ICC ODI Rankings: ಏಕದಿನ ರ‍್ಯಾಂಕಿಂಗ್​ನಲ್ಲಿ ಭಾರತೀಯ ಆಟಗಾರರದ್ದೇ ದರ್ಬಾರ್..!

ICC ODI Rankings 2023: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​ನಲ್ಲಿ ಇನ್ನೂ ಕೆಲ ಪಂದ್ಯಗಳು ಬಾಕಿಯಿದ್ದು, ಹೀಗಾಗಿ ಮುಂದಿನ 2 ವಾರಗಳಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಅದರಲ್ಲೂ ಟೀಮ್ ಇಂಡಿಯಾ ಆಟಗಾರರು ಶ್ರೇಯಾಂಕದಲ್ಲಿ ಮೇಲೆರುವುದನ್ನು ನಿರೀಕ್ಷಿಸಬಹುದು.

ICC ODI Rankings: ಏಕದಿನ ರ‍್ಯಾಂಕಿಂಗ್​ನಲ್ಲಿ ಭಾರತೀಯ ಆಟಗಾರರದ್ದೇ ದರ್ಬಾರ್..!
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on:Nov 08, 2023 | 10:12 PM

ಐಸಿಸಿ ಏಕದಿನ ಕ್ರಿಕೆಟ್​ನ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಒಟ್ಟು 7 ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲೂ ಏಕದಿನ ಕ್ರಿಕೆಟ್​ ಬ್ಯಾಟರ್​​ಗಳ ಶ್ರೇಯಾಂಕ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಶುಭ್​ಮನ್ ಗಿಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನಂಬರ್ 1 ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಈ ಬಾರಿಯ ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ ಆಟಗಾರರು ಶ್ರೇಯಾಂಕದಲ್ಲೂ ಮೇಲೇರಿದ್ದು, ಅದರಂತೆ ಬ್ಯಾಟರ್​ಗಳ ಟಾಪ್-1- ಪಟ್ಟಿಯಲ್ಲಿ ಮೂವರು ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಇನ್ನು ಬೌಲರ್​ಗಳ ಶ್ರೇಯಾಂಕದಲ್ಲಿ ನಾಲ್ವರು ಆಟಗಾರರು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.

ಇಲ್ಲಿ ಶುಭ್​ಮನ್ ಗಿಲ್ ನಂಬರ್ 1 ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 6ನೇ ಸ್ಥಾನ ಅಲಂಕರಿಸಿದ್ದಾರೆ.

ಹಾಗೆಯೇ ಬೌಲರ್​ಗಳ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನವನ್ನು ಅಲಂಕರಿಸಿದರೆ, ಕುಲ್ದೀಪ್ ಯಾದವ್ 4ನೇ ಸ್ಥಾನಕ್ಕೇರಿದ್ದಾರೆ. ಜಸ್​ಪ್ರೀತ್ ಬುಮ್ರಾ 8ನೇ ಸ್ಥಾನವನ್ನು ಕಾಯ್ದುಕೊಂಡರೆ, ಮೊಹಮ್ಮದ್ ಶಮಿ ಅಗ್ರ 10 ರಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಸಿ ಏಕದಿನ ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿ:

  1. ಶುಭ್​ಮನ್ ಗಿಲ್ (ಭಾರತ)- 830 ರೇಟಿಂಗ್
  2. ಬಾಬರ್ ಆಝಂ (ಪಾಕಿಸ್ತಾನ್)- 824 ರೇಟಿಂಗ್
  3. ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ)- 771 ರೇಟಿಂಗ್
  4. ವಿರಾಟ್ ಕೊಹ್ಲಿ (ಭಾರತ)- 770 ರೇಟಿಂಗ್
  5. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 743 ರೇಟಿಂಗ್
  6. ರೋಹಿತ್ ಶರ್ಮಾ (ಭಾರತ)- 739 ರೇಟಿಂಗ್
  7. ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ (ಸೌತ್ ಆಫ್ರಿಕಾ)- 730 ರೇಟಿಂಗ್
  8. ಹ್ಯಾರಿ ಟೆಕ್ಟರ್ (ಐರ್ಲೆಂಡ್)- 729 ರೇಟಿಂಗ್
  9. ಹೆನ್ರಿಕ್ ಕ್ಲಾಸೆನ್ (ಸೌತ್ ಆಫ್ರಿಕಾ)- 725 ರೇಟಿಂಗ್
  10. ಡೇವಿಡ್ ಮಲಾನ್ (ಇಂಗ್ಲೆಂಡ್)- 704 ರೇಟಿಂಗ್.

ಐಸಿಸಿ ಏಕದಿನ ಬೌಲರ್​ಗಳ ನೂತನ ಶ್ರೇಯಾಂಕ ಪಟ್ಟಿ:

  1. ಮೊಹಮ್ಮದ್ ಸಿರಾಜ್ (ಭಾರತ)- 709 ರೇಟಿಂಗ್
  2. ಕೇಶವ್ ಮಹಾರಾಜ್ (ಸೌತ್ ಆಫ್ರಿಕಾ)- 694 ರೇಟಿಂಗ್
  3. ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 662 ರೇಟಿಂಗ್
  4. ಕುಲ್ದೀಪ್ ಯಾದವ್ (ಭಾರತ)- 661 ರೇಟಿಂಗ್
  5. ಶಾಹೀನ್ ಅಫ್ರಿದಿ (ಪಾಕಿಸ್ತಾನ್)- 658 ರೇಟಿಂಗ್
  6. ಜೋಶ್ ಹ್ಯಾಝಲ್​ವುಡ್ (ಆಸ್ಟ್ರೇಲಿಯಾ)- 658 ರೇಟಿಂಗ್
  7. ರಶೀದ್ ಖಾನ್ (ಅಫ್ಘಾನಿಸ್ತಾನ್)- 655 ರೇಟಿಂಗ್
  8. ಜಸ್​ಪ್ರೀತ್ ಬುಮ್ರಾ (ಭಾರತ)- 654 ರೇಟಿಂಗ್
  9. ಟ್ರೆಂಟ್ ಬೌಲ್ಟ್ (ನ್ಯೂಝಿಲೆಂಡ್)- 638 ರೇಟಿಂಗ್
  10. ಮೊಹಮ್ಮದ್ ಶಮಿ (ಭಾರತ)- 635 ರೇಟಿಂಗ್

ಇದನ್ನೂ ಓದಿ: ಭರ್ಜರಿ ಸೆಂಚುರಿ ಸಿಡಿಸಿ ಮತ್ತೊಂದು ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ

ಏಕದಿನ ವಿಶ್ವಕಪ್​ನಲ್ಲಿ ಇನ್ನೂ ಕೆಲ ಪಂದ್ಯಗಳು ಬಾಕಿಯಿದ್ದು, ಹೀಗಾಗಿ ಮುಂದಿನ 2 ವಾರಗಳಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

Published On - 10:09 pm, Wed, 8 November 23