ಉತ್ತಮ ಆರಂಭದ ನಂತರ ಎಡವುತ್ತಿರುವ ರಾಹುಲ್; ರೋಹಿತ್​ಗೆ ಹೊಸ ತಲೆನೋವು

ICC World Cup 2023: ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದ ರಾಹುಲ್, ಆಡಿದ ಮೊದಲ ಪಂದ್ಯದಲ್ಲಿ 97 ರನ್ ಗಳಿಸಿದ ನಂತರ, ತಮ್ಮ ಈ ಫಾರ್ಮ್ ಅನ್ನು ಮುಂದುವರಿಸಿದರು. ಆದರೆ, ಮುಂದಿನ ಪಂದ್ಯಗಳಲ್ಲಿ ರಾಹುಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ಉತ್ತಮ ಆರಂಭದ ನಂತರ ಎಡವುತ್ತಿರುವ ರಾಹುಲ್; ರೋಹಿತ್​ಗೆ ಹೊಸ ತಲೆನೋವು
ಕೆಎಲ್ ರಾಹುಲ್
Follow us
ಪೃಥ್ವಿಶಂಕರ
|

Updated on:Nov 08, 2023 | 1:44 PM

2023 ರ ವಿಶ್ವಕಪ್‌ನಲ್ಲಿ (ICC World Cup 2023) ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಟೀಂ ಇಂಡಿಯಾ (Team India) ಮೊದಲ ತಂಡವಾಗಿ ಸೆಮಿಫೈನಲ್‌ಗೆ ಕಾಲಿಟ್ಟಿದೆ. ಸತತ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ಸೆಮಿಫೈನಲ್ ತಲುಪಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ತನ್ನ ಎಂಟನೇ ಪಂದ್ಯದಲ್ಲಿ ಟೀಂ ಇಂಡಿಯಾ 243 ರನ್‌ಗಳ ಬೃಹತ್ ಅಂತರದಿಂದ ದಕ್ಷಿಣ ಆಫ್ರಿಕಾವನ್ನು (India vs South Africa) ಸೋಲಿಸಿತು. ಆದರೆ ಈ ಬೃಹತ್ ಗೆಲುವಿನ ನಡುವೆಯೂ ಟೀಂ ಇಂಡಿಯಾಗೆ ದೊಡ್ಡ ಆತಂಕ ಎದುರಾಗಿದ್ದು, ತಂಡದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಅವರ ಕಳಪೆ ಫಾರ್ಮ್​ ನಾಯಕ ರೋಹಿತ್​ಗೆ ಕೊಂಚ ಆತಂಕ ತಂದೊಡ್ಡಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿಯೇ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಕೇವಲ 2 ರನ್‌ಗಳಿಗೆ 3 ವಿಕೆಟ್‌ಗಳು ಪತನಗೊಂಡ ನಂತರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆ ಪಂದ್ಯದಲ್ಲಿ ಭಾರತದ ಗೆಲುವಿನ ಹೀರೋ ಎನಿಸಿಕೊಂಡಿದ್ದ ರಾಹುಲ್, 97 ರನ್ ಗಳಿಸಿ ಅಜೇಯರಾಗಿ ಮರಳಿದ್ದರು. ಕೊಹ್ಲಿ ಕೂಡ 85 ರನ್​ಗಳ ಕೊಡುಗೆ ನೀಡಿದ್ದರು. ಈ ಪಂದ್ಯದ ನಂತರವೂ ಕೊಹ್ಲಿ ಬ್ಯಾಟ್‌ನಿಂದ ನಿರಂತರವಾಗಿ ರನ್‌ಗಳು ಹರಿದುಬರುತ್ತಿವೆ. ಆದರೆ ರಾಹುಲ್ ಬ್ಯಾಟ್‌ ಮಾತ್ರ ಮೌನಕ್ಕೆ ಶರಣಾಗಿದೆ.

ಏಕದಿನ ವಿಶ್ವಕಪ್​ನಲ್ಲಿ ಕೆಎಲ್ ರಾಹುಲ್ ಪ್ರದರ್ಶನ ಹೇಗಿದೆ ಗೊತ್ತಾ?

ಈಡನ್‌ನಲ್ಲಿ ಮಂಕಾದ ರಾಹುಲ್

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಅಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಆದರೆ ಆರಂಭಿಕರ ವಿಕೆಟ್ ಪತನದ ಬಳಿಕ ಕೆಎಲ್ ರಾಹುಲ್ ಕ್ರೀಸ್‌ಗೆ ಬಂದರು. ಈ ಪಂದ್ಯದಲ್ಲಿ ರಾಹುಲ್ ಮೇಲೆ ಭಾರೀ ನಿರೀಕ್ಷೆ ಇತ್ತು. ಪಂದ್ಯಾವಳಿಯ ಆರಂಭದಿಂದಲೂ ರಾಹುಲ್ ತೋರುತ್ತಿರುವ ಫಾರ್ಮ್‌ನಿಂದಾಗಿ ಈ ನಿರೀಕ್ಷೆಗಳು ಹೆಚ್ಚಿದ್ದರೂ ಅದು ನಡೆಯಲಿಲ್ಲ. ಇದರಲ್ಲಿ ರಾಹುಲ್ ವಿಫಲರಾದರಲ್ಲದೆ 17 ಎಸೆತಗಳಲ್ಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾದರು. ನಿಸ್ಸಂಶಯವಾಗಿ, ಟೀಂ ಇಂಡಿಯಾ ಇದರಿಂದ ಯಾವುದೇ ನಷ್ಟವನ್ನು ಅನುಭವಿಸಲಿಲ್ಲ. ಆದರೆ ಸೆಮಿಫೈನಲ್‌ ಸಮೀಪಿಸುತ್ತಿರುವ ಸಮಯದಲ್ಲಿ ರಾಹುಲ್ ಅವರ ಕಳಪೆ ಫಾರ್ಮ್​ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಉತ್ತಮ ಆರಂಭದ ನಂತರ ಎಡವುತ್ತಿರುವ ರಾಹುಲ್

ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದ ರಾಹುಲ್, ಆಡಿದ ಮೊದಲ ಪಂದ್ಯದಲ್ಲಿ 97 ರನ್ ಗಳಿಸಿದ ನಂತರ, ತಮ್ಮ ಈ ಫಾರ್ಮ್ ಅನ್ನು ಮುಂದುವರಿಸಿದರು. ಆದರೆ, ಮುಂದಿನ ಪಂದ್ಯಗಳಲ್ಲಿ ರಾಹುಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅಫ್ಘಾನಿಸ್ತಾನದ ವಿರುದ್ಧ ರಾಹುಲ್​ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದರೆ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿದಿದ್ದ ರಾಹುಲ್ 19 ರನ್​ಗಳಿಗೆ ಸುಸ್ತಾದರೆ, ಬಾಂಗ್ಲಾದೇಶದ ವಿರುದ್ಧ 34 ರನ್ ಗಳಿಸಿದರು. ಆದರಿಲ್ಲಿ ರಾಹುಲ್ ಅಜೇಯರಾಗಿ ಉಳಿದಿದ್ದು ತಂಡದ ಗೆಲುವಿನಲ್ಲಿ ನೆರವಾಗಿದ್ದರು. ಆದರೆ ನ್ಯೂಜಿಲೆಂಡ್ ಪಂದ್ಯದ ನಂತರ ಅವರ ಬ್ಯಾಟಿಂಗ್ ಕುಸಿತ ಕಾಣುತ್ತಿದೆ. ನ್ಯೂಜಿಲೆಂಡ್ ವಿರುದ್ಧ 27 ರನ್​ಗಳಿಸಿದ ರಾಹುಲ್​ಗೆ, ನಂತರ ಇಂಗ್ಲೆಂಡ್ ವಿರುದ್ಧ 39 ರನ್ ಮತ್ತು ಶ್ರೀಲಂಕಾ ವಿರುದ್ಧ ಕೇವಲ 21 ರನ್ ಗಳಿಸಲು ಸಾಧ್ಯವಾಯಿತು.

ಫಾರ್ಮ್​ ಕಂಡುಕೊಳ್ಳಬೇಕಿದೆ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಜೊತೆಯಾಟವನ್ನಾಡಿದ ರಾಹುಲ್, ಬಿಗ್ ಶಾಟ್ ಹೊಡೆಯುವ ಪ್ರಯತ್ನದಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಬಳಿಕ ಶ್ರೀಲಂಕಾ ವಿರುದ್ಧದಲ್ಲೂ ಇದೇ ರೀತಿಯಾಗಿ ವಿಕೆಟ್ ಕಳೆದುಕೊಂಡರು. ನ್ಯೂಜಿಲೆಂಡ್ ವಿರುದ್ಧವೂ ಅಲ್ಪ ಜೊತೆಯಾಟದ ಬಳಿಕ ರಾಹುಲ್ ವಿಕೆಟ್ ಕಳೆದುಕೊಂಡರು. ತಂಡ ಆ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ತಂಡದ ಮಧ್ಯಮ ಕ್ರಮಾಂಕಕ್ಕೆ ಸ್ಥಿರತೆ ಒದಗಿಸುವುದಲ್ಲದೆ, ಕೊನೆಯಲ್ಲಿ ವೇಗ ಹೆಚ್ಚಿಸುವಲ್ಲಿಯೂ ರಾಹುಲ್ ಪಾತ್ರವಿದೆ. ಆದರೆ ಕಳೆದ 4 ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಈ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಸೆಮಿಫೈನಲ್‌ಗೆ ಸಿದ್ಧರಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Wed, 8 November 23

ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು