AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೈಮ್ ಔಟ್ ವಿವಾದದ ನಂತರ ವಿಶ್ವಕಪ್​ನಿಂದ ಹೊರಬಿದ್ದ ಶಕೀಬ್ ಅಲ್ ಹಸನ್..!

ICC World Cup 2023: ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2023 ರ ವಿಶ್ವಕಪ್‌ನಿಂದ ಹೊರಬಿದಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಶಕೀಬ್ ಅಲ್ ಹಸನ್ ಇದೀಗ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಟೈಮ್ ಔಟ್ ವಿವಾದದ ನಂತರ ವಿಶ್ವಕಪ್​ನಿಂದ ಹೊರಬಿದ್ದ ಶಕೀಬ್ ಅಲ್ ಹಸನ್..!
ಶಕೀಬ್ ಅಲ್ ಹಸನ್
ಪೃಥ್ವಿಶಂಕರ
|

Updated on: Nov 08, 2023 | 10:25 AM

Share

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2023 ರ ವಿಶ್ವಕಪ್‌ನಿಂದ (ICC World Cup 2023) ಹೊರಬಿದಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಶಕೀಬ್ ಅಲ್ ಹಸನ್ ಇದೀಗ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಶಕೀಬ್ ಅವರ ಬೆರಳಿಗೆ ಗಾಯವಾಗಿದೆ ಎಂದು ಬಾಂಗ್ಲಾದೇಶ ತಂಡದ ಫಿಸಿಯೋ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಪಂದ್ಯದ ನಂತರ ಅವರ ಬೆರಳನ್ನು ಎಕ್ಸ್ ರೇ ಮಾಡಲಾಗಿದ್ದು, ಅದರಲ್ಲಿ ಮೂಳೆ ಮುರಿತ ಕಂಡುಬಂದಿದೆ. ಈ ಗಾಯದಿಂದಾಗಿ ಶಕೀಬ್ ಬಾಂಗ್ಲಾದೇಶದ ಕೊನೆಯ ಲೀಗ್ ಪಂದ್ಯದಲ್ಲಿ ಆಡುವಂತಿಲ್ಲ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶ ತನ್ನ ಕೊನೆಯ ಲೀಗ್ ಪಂದ್ಯವನ್ನು ನವೆಂಬರ್ 11 ರಂದು ಆಸ್ಟ್ರೇಲಿಯಾ ವಿರುದ್ಧ ಆಡಬೇಕಾಗಿದೆ.

ವಿವಾದದಲ್ಲಿ ಶಕೀಬ್

ನಾಯಕ ಮತ್ತು ಆಟಗಾರನಾಗಿ ಶಕೀಬ್ ಅಲ್ ಹಸನ್‌ಗೆ ಈ ಪಂದ್ಯಾವಳಿ ಹೆಚ್ಚು ಯಶಸ್ಸು ನೀಡಲಿಲ್ಲ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಕೀಬ್ ತೆಗೆದುಕೊಂಡ ಅದೊಂದು ನಿರ್ಧಾರ ವಿಶ್ವ ಕ್ರಿಕೆಟ್​ನಲ್ಲಿ ಸಾಕಷ್ಟು ಚರ್ಚೆ ಹುಟ್ಟಿಹಾಕಿತ್ತು. ವಾಸ್ತವವಾಗಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಶ್ರೀಲಂಕಾ ತಂಡದ ಆಲ್ ರೌಂಡರ್ ಏಂಜೆಲೊ ಮ್ಯಾಥ್ಯೂಸ್ ವಿರುದ್ಧ ಟೈಮ್ ಔಟ್ ಮನವಿ ಮಾಡಿದರು. ಆ ನಂತರ ಮ್ಯಾಥ್ಯೂಸ್ ಅವರನ್ನು ವಿವಾದಾತ್ಮಕ ರೀತಿಯಲ್ಲಿ ಔಟ್ ಮಾಡಲಾಯಿತು. ಮ್ಯಾಥ್ಯೂಸ್‌ ಅವರನ್ನು ಟೈಮ್ ಔಟ್ ಮಾಡಿದ ನಂತರ, ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಶಕೀಬ್ ಅವರನ್ನು ಸಾಕಷ್ಟು ಟೀಕೆಗೆ ಗುರಿ ಮಾಡಿದ್ದಾರೆ.

ವಿಶ್ವಕಪ್ ಮಧ್ಯದಲ್ಲೇ ತಂಡವನ್ನು ತೊರೆದು ತವರಿಗೆ ಮರಳಿದ ಬಾಂಗ್ಲಾ ನಾಯಕ ಶಕೀಬ್..!

ಪಂದ್ಯ ಗೆಲ್ಲಿಸಿದ ಶಕೀಬ್

ಈ ವಿವಾದಾತ್ಮಕ ನಿರ್ಧಾರದ ನಡುವೆಯೂ ಶಕೀಬ್ ಅಲ್ ಹಸನ್ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶವನ್ನು ಗೆಲುವಿನತ್ತ ಮುನ್ನಡೆಸಿದರು. ಬಾಂಗ್ಲಾದೇಶ ಗೆಲುವಿಗೆ 280 ರನ್‌ಗಳ ಅಗತ್ಯವಿದ್ದು, ನಾಯಕ ಶಕೀಬ್ 65 ಎಸೆತಗಳಲ್ಲಿ 82 ರನ್‌ಗಳ ತ್ವರಿತ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಈ ಪಂದ್ಯದ ವೇಳೆ ಬೆರಳಿಗೆ ಗಾಯವಾಗಿದ್ದು, ರಾತ್ರಿ ಪಂದ್ಯ ಮುಗಿದ ಬಳಿಕ ಬೆರಳನ್ನು ಪರೀಕ್ಷಿಸಿದಾಗ ಮೂಳೆ ಮುರಿತವಾಗಿರುವುದು ಕಂಡು ಬಂದಿದೆ. ಈಗ ಶಕೀಬ್ ಅಲ್ ಹಸನ್ 4 ರಿಂದ 6 ವಾರಗಳ ಕಾಲ ಆಡಲು ಸಾಧ್ಯವಾಗುವುದಿಲ್ಲ.

ವಿಶ್ವಕಪ್‌ನಲ್ಲಿ ಶಕೀಬ್ ಸಾಧನೆ

ವಿಶ್ವಕಪ್‌ನಲ್ಲಿ, ಶಕೀಬ್ ಅಲ್ ಹಸನ್ 7 ಪಂದ್ಯಗಳಲ್ಲಿ ಬ್ಯಾಟಿಂಗ್‌ನಿಂದ 186 ರನ್‌ಗಳನ್ನು ಬಾರಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 26.57 ಆಗಿತ್ತು. ಅದೇ ಸಮಯದಲ್ಲಿ, ಅವರು ಇಡೀ ಪಂದ್ಯಾವಳಿಯಲ್ಲಿ ಕೇವಲ ಒಂದು ಅರ್ಧ ಶತಕವನ್ನು ಬಾರಿಸಿದ್ದು, ಬೌಲಿಂಗ್‌ನಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ