ENG vs NED ICC World Cup 2023: ನೆದರ್​​ಲೆಂಡ್ಸ್​ ವಿರುದ್ಧ ಗೆದ್ದ ಇಂಗ್ಲೆಂಡ್

TV9 Web
| Updated By: ಝಾಹಿರ್ ಯೂಸುಫ್

Updated on:Nov 08, 2023 | 9:19 PM

England vs Netherlands, ICC world Cup 2023: ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹಾಗೂ ನೆದರ್​ಲೆಂಡ್ಸ್ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಈ 7 ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡವೇ ಗೆದ್ದಿರುವುದು ವಿಶೇಷ. ಇನ್ನು ಇಂದಿನ ಪಂದ್ಯದ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. 

ENG vs NED ICC World Cup 2023: ನೆದರ್​​ಲೆಂಡ್ಸ್​ ವಿರುದ್ಧ ಗೆದ್ದ ಇಂಗ್ಲೆಂಡ್
England vs Netherlands

ಏಕದಿನ ವಿಶ್ವಕಪ್​ನ 40ನೇ ಪಂದ್ಯದಲ್ಲಿ ನೆದರ್​ಲೆಂಡ್ಸ್​ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್​ (108) ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಇಂಗ್ಲೆಂಡ್​ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 339 ರನ್​ ಕಲೆಹಾಕಿತು. 340 ರನ್​ಗಳ ಬೃಹತ್ ಗುರಿ ಪಡೆದ ನೆದರ್​ಲೆಂಡ್ಸ್​ ತಂಡವು 37.2 ಓವರ್​ಗಳಲ್ಲಿ 179 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್​ ತಂಡವು 160 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹಾಗೂ ನೆದರ್​ಲೆಂಡ್ಸ್ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಈ 7 ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡವೇ ಗೆದ್ದಿರುವುದು ವಿಶೇಷ. ಇನ್ನು ಇಂದಿನ ಪಂದ್ಯದ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.

ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಗಸ್ ಅಟ್ಕಿನ್ಸನ್, ಆದಿಲ್ ರಶೀದ್.

ನೆದರ್​ಲೆಂಡ್ಸ್​ (ಪ್ಲೇಯಿಂಗ್ XI): ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗೆಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡೆ, ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್.

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್.

ನೆದರ್​ಲೆಂಡ್ಸ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಕ್ವಿಬ್ ಬ್ಯಾರೆಸಿ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.

LIVE Cricket Score & Updates

The liveblog has ended.
  • 08 Nov 2023 09:12 PM (IST)

    ENG vs NED ICC World Cup 2023 Live Score: ನೆದರ್​ಲೆಂಡ್ಸ್​ ಆಲೌಟ್

    ಮೊಯೀನ್ ಅಲಿ ಎಸೆದ 38ನೇ ಓವರ್​ನ 2ನೇ ಎಸೆತದಲ್ಲಿ ವ್ಯಾನ್ ಮೀಕೆರೆನ್ ಸ್ಟಂಪ್ ಔಟ್.

    37.2 ಓವರ್​ಗಳಲ್ಲಿ 179 ರನ್​ಗಳಿಸಿ ಆಲೌಟ್ ಆದ ನೆದರ್​ಲೆಂಡ್ಸ್​ ತಂಡ.

    ಇಂಗ್ಲೆಂಡ್ ತಂಡಕ್ಕೆ 160 ರನ್​ಗಳ ಭರ್ಜರಿ ಜಯ

    ______________________________________________

    ಇಂಗ್ಲೆಂಡ್– 339/9 (50)

    ನೆದರ್​ಲೆಂಡ್ಸ್​- 179 (37.2)

      

  • 08 Nov 2023 09:03 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ 8ನೇ ವಿಕೆಟ್ ಪತನ

    ಮೊಯೀನ್ ಅಲಿ ಎಸೆದ 36ನೇ ಓವರ್​ನ 4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ.

    ಕ್ರೀಸ್​ನಲ್ಲಿ ಆರ್ಯನ್ ದತ್​ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.

    ಗೆಲುವಿನತ್ತ ಮುನ್ನಡೆಯುತ್ತಿರುವ ಇಂಗ್ಲೆಂಡ್.

    NED 167/8 (36)

      

  • 08 Nov 2023 08:56 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ 6ನೇ ವಿಕೆಟ್ ಪತನ

    ಮೊಯೀನ್ ಅಲಿ ಎಸೆದ 34ನೇ ಓವರ್​ನ 5ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಸ್ಕಾಟ್ ಎಡ್ವರ್ಡ್ಸ್​​.

    42 ಎಸೆತಗಳಲ್ಲಿ 38 ರನ್​ ಬಾರಿಸಿ ವಿಕೆಟ್ ಒಪ್ಪಿಸಿದ ನೆದರ್​ಲೆಂಡ್ಸ್​ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್​.

    ಕ್ರೀಸ್​ನಲ್ಲಿ ಲೋಗನ್ ವ್ಯಾನ್ ಬೀಕ್​ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.

    NED 163/6 (34)

      

  • 08 Nov 2023 08:40 PM (IST)

    ENG vs NED ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 140 ರನ್​ ಕಲೆಹಾಕಿದ ನೆದರ್​ಲೆಂಡ್ಸ್​.

    ಕ್ರೀಸ್​ನಲ್ಲಿ ಸ್ಕಾಟ್ ಎಡ್ವರ್ಡ್ಸ್​ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.

    NED 140/5 (30)

    ಇನ್ನು ನೆದರ್​ಲೆಂಡ್ಸ್​ ತಂಡಕ್ಕೆ 20 ಓವರ್​ಗಳಲ್ಲಿ  200 ರನ್​ಗಳ ಅವಶ್ಯಕತೆ.

      

  • 08 Nov 2023 08:20 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ 5ನೇ ವಿಕೆಟ್ ಪತನ

    ಆದಿಲ್ ರಶೀದ್ ಎಸೆದ 26ನೇ ಓವರ್​ನ 3ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದ ಬಾಸ್ ಡಿ ಲೀಡೆ.

    12 ಎಸೆತಗಳಲ್ಲಿ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಸ್ ಡಿ ಲೀಡೆ.

    ಕ್ರೀಸ್​ನಲ್ಲಿ ಸ್ಕಾಟ್ ಎಡ್ವರ್ಡ್ಸ್​ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.

    NED 115/5 (26)

      

      

  • 08 Nov 2023 08:17 PM (IST)

    ENG vs NED ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳಲ್ಲಿ 99 ರನ್​ ಕಲೆಹಾಕಿದ ನೆದರ್​ಲೆಂಡ್ಸ್​ ಬ್ಯಾಟರ್​ಗಳು.

    4 ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಇಂಗ್ಲೆಂಡ್ ಬೌಲರ್​ಗಳು.

    ಕ್ರೀಸ್​ನಲ್ಲಿ ಸ್ಕಾಟ್ ಎಡ್ವರ್ಡ್ಸ್​ ಹಾಗೂ ಬಾಸ್ ಡಿ ಲೀಡೆ ಬ್ಯಾಟಿಂಗ್.

    NED 99/4 (25)

    ಇನ್ನು 15 ಓವರ್​ಗಳಲ್ಲಿ ನೆದರ್​ಲೆಂಡ್ಸ್ ತಂಡಕ್ಕೆ 241 ರನ್​ಗಳ ಅವಶ್ಯಕತೆ.

      

  • 08 Nov 2023 08:08 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ 4ನೇ ವಿಕೆಟ್ ಪತನ

    ಡೇವಿಡ್ ವಿಲ್ಲಿ ಎಸೆದ 23ನೇ ಓವರ್​ನ 4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ .

    49 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೈಬ್ರಾಂಡ್ ಎಂಗೆಲ್ಬ್ರೆಕ್ಟ್. ಇಂಗ್ಲೆಂಡ್ ತಂಡಕ್ಕೆ 4ನೇ ಯಶಸ್ಸು.

    ಕ್ರೀಸ್​ನಲ್ಲಿ ಸ್ಕಾಟ್ ಎಡ್ವರ್ಡ್ಸ್​ ಹಾಗೂ ಬಾಸ್ ಡಿ ಲೀಡೆ ಬ್ಯಾಟಿಂಗ್.

    NED 90/4 (23)

      

  • 08 Nov 2023 07:54 PM (IST)

    ENG vs NED ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ ನೆದರ್​ಲೆಂಡ್ಸ್ ತಂಡದ ಸ್ಕೋರ್ 77 ರನ್​ಗಳು.

    3 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಇಂಗ್ಲೆಂಡ್ ಬೌಲರ್​ಗಳು.

    ಕ್ರೀಸ್​ನಲ್ಲಿ ಸ್ಕಾಟ್ ಎಡ್ವರ್ಡ್ಸ್​ ಹಾಗೂ ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ ಬ್ಯಾಟಿಂಗ್.

    NED 77/3 (20)

    ನೆದರ್​ಲೆಂಡ್ಸ್​ಗೆ 340 ರನ್​ಗಳ ಗುರಿ ನೀಡಿರುವ ಇಂಗ್ಲೆಂಡ್.

      

  • 08 Nov 2023 07:44 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ 3ನೇ ವಿಕೆಟ್ ಪತನ

    17ನೇ ಓವರ್​ನ 3ನೇ ಎಸೆತದಲ್ಲಿ 2 ರನ್ ಓಡುವ ಯತ್ನದಲ್ಲಿ ರನೌಟ್ ಆದ ವೆಸ್ಲಿ ಬ್ಯಾರೆಸಿ.

    62 ಎಸೆತಗಳಲ್ಲಿ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವೆಸ್ಲಿ ಬ್ಯಾರೆಸಿ.

    ಕ್ರೀಸ್​ನಲ್ಲಿ ಸ್ಕಾಟ್ ಎಡ್ವರ್ಡ್ಸ್​ ಹಾಗೂ ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ ಬ್ಯಾಟಿಂಗ್.

    NED 70/3 (18)

      

      

  • 08 Nov 2023 07:29 PM (IST)

    ENG vs NED ICC World Cup 2023 Live Score: 15 ಓವರ್​ಗಳು ಮುಕ್ತಾಯ

    ಗಸ್ ಅಟ್ಕಿನ್ಸನ್ ಎಸೆದ 15ನೇ ಓವರ್​ನ ಮೊದಲ ಎಸೆತದಲ್ಲೇ ಆಫ್ ಸೈಡ್​ನತ್ತ ಫೋರ್ ಬಾರಿಸಿದ ವೆಸ್ಲಿ ಬ್ಯಾರೆಸಿ.

    15 ಓವರ್​ಗಳ ಮುಕ್ತಾಯದ ವೇಳೆಗೆ 57 ರನ್ ಕಲೆಹಾಕಿದ ನೆದರ್​ಲೆಂಡ್ಸ್​ ತಂಡ.

    ಕ್ರೀಸ್​ನಲ್ಲಿ ವೆಸ್ಲಿ ಬ್ಯಾರೆಸಿ ಹಾಗೂ ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ ಬ್ಯಾಟಿಂಗ್.

    NED 57/2 (15)

      

  • 08 Nov 2023 07:25 PM (IST)

    ENG vs NED ICC World Cup 2023 Live Score: ಅರ್ಧಶತಕ ಪೂರೈಸಿದ ನೆದರ್​ಲೆಂಡ್ಸ್​

    ಮೊಯೀನ್ ಅಲಿ ಎಸೆದ 14ನೇ ಓವರ್​ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ವೆಸ್ಲಿ ಬ್ಯಾರೆಸಿ.

    5ನೇ ಎಸೆತದಲ್ಲಿ ಬ್ಯಾರೆಸಿ ಬ್ಯಾಟ್​ನಿಂದ ಮತ್ತೊಂದು ಫೋರ್​.

    ಈ ಫೋರ್​ನೊಂದಿಗೆ ಅರ್ಧಶತಕ ಪೂರೈಸಿದ ನೆದರ್​ಲೆಂಡ್ಸ್​.

    NED 52/2 (14)

      

  • 08 Nov 2023 07:11 PM (IST)

    ENG vs NED ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ ಕೇವಲ 23 ರನ್ ಕಲೆಹಾಕಿದ ನೆದರ್​ಲೆಂಡ್ಸ್​.

    ಮೊದಲ ಪವರ್​ಪ್ಲೇನಲ್ಲೇ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಇಂಗ್ಲೆಂಡ್.

    ಕ್ರೀಸ್​ನಲ್ಲಿ ವೆಸ್ಲಿ ಬ್ಯಾರೆಸಿ ಹಾಗೂ ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ ಬ್ಯಾಟಿಂಗ್.

    NED 23/2 (10)

    ನೆದರ್​ಲೆಂಡ್ಸ್​ಗೆ 340 ರನ್​ಗಳ ಗುರಿ ನೀಡಿರುವ  ಇಂಗ್ಲೆಂಡ್.

      

  • 08 Nov 2023 06:51 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ 2ನೇ ವಿಕೆಟ್ ಪತನ

    ಡೇವಿಡ್ ವಿಲ್ಲಿ ಎಸೆದ 6ನೇ ಓವರ್​ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್​ಗೆ ಕ್ಯಾಚ್ ನೀಡಿದ ಕಾಲಿನ್ ಅಕರ್ಮನ್ (0).

    ಇಂಗ್ಲೆಂಡ್ ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟ ಡೇವಿಡ್ ವಿಲ್ಲಿ.

    ಕ್ರೀಸ್​ನಲ್ಲಿ ವೆಸ್ಲಿ ಬ್ಯಾರೆಸಿ ಹಾಗೂ ಸೈಬ್ರಾಂಡ್ ಎಂಗೆಲ್ಬ್ರೆಕ್ಟ್ ಬ್ಯಾಟಿಂಗ್.

    NED 19/2 (6)

      

      

  • 08 Nov 2023 06:45 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ ಮೊದಲ ವಿಕೆಟ್ ಪತನ

    ಕ್ರಿಸ್ ವೋಕ್ಸ್ ಎಸೆದ 5ನೇ ಓವರ್​ನ 5ನೇ ಎಸೆತದಲ್ಲಿ ಮೊಯೀನ್ ಅಲಿಗೆ ಕ್ಯಾಚ್ ನೀಡಿದ ಮ್ಯಾಕ್ಸ್​ ಒಡೌಡ್ (5).

    5 ಓವರ್​ಗಳ ಮುಕ್ತಾಯದ ವೇಳೆಗೆ ನೆದರ್​ಲೆಂಡ್ಸ್ ತಂಡದ ಸ್ಕೋರ್ 12 ರನ್​ಗಳು.

    ಕ್ರೀಸ್​ನಲ್ಲಿ ವೆಸ್ಲಿ ಬ್ಯಾರೆಸಿ ಹಾಗೂ ಕಾಲಿನ್ ಅಕರ್ಮನ್ ಬ್ಯಾಟಿಂಗ್.

    NED 12/1 (5)

      

  • 08 Nov 2023 06:40 PM (IST)

    ENG vs NED ICC World Cup 2023 Live Score: ಮೊದಲ ಬೌಂಡರಿ

    ಡೇವಿಡ್ ವಿಲ್ಲಿ ಎಸೆದ 4ನೇ ಓವರ್​ನ 3ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ವೆಸ್ಲಿ ಬ್ಯಾರೆಸಿ.

    ಇದು ನೆದರ್​ಲೆಂಡ್ಸ್ ಇನಿಂಗ್ಸ್​ನ ಮೊದಲ ಬೌಂಡರಿ.

    ಕ್ರೀಸ್​ನಲ್ಲಿ ವೆಸ್ಲಿ ಬ್ಯಾರೆಸಿ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್.

    NED 8/0 (4)

      

  • 08 Nov 2023 06:28 PM (IST)

    ENG vs NED ICC World Cup 2023 Live Score: ನೆದರ್​​ಲೆಂಡ್ಸ್​ ಇನಿಂಗ್ಸ್​ ಆರಂಭ

    ಮೊದಲ ಓವರ್​ನಲ್ಲಿ ಕೇವಲ 2 ರನ್ ನೀಡಿದ ವೇಗಿ ಕ್ರಿಸ್ ವೋಕ್ಸ್​.

    ಕ್ರೀಸ್​ನಲ್ಲಿ ವೆಸ್ಲಿ ಬ್ಯಾರೆಸಿ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್.

    NED 2/0 (1)

    ನೆದರ್​ಲೆಂಡ್ಸ್​ಗೆ 340 ರನ್​ಗಳ ಗುರಿ ನೀಡಿರುವ  ಇಂಗ್ಲೆಂಡ್

      

  • 08 Nov 2023 05:52 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ಇನಿಂಗ್ಸ್​ ಅಂತ್ಯ

    50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದ ಇಂಗ್ಲೆಂಡ್

    ಇಂಗ್ಲೆಂಡ್ ಪರ 84 ಎಸೆತಗಳಲ್ಲಿ 108 ರನ್ ಬಾರಿಸಿ ಮಿಂಚಿದ ಅನುಭವಿ ಆಲ್​ ರೌಂಡರ್​ ಬೆನ್ ಸ್ಟೋಕ್ಸ್​.

    ಇಂಗ್ಲೆಂಡ್– 339/9 (50)

    ನೆದರ್​ಲೆಂಡ್ಸ್​ ತಂಡಕ್ಕೆ 340 ರನ್​ಗಳ ಕಠಿಣ ಗುರಿ ನೀಡಿದ ಇಂಗ್ಲೆಂಡ್.

      

  • 08 Nov 2023 05:48 PM (IST)

    ENG vs NED ICC World Cup 2023 Live Score: 8 ವಿಕೆಟ್ ಪತನ

    ಬಾಸ್ ಲೀಡೆ ಎಸೆದ 49ನೇ ಓವರ್​ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಔಟಾದ ಕ್ರಿಸ್ ವೋಕ್ಸ್​.

    45 ಎಸೆತಗಳಲ್ಲಿ 51 ರನ್ ಬಾರಿಸಿ ಮಿಂಚಿದ ಕ್ರಿಸ್ ವೋಕ್ಸ್​.

    ಕೊನೆಯ ಎಸೆತದಲ್ಲಿ ಡೇವಿಡ್ ವಿಲ್ಲಿ (6) ಕೂಡ ಔಟ್.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಗಸ್ ಅಟ್ಕಿಸನ್​ ಬ್ಯಾಟಿಂಗ್.

    ENG 327/8 (49)

      

  • 08 Nov 2023 05:39 PM (IST)

    ENG vs NED ICC World Cup 2023 Live Score: ಶತಕ ಪೂರೈಸಿದ ಬೆನ್ ಸ್ಟೋಕ್ಸ್​

    ಪಾಲ್ ವ್ಯಾನ್ ಮೀಕೆರೆನ್ ಎಸೆದ 48ನೇ ಓವರ್​ನ 5ನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಫೋರ್ ಬಾರಿಸಿದ ಬೆನ್ ಸ್ಟೋಕ್ಸ್​.

    ಈ ಫೋರ್​ನೊಂದಿಗೆ 78 ಎಸೆತಗಳಲ್ಲಿ ಶತಕ ಪೂರೈಸಿದ ಬೆನ್ ಸ್ಟೋಕ್ಸ್​.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಕ್ರಿಸ್ ವೋಕ್ಸ್​ ಬ್ಯಾಟಿಂಗ್.

    ENG 310/6 (48)

      

  • 08 Nov 2023 05:32 PM (IST)

    ENG vs NED ICC World Cup 2023 Live Score: ಸ್ಟೋಕ್ಸ್ ಸ್ಟ್ರೈಟ್ ಸಿಕ್ಸ್

    ಬಾಸ್ ಡಿ ಲೀಡೆ ಎಸೆದ 47ನೇ ಓವರ್​ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಬೆನ್ ಸ್ಟೋಕ್ಸ್​.

    4ನೇ ಎಸೆತದಲ್ಲಿ ಸ್ಟೋಕ್ಸ್​ ಬ್ಯಾಟ್​ನಿಂದ ಮತ್ತೊಂದು ಸ್ಟ್ರೈಟ್ ಹಿಟ್ ಫೋರ್.

    95 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿರುವ ಬೆನ್ ಸ್ಟೋಕ್ಸ್​.

    ENG 301/6 (47)

      

  • 08 Nov 2023 05:21 PM (IST)

    ENG vs NED ICC World Cup 2023 Live Score: ಸ್ಟೋಕ್ಸ್ ಸಿಡಿಲಬ್ಬರ

    ಆರ್ಯನ್ ದತ್ ಎಸೆದ 45ನೇ ಓವರ್​ನಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 24 ರನ್​ ಚಚ್ಚಿದ ಬೆನ್ ಸ್ಟೋಕ್ಸ್​.

    45 ಓವರ್​ಗಳ ಮುಕ್ತಾಯದ ವೇಳೆಗೆ 270 ರನ್ ಕಲೆಹಾಕಿದ ಇಂಗ್ಲೆಂಡ್.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಕ್ರಿಸ್ ವೋಕ್ಸ್​ ಬ್ಯಾಟಿಂಗ್.

    ENG 270/6 (45)

      

  • 08 Nov 2023 05:08 PM (IST)

    ENG vs NED ICC World Cup 2023 Live Score: ಅರ್ಧಶತಕ ಪೂರೈಸಿದ ಬೆನ್ ಸ್ಟೋಕ್ಸ್​

    ಬಾಸ್ ಡಿ ಲೀಡೆ ಎಸೆದ 43ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬೆನ್ ಸ್ಟೋಕ್ಸ್​.

    ಈ ಸಿಕ್ಸ್​ನೊಂದಿಗೆ 58 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಟೋಕ್ಸ್​.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಕ್ರಿಸ್ ವೋಕ್ಸ್​ ಬ್ಯಾಟಿಂಗ್.

    ENG 239/6 (43)

      

  • 08 Nov 2023 04:54 PM (IST)

    ENG vs NED ICC World Cup 2023 Live Score: ವೋಕ್ಸ್​ ಆಕರ್ಷಕ ಫೋರ್

    ಕಾಲಿನ್ ಅಕರ್ಮನ್ ಎಸೆದ 40ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಕ್ರಿಸ್ ವೋಕ್ಸ್​.

    40 ಓವರ್​ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 215 ರನ್​ಗಳು.

    6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ನೆದರ್​ಲೆಂಡ್ಸ್​ ಬೌಲರ್​ಗಳು.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ (44) ಹಾಗೂ ಕ್ರಿಸ್ ವೋಕ್ಸ್ (15)​ ಬ್ಯಾಟಿಂಗ್.

    ENG 215/6 (40)

      

  • 08 Nov 2023 04:36 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ತಂಡದ 6ನೇ ವಿಕೆಟ್ ಪತನ

    ಆರ್ಯನ್ ದತ್ ಎಸೆದ 36ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಮೊಯೀನ್ ಅಲಿ.

    15 ಎಸೆತಗಳಲ್ಲಿ ಕೇವಲ 4 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದ ಎಡಗೈ ದಾಂಡಿಗ ಮೊಯೀನ್ ಅಲಿ.

    ENG 192/6 (35.2)

      

  • 08 Nov 2023 04:33 PM (IST)

    ENG vs NED ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 191 ರನ್​ಗಳು.

    ಇದುವರೆಗೆ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ನೆದರ್​ಲೆಂಡ್ಸ್​.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್ (35)​ ಹಾಗೂ ಜೋಸ್ ಬಟ್ಲರ್ (4) ಬ್ಯಾಟಿಂಗ್.

    ಜಾನಿ ಬೈರ್​ಸ್ಟೋವ್, ಡೇವಿಡ್ ಮಲಾನ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ ಹಾಗೂ ಜೋ ರೂಟ್..ಔಟ್.

    ENG 191/5 (35)

      

  • 08 Nov 2023 04:10 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ತಂಡದ 5ನೇ ವಿಕೆಟ್ ಪತನ

    ಪಾಲ್ ವ್ಯಾನ್ ಮೀಕೆರನ್ ಎಸೆದ 31ನೇ ಓವರ್​ನ ಮೊದಲ ಎಸೆತದಲ್ಲೇ ಮಿಡ್ ಲಾಂಗ್ ಆಫ್​ನಲ್ಲಿ ಕ್ಯಾಚ್ ನೀಡಿದ ಜೋಸ್ ಬಟ್ಲರ್.

    11 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ನಿರ್ಗಮಿಸಿದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್.

    ENG 180/5 (31)

      

      

  • 08 Nov 2023 04:09 PM (IST)

    ENG vs NED ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 178 ರನ್​ಗಳು.

    4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ನೆದರ್​ಲೆಂಡ್ಸ್​ ಬೌಲರ್​ಗಳು.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್ (27)​ ಹಾಗೂ ಜೋಸ್ ಬಟ್ಲರ್ (5) ಬ್ಯಾಟಿಂಗ್.

    ENG 178/4 (30)

    ಜಾನಿ ಬೈರ್​ಸ್ಟೋವ್, ಡೇವಿಡ್ ಮಲಾನ್, ಹ್ಯಾರಿ ಬ್ರೂಕ್ ಹಾಗೂ ಜೋ ರೂಟ್..ಔಟ್.

      

      

  • 08 Nov 2023 03:49 PM (IST)

    ENG vs NED ICC World Cup 2023 Live Score: 25 ಓವರ್​ಗಳು ಮುಕ್ತಾಯ

    ಬಾಸ್ ಡಿ ಲೀಡೆ ಎಸೆದ 25ನೇ ಓವರ್​ನ ಮೊದಲ ಎಸೆತದಲ್ಲೇ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಬೆನ್ ಸ್ಟೋಕ್ಸ್​​.

    25 ಓವರ್​ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 155 ರನ್​ಗಳು.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಹ್ಯಾರಿ ಬ್ರೂಕ್ ಬ್ಯಾಟಿಂಗ್.

    ENG 155/3 (25)

    ಜಾನಿ ಬೈರ್​ಸ್ಟೋವ್, ಡೇವಿಡ್ ಮಲಾನ್ ಹಾಗೂ ಜೋ ರೂಟ್..ಔಟ್.

      

  • 08 Nov 2023 03:36 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ತಂಡದ 3ನೇ ವಿಕೆಟ್ ಪತನ

    22ನೇ ಓವರ್​ನ ಕೊನೆಯ ಎಸೆತದಲ್ಲಿ  ವ್ಯಾನ್ ಬೀಕ್ ಮಾಡಿದ ಅತ್ಯುತ್ತಮ ಫೀಲ್ಡಿಂಗ್​ನಿಂದ ರನೌಟ್ ಆಗಿ ಹೊರ ನಡೆದ ಡೇವಿಡ್ ಮಲಾನ್.

    74 ಎಸೆತಗಳಲ್ಲಿ 87 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಡೇವಿಡ್ ಮಲಾನ್.

    ENG 139/3 (22)

      

  • 08 Nov 2023 03:28 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ತಂಡದ 2ನೇ ವಿಕೆಟ್ ಪತನ

    ಲೋಗನ್ ವ್ಯಾನ್ ಬೀಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಜೋ ರೂಟ್.

    35 ಎಸೆತಗಳಲ್ಲಿ 28 ರನ್ ಬಾರಿಸಿ ಇನಿಂಗ್ಸ್​ ಅಂತ್ಯಗೊಳಿಸಿದ ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 135/2 (21)

      

      

  • 08 Nov 2023 03:27 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್

    20 ಓವರ್​ಗಳಲ್ಲಿ 132 ರನ್ ಕಲೆಹಾಕಿದ ಇಂಗ್ಲೆಂಡ್ ಬ್ಯಾಟರ್​ಗಳು.

    34 ಎಸೆತಗಳಲ್ಲಿ 28 ರನ್ ಬಾರಿಸಿರುವ ಜೋ ರೂಟ್.

    69 ಎಸೆತಗಳಲ್ಲಿ 84 ರನ್​ಗಳೊಂದಿಗೆ ಶತಕದತ್ತ ಮುನ್ನುಗ್ಗುತ್ತಿರುವ ಜೋ ರೂಟ್.

    ENG 132/1 (20)

    ಜಾನಿ ಬೈರ್​ಸ್ಟೋವ್ (15) ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾಗಿರುವ ನೆದರ್​ಲೆಂಡ್ಸ್​ ತಂಡ.

      

  • 08 Nov 2023 03:18 PM (IST)

    ENG vs NED ICC World Cup 2023 Live Score: 18 ಓವರ್​ಗಳು ಮುಕ್ತಾಯ

    18 ಓವರ್​ಗಳಲ್ಲಿ 117 ರನ್ ಬಾರಿಸಿರುವ ಇಂಗ್ಲೆಂಡ್ ಬ್ಯಾಟರ್​ಗಳು.

    75 ರನ್​ಗಳೊಂದಿಗೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಆರಂಭಿಕ ಆಟಗಾರ ಡೇವಿಡ್ ಮಲಾನ್.

    ಕ್ರೀಸ್​ನಲ್ಲಿ ಜೋ ರೂಟ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 117/1 (18)

      

  • 08 Nov 2023 02:57 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್

    13 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 82 ರನ್ ಕಲೆಹಾಕಿದ ಇಂಗ್ಲೆಂಡ್.

    ಅರ್ಧಶತಕ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಎಡಗೈ ದಾಂಡಿಗ ಡೇವಿಡ್ ಮಲಾನ್.

    ಇಂಗ್ಲೆಂಡ್ ಪರ ಕ್ರೀಸ್​ನಲ್ಲಿ ಜೋ ರೂಟ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 82/1 (13)

      

  • 08 Nov 2023 02:44 PM (IST)

    ENG vs NED ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 70 ರನ್​ಗಳು.

    ಜಾನಿ ಬೈರ್​ಸ್ಟೋವ್ (15) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ನೆದರ್​ಲೆಂಡ್ಸ್​.

    ಕ್ರೀಸ್​ನಲ್ಲಿ ಬಲಗೈ ಬ್ಯಾಟರ್​ ಜೋ ರೂಟ್ ಹಾಗೂ ಎಡಗೈ ದಾಂಡಿಗ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 70/1 (10)

      

  • 08 Nov 2023 02:35 PM (IST)

    ENG vs NED ICC World Cup 2023 Live Score: ಮಲಾನ್ ಭರ್ಜರಿ ಬ್ಯಾಟಿಂಗ್

    ಲೋಗನ್ ವ್ಯಾನ್ ಬೀಕ್ ಎಸೆದ 8ನೇ ಓವರ್​ನಲ್ಲಿ ಮೂರು ಫೋರ್​ಗಳನ್ನು ಬಾರಿಸಿ ಅಬ್ಬರಿಸಿದ ಡೇವಿಡ್ ಮಲಾನ್.

    ಈಗಾಗಲೇ 9 ಫೋರ್​ಗಳೊಂದಿಗೆ 45 ರನ್ ಕಲೆಹಾಕಿರುವ ಮಲಾನ್.

    ಕ್ರೀಸ್​ನಲ್ಲಿ ಜೋ ರೂಟ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 63/1 (8)

      

  • 08 Nov 2023 02:31 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ತಂಡದ ಮೊದಲ ವಿಕೆಟ್ ಪತನ

    ಆರ್ಯನ್ ದತ್ ಎಸೆದ 7ನೇ ಓವರ್​ನ ಕೊನೆಯ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಜಾನಿ ಬೈರ್​ಸ್ಟೋವ್.

    17 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಜಾನಿ ಬೈರ್​ಸ್ಟೋವ್.

    ನೆದರ್​ಲೆಂಡ್ಸ್​ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಆರ್ಯನ್ ದತ್.

    ENG 48/1 (7)

      

  • 08 Nov 2023 02:23 PM (IST)

    ENG vs NED ICC World Cup 2023 Live Score: 5 ಓವರ್​ಗಳು ಮುಕ್ತಾಯ

    5 ಓವರ್​ಗಳ ಮುಕ್ತಾಯದ ವೇಳೆಗೆ 42 ರನ್ ಕಲೆಹಾಕಿದ ಇಂಗ್ಲೆಂಡ್.

    ಮೊದಲ ಐದು ಓವರ್​ಗಳಲ್ಲಿ ದುಬಾರಿಯಾದ ನೆದರ್​ಲೆಂಡ್ಸ್​ ಬೌಲರ್​ಗಳು.

    ಕ್ರೀಸ್​ನಲ್ಲಿ ಬಲಗೈ ಬ್ಯಾಟರ್ ಜಾನಿ ಬೈರ್​ಸ್ಟೋವ್ ಹಾಗೂ ಎಡಗೈ ದಾಂಡಿಗ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 42/0 (5)

      

  • 08 Nov 2023 02:14 PM (IST)

    ENG vs NED ICC World Cup 2023 Live Score: ಡೇಂಜರಸ್ ಡೇವಿಡ್

    ಆರ್ಯನ್ ದತ್ ಎಸೆದ 3ನೇ ಓವರ್​ನಲ್ಲೂ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಡೇವಿಡ್ ಮಲಾನ್.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 29/0 (3)

      

  • 08 Nov 2023 02:12 PM (IST)

    ENG vs NED ICC World Cup 2023 Live Score: ಹ್ಯಾಟ್ರಿಕ್ ಫೋರ್

    ಲೋಗನ್ ವ್ಯಾನ್ ಬೀಕ್ ಎಸೆದ 2ನೇ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಡೇವಿಡ್ ಮಲಾನ್.

    2ನೇ ಓವರ್​ನಲ್ಲಿ ಒಟ್ಟು 16 ರನ್ ನೀಡಿದ ವ್ಯಾನ್ ಬೀಕ್.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 20/0 (2)

      

  • 08 Nov 2023 02:04 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ಇನಿಂಗ್ಸ್​ ಆರಂಭ

    ಆರ್ಯನ್ ದತ್ ಎಸೆದ ಮೊದಲ ಓವರ್​ನ 4ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಜಾನಿ ಬೈರ್​ಸ್ಟೋವ್.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 6/0 (1)

      

  • 08 Nov 2023 01:39 PM (IST)

    ENG vs NED ICC World Cup 2023 Live Score: ನೆದರ್​ಲೆಂಡ್ಸ್​ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ನೆದರ್​ಲೆಂಡ್ಸ್​ (ಪ್ಲೇಯಿಂಗ್ XI): ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗೆಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್.

  • 08 Nov 2023 01:39 PM (IST)

    ENG vs NED ICC World Cup 2023 Live Score: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಗಸ್ ಅಟ್ಕಿನ್ಸನ್, ಆದಿಲ್ ರಶೀದ್.

  • 08 Nov 2023 01:34 PM (IST)

    ENG vs NED ICC World Cup 2023 Live Score: ಟಾಸ್ ಗೆದ್ದ ಇಂಗ್ಲೆಂಡ್

    ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Nov 08,2023 1:33 PM

    Follow us
    ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
    ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
    ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
    ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
    ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
    ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
    Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
    Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
    ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
    ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
    ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
    ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
    ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
    ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
    ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
    ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್