂದ ದೂರವಾಗಲು ನಿರ್ಧರಿಸಿದ್ದಾರೆ.

ಮೆಗ್ ಲ್ಯಾನಿಂಗ್ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ವಿಚಾರ ಹೇಳಲು ತುಂಬಾ ಕಷ್ಟವಾಗುತ್ತಿದೆ. ಆದರೆ, ಇದು ಸರಿಯಾದ ನಿರ್ಧಾರ ಎಂದು ಹೇಳಿದ್ದಾರೆ. “ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹಿಂದೆ ಸರಿಯುವ ನಿರ್ಧಾರವನ್ನು ಮಾಡುವುದು ಕಷ್ಟಕರವಾಗಿತ್ತು, ಆದರೆ ಇದು ನನಗೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ಲ್ಯಾನಿಂಗ್ ಹೇಳಿದರು.

ಇದನ್ನೂ ಓದಿ
‘ನಿಮಗೆ ನಾಚಿಕೆಯಾಗಬೇಕು’! ಪಾಕ್ ಮಾಜಿ ಆಟಗಾರನಿಗೆ ಶಮಿ ಕ್ಲಾಸ್
ನ್ಯೂಜಿಲೆಂಡ್​ಗೆ ಮಹತ್ವದ ಪಂದ್ಯ; ಇಲ್ಲಿದೆ ಬೆಂಗಳೂರಿನ ಹವಾಮಾನ ವರದಿ
ವಿಶ್ವಕಪ್​ನಲ್ಲಿಂದು ನ್ಯೂಝಿಲೆಂಡ್-ಶ್ರೀಲಂಕಾ ಮುಖಾಮುಖಿ
ಏಕದಿನ ರ‍್ಯಾಂಕಿಂಗ್​ನಲ್ಲಿ ಭಾರತೀಯ ಆಟಗಾರರದ್ದೇ ದರ್ಬಾರ್..!

ನಿವೃತ್ತಿ ಕುರಿತು ಘೋಷಣೆ ಮಾಡಿದ ಮೆಗ್ ಲ್ಯಾನಿಂಗ್:

 

“ನಾನು 13 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಖುಷಿಯಿಂದ ಆನಂದಿಸಿದ್ದೇನೆ. ತುಂಬಾ ಅದೃಷ್ಟಶಾಲಿಯಾಗಿದ್ದೇನೆ, ಆದರೆ ನಾನು ಏನಾದರು ಹೊಸದನ್ನು ಮಾಡಬೇಕು ಎಂದು ಹೊರಟಿರುವೆ. ಹೀಗಾಗಿ ಕ್ರಿಕೆಟ್​ನಿಂದ ಹಿಂದೆ ಸರಿಯುವ ಸಮಯ ಬಂದಿದೆ. ಆಸ್ಟ್ರೇಲಿಯಾ ತಂಡ ಯಶಸ್ಸು ಸಾಧಿಸಿದೆ. ನಾನು ಏನಾದರು ಸಾಧಿಸಿದ್ದೇನೆ, ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಜೀವನದುದ್ದಕ್ಕೂ ತಂಡದ ಸಹ ಆಟಗಾರರೊಂದಿಗೆ ಹಂಚಿಕೊಂಡ ಕ್ಷಣಗಳನ್ನು ಪ್ರೀತಿಸುತ್ತೇನೆ,” ಎಂದು ಹೇಳಿದ್ದಾರೆ.

ಉತ್ತಮ ಆರಂಭದ ನಂತರ ಎಡವುತ್ತಿರುವ ರಾಹುಲ್; ರೋಹಿತ್​ಗೆ ಹೊಸ ತಲೆನೋವು

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್​ನಲ್ಲಿ ಕಂಡ ಅತ್ಯುತ್ತಮ ಬ್ಯಾಟರ್‌ಗಳು ಮತ್ತು ನಾಯಕರಲ್ಲಿ ಒಬ್ಬರಾದ ಲ್ಯಾನಿಂಗ್ ತಂಡವನ್ನು ದಾಖಲೆಯ 182 ಬಾರಿ ಮುನ್ನಡೆಸಿದ್ದಾರೆ. ಒಟ್ಟು 7 ಬಾರಿ ವಿಶ್ವಕಪ್‌ಗಳನ್ನು ಗೆದ್ದ ಸಾಧನೆ ಹೊಂದಿದ್ದಾರೆ. ಇದರಲ್ಲಿ ಐದು ಬಾರಿ ನಾಯಕಿಯಾಗಿ. 31ರ ಹರೆಯದ ಇವರು ಏಕದಿನದಲ್ಲಿ 15 ಶತಕಗಳನ್ನು ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಲ್ಯಾನಿಂಗ್ ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕಿ 2023 ರಲ್ಲಿ ನಡೆದ ಮೊದಲ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತರುವಲ್ಲಿ ಯಶಸ್ವಿಯಾಗಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ