NZ vs SL, ICC World Cup: ವಿಶ್ವಕಪ್ನಲ್ಲಿಂದು ನ್ಯೂಝಿಲೆಂಡ್-ಶ್ರೀಲಂಕಾ ಮುಖಾಮುಖಿ: ಕಿವೀಸ್ಗೆ ಮಾಡು ಇಲ್ಲವೇ ಮಡಿ ಪಂದ್ಯ
New Zealand vs Sri Lanka, ICC ODI World Cup 2023: ನ್ಯೂಝಿಲೆಂಡ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡ ಆಡಿರುವ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು- ನಾಲ್ಕರಲ್ಲಿ ಗೆದ್ದು 8 ಅಂಕ ಪಡೆದುಕೊಂಡಿದೆ. ರನ್ರೇಟ್ ಆಧಾರದ ಮೇಲೆ ಕಿವೀಸ್ 4ನೇ ಸ್ಥಾನದಲ್ಲಿದ್ದರೆ, ನಂತರದಲ್ಲಿ ಪಾಕ್, ಅಫ್ಘಾನ್ ಇದೆ. ಹೀಗಾಗಿ ಕಿವೀಸ್ಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ 41ನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಝಿಲೆಂಡ್ ಮತ್ತು ಕುಸಲ್ ಮೆಂಡಿಸ್ ಅವರ ಶ್ರೀಲಂಕಾ (New Zealand vs Sri Lanka) ತಂಡಗಳು ಮುಖಾಮುಖಿ ಆಗಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಲಂಕಾಗೆ ಇದೊಂದು ಔಪಚಾರಿಕ ಪಂದ್ಯ. ಆದರೆ, ಕಿವೀಸ್ ಪಡೆ ಹಾಗಲ್ಲ. ಸೆಮಿ ಫೈನಲ್ಗೆ ಏರಬೇಕೆಂದರೆ ಕೇನ್ ಪಡೆಗೆ ಈ ಪಂದ್ಯವನ್ನು ಗೆಲ್ಲಲೇ ಬೇಕು. ಭಾರತ, ಆಫ್ರಿಕಾ, ಆಸ್ಟ್ರೇಲಿಯಾ ಹೀಗೆ ಮೂರು ತಂಡಗಳು ಸೆಮೀಸ್ಗೆ ತಪುಪಿದೆ. ಇನ್ನೊಂದು ಸ್ಥಾನಕ್ಕಾಗಿ ನ್ಯೂಝಿಲೆಂಡ್, ಪಾಕ್, ಅಫ್ಘಾನ್ ಹೋರಾಡುತ್ತಿದೆ.
ನ್ಯೂಝಿಲೆಂಡ್ ತಂಡ:
ನ್ಯೂಝಿಲೆಂಡ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡ ಆಡಿರುವ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು- ನಾಲ್ಕರಲ್ಲಿ ಗೆದ್ದು 8 ಅಂಕ ಪಡೆದುಕೊಂಡಿದೆ. ರನ್ರೇಟ್ ಆಧಾರದ ಮೇಲೆ ಕಿವೀಸ್ 4ನೇ ಸ್ಥಾನದಲ್ಲಿದ್ದರೆ, ನಂತರದಲ್ಲಿ ಪಾಕ್, ಅಫ್ಘಾನ್ ಇದೆ. ಹೀಗಾಗಿ ಕಿವೀಸ್ಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಕಳೆದ ಪಂದ್ಯದಲ್ಲಿ ಪಾಕ್ ವಿರುದ್ಧ ನ್ಯೂಝಿಲೆಂಡ್ ಪರ ರಚಿನ್ ರವೀಂದ್ರ, ವಿಲಿಯಮ್ಸನ್ ಅಬ್ಬರಿಸಿ 401 ರನ್ ಸಿಡಿಸಿದರೂ ಗೆಲ್ಲಲೂ ಸಾಧ್ಯವಾಗಲಿಲ್ಲ. ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಪಾಕ್ ಗೆದ್ದಿತು. ಬ್ಯಾಟರ್ಗಳು ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ, ಬೌಲರ್ಗಳ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬರಬೇಕು.
ಟೈಮ್ ಔಟ್ ವಿವಾದದ ನಂತರ ವಿಶ್ವಕಪ್ನಿಂದ ಹೊರಬಿದ್ದ ಶಕೀಬ್ ಅಲ್ ಹಸನ್..!
ಶ್ರೀಲಂಕಾ
ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸೋತಿರುವ ಲಂಕಾಕ್ಕೆ ಇದೊಂದು ಔಪಚಾರಿಕ ಪಂದ್ಯವಾದರೂ ಗೆಲ್ಲುವ ಇರಾದೆಯಲ್ಲಿದೆ. ಯಾಕೆಂದರೆ ಸತತ ಸೋಲುಗಳಿಂದ ಕಂಗೆಟ್ಟಿರುವ ಲಂಕಾಕ್ಕೆ ಜಯ ಬೇಕಾಗಿದೆ. ಕಳಪೆ ಪ್ರದರ್ಶನದಿಂದ ಲಂಕಾ ಕ್ರಿಕೆಟ್ ಮಂಡಳಿ ಕೂಡ ಸಂಕಷ್ಟದಲ್ಲಿದೆ. ಟೂರ್ನಿ ಆರಂಭದಲ್ಲಿ ತಲೆನೋವಾಗಿ ಪರಿಣಮಿಸಿದ ಇಂಜುರಿ ಸಮಸ್ಯೆ ಪ್ರತಿ ಪಂದ್ಯದಲ್ಲಿ ಎದ್ದು ಕಂಡಿತು. ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಕೆಲ ಅನುಭವಿ ಬ್ಯಾಟರ್ಗಳಿದ್ದರೂ ಆಡುತ್ತಿಲ್ಲ.
ಬೆಂಗಳೂರು ಪಿಚ್:
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವದ ಅತ್ಯುತ್ತಮ ಬ್ಯಾಟಿಂಗ್ ವಿಕೆಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಗಳಿಸುತ್ತಾರೆ. ಕ್ರಿಸ್ ಗೇಲ್ ಈ ಮೈದಾನದಲ್ಲಿ ಟಿ20ಯಲ್ಲಿ 175 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಕೂಡ ಇಲ್ಲಿ ಚೊಚ್ಚಲ ದ್ವಿಶತಕ ದಾಖಲಿಸಿದ್ದರು. ಇಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 672 ರನ್ಗಳು ದಾಖಲಾಗಿದ್ದವು. ಅಲ್ಲದೆ ಹಿಂದಿನ ಪಂದ್ಯದಲ್ಲಿ ಪಾಖ್ ವಿರುದ್ಧ ನ್ಯೂಝಿಲೆಂಢ್ 401 ರನ್ ಸಿಡಿಸಿತ್ತು. ಹೀಗಾಗಿ ಇಂದೊನ ಪಂದ್ಯ ಕೂಡ ಒಂದು ಬಿಗ್ ಸ್ಕೋರ್ ಮ್ಯಾಚ್ ಆಗುವ ಸಾಧ್ಯತೆಗಳಿವೆ. ಆದರೆ, ಪಂದ್ಯಕ್ಕೆ ಮಳೆಯ ಕಾಟ ಕೂಡ ಇರಲಿದೆ ಎನ್ನಲಾಗಿದೆ.
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ವಿಲ್ ಯಂಗ್ , ಕೈಲ್ ಜಾಮಿಸನ್.
ಶ್ರೀಲಂಕಾ: ಪಾತುಮ್ ನಿಸಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ/ವಿಕೆಟ್ ಕೀಪರ್) ಸದಿರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತಿಕ್ಷಣ, ಕಸುನ್ ರಜಿತಾ, ದುಷ್ಮಂತ ಚಮೀರಾ, ದಿಲ್ಶನ್ ಮಧುಶಂಕ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ