ಟೀಮ್ ಇಂಡಿಯಾ ಸೆಮಿ ಫೈನಲ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ
ICC World Cup 2023: ಈ ಬಾರಿಯ ವಿಶ್ವಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿದೆ. ಇಲ್ಲಿ ಪ್ರತಿ ತಂಡಗಳು 9 ಪಂದ್ಯಗಳನ್ನಾಡಲಿದೆ. ಹೀಗಾಗಿ ನೇರವಾಗಿ ಸೆಮಿಫೈನಲ್ಗೇರುವುದನ್ನು ಖಚಿತಪಡಿಸಿಕೊಳ್ಳಲು 7 ಪಂದ್ಯಗಳನ್ನು ಗೆಲ್ಲಲೇಬೇಕು.
ಏಕದಿನ ವಿಶ್ವಕಪ್ನ 29ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಭಾರತ ತಂಡ 100 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲೂ ಅಗ್ರಸ್ಥಾನ ಅಲಂಕರಿಸಿದೆ.
ಇದಾಗ್ಯೂ ಸೆಮಿಫೈನಲ್ ಎಂಟ್ರಿಯನ್ನು ಖಚಿತಪಡಿಸಿಕೊಂಡಿಲ್ಲ. ಅಂದರೆ ಈ ಬಾರಿಯ ವಿಶ್ವಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿದೆ. ಇಲ್ಲಿ ಪ್ರತಿ ತಂಡಗಳು 9 ಪಂದ್ಯಗಳನ್ನಾಡಲಿದೆ. ಹೀಗಾಗಿ ನೇರವಾಗಿ ಸೆಮಿಫೈನಲ್ಗೇರುವುದನ್ನು ಖಚಿತಪಡಿಸಿಕೊಳ್ಳಲು 7 ಪಂದ್ಯಗಳನ್ನು ಗೆಲ್ಲಲೇಬೇಕು.
ಇತ್ತ ಟೀಮ್ ಇಂಡಿಯಾದ ಮುಂದಿನ ಎದುರಾಳಿಗಳು ಶ್ರೀಲಂಕಾ, ಸೌತ್ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ತಂಡಗಳು. ಈ ಮೂರು ತಂಡಗಳೂ ಕೂಡ ಸೆಮಿಫೈನಲ್ ರೇಸ್ನಲ್ಲಿದೆ. ಹೀಗಾಗಿ ಈ ಮೂರು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಒಂದು ಪಂದ್ಯವನ್ನು ಗೆದ್ದುಕೊಂಡರೆ ಸೆಮಿಫೈನಲ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.
ಅಂದರೆ 7 ಗೆಲುವುಗಳ ಮೂಲಕ ಟೀಮ್ ಇಂಡಿಯಾ 14 ಅಂಕಗಳನ್ನು ಪಡೆದರೆ ಸೆಮಿಫೈನಲ್ ಆಡುವ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯುವುದು ಖಚಿತ. ಏಕೆಂದರೆ ಬಹುತೇಕ ತಂಡಗಳ 6 ಪಂದ್ಯಗಳು ಮುಗಿದಿದ್ದು, ಟೀಮ್ ಇಂಡಿಯಾವನ್ನು ಹೊರತುಪಡಿಸಿ ಯಾವುದೇ ತಂಡ 12 ಅಂಕಗಳನ್ನು ಸಂಪಾದಿಸಿಲ್ಲ.
ಇಲ್ಲಿ 6 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಸೌತ್ ಆಫ್ರಿಕಾ 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿರುವ ನ್ಯೂಝಿಲೆಂಡ್ 3ನೇ ಸ್ಥಾನದಲ್ಲಿದೆ. ಇನ್ನು ಆಸ್ಟ್ರೇಲಿಯಾ 6 ಪಂದ್ಯಗಳಲ್ಲಿ 4 ಜಯ ಸಾಧಿಸಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಮೂರು ಪಂದ್ಯಗಳಲ್ಲಿ ಭಾರತ ತಂಡವು ಒಂದು ಗೆಲುವು ಸಾಧಿಸಿದರೆ ಸಾಕು, ಟಾಪ್-4 ನಲ್ಲಿ ಸ್ಥಾನ ಪಡೆದು ಸೆಮಿಫೈನಲ್ ಆಡುವುದು ಕನ್ಫರ್ಮ್ ಆಗಲಿದೆ.
ರೇಸ್ನಲ್ಲಿ ಶ್ರೀಲಂಕಾ-ಅಫ್ಘಾನ್:
ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಇದುವರೆಗೆ 5 ಪಂದ್ಯಗಳನ್ನು ಮಾತ್ರ ಆಡಿದೆ. ಹೀಗಾಗಿ ಈ ಎರಡು ತಂಡಗಳಲ್ಲಿ ಒಂದು ತಂಡಕ್ಕೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಸಂಪಾದಿಸುವ ಅವಕಾಶವಿದೆ. ಇದೇ ಕಾರಣದಿಂದಾಗಿ 6 ಪಂದ್ಯ ಗೆದ್ದರೂ ಟೀಮ್ ಇಂಡಿಯಾ ಸೆಮಿಫೈನಲ್ ಸ್ಥಾನ ಕನ್ಫರ್ಮ್ ಆಗಿಲ್ಲ. ಒಂದು ವೇಳೆ ಅಫ್ಘಾನಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳು ಮುಂದಿನ 4 ಪಂದ್ಯಗಳಲ್ಲಿ ಒಂದೊಂದು ಮ್ಯಾಚ್ಗಳನ್ನು ಸೋತರೆ ಭಾರತ ತಂಡ ಸೆಮಿಫೈನಲ್ ಆಡುವುದು ಖಚಿತವಾಗಲಿದೆ.
ಭಾರತ ತಂಡ ಮುಂದಿನ ಪಂದ್ಯಗಳ ವೇಳಾಪಟ್ಟಿ:
- ನವೆಂಬರ್ 2: ಭಾರತ vs ಶ್ರೀಲಂಕಾ (ಮುಂಬೈ)
- ನವೆಂಬರ್ 5: ಭಾರತ vs ಸೌತ್ ಆಫ್ರಿಕಾ (ಕೊಲ್ಕತ್ತಾ)
- ನವೆಂಬರ್ 12: ಭಾರತ vs ನೆದರ್ಲೆಂಡ್ಸ್ (ಬೆಂಗಳೂರು)
ಇದನ್ನೂ ಓದಿ: Virat Kohli: ಒಂದೇ ಒಂದು ರನ್ ಗಳಿಸದೇ ದಾಖಲೆ ಬರೆದ ವಿರಾಟ್ ಕೊಹ್ಲಿ..!
Published On - 10:03 pm, Sun, 29 October 23