Australia squad: ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಬದಲಿ ಆಟಗಾರ ಎಂಟ್ರಿ

Australia vs West Indies Test: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಜನವರಿ 25 ರಿಂದ ಶುರುವಾಗಲಿದೆ. ಇನ್ನು ಫೆಬ್ರವರಿ 2 ರಿಂದ ದ್ವಿತೀಯ ಟೆಸ್ಟ್ ಪ್ರಾರಂಭವಾಗಲಿದೆ. ಮೊದಲ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಿದರೆ, 2ನೇ ಪಂದ್ಯವು ಗಬ್ಬಾದಲ್ಲಿ ನಡೆಯಲಿದೆ.

Australia squad: ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಬದಲಿ ಆಟಗಾರ ಎಂಟ್ರಿ
Matt Renshaw
Edited By:

Updated on: Jan 10, 2024 | 8:57 AM

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು (Australia Squad) ಪ್ರಕಟಿಸಲಾಗಿದೆ. 13 ಸದಸ್ಯರ ಈ ತಂಡದಲ್ಲಿ ಮ್ಯಾಟ್ ರೆನ್‌ಶಾ (Matt Renshaw) ಕಾಣಿಸಿಕೊಂಡಿದ್ದಾರೆ. ಇದರೊಂಇದಗೆ ಇತ್ತೀಚೆಗಷ್ಟೇ ವಿದಾಯ ಹೇಳಿದ್ದ ಡೇವಿಡ್ ವಾರ್ನರ್ (David Warner) ಸ್ಥಾನದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ಏಕೆಂದರೆ ಮ್ಯಾಟ್ ರೆನ್​ಶಾ ಆಯ್ಕೆಯಾಗಿರುವುದು ಡೇವಿಡ್ ವಾರ್ನರ್ ಸ್ಥಾನದಲ್ಲಿ. 2023 ರಲ್ಲಿ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಇದೀಗ ಮತ್ತೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಡಗೈ ದಾಂಡಿಗ-ಆರಂಭಿಕ ಆಟಗಾರ:

ಮ್ಯಾಟ್ ರೆನ್​ಶಾ ಎಡಗೈ ಬ್ಯಾಟರ್ ಎಂಬುದು ವಿಶೇಷ. ಅಂದರೆ ಲೆಫ್ಟ್ ಹ್ಯಾಂಡ್ ಬ್ಯಾಟರ್​ ವಾರ್ನರ್ ಸ್ಥಾನದಲ್ಲಿ ಎಡಗೈ ದಾಂಡಿಗನನ್ನೇ ಆಯ್ಕೆ ಮಾಡಿದ್ದಾರೆ. ಇನ್ನು ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲೂ ರೆನ್​ಶಾ ಆರಂಭಿಕನಾಗಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಪರ ಓಪನರ್ ಆಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಆಸ್ಟ್ರೇಲಿಯಾ ಪರ ಇದುವರೆಗೆ 14 ಟೆಸ್ಟ್ ಪಂದ್ಯಗಳನ್ನಾಡಿರುವ ಮ್ಯಾಟ್ ರೆನ್​ಶಾ 1 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 645 ರನ್ ಪೇರಿಸಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್​ ವಿರುದ್ಧದ ಸರಣಿಯಲ್ಲೂ 27 ವರ್ಷದ ರೆನ್​ಶಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ:

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಜನವರಿ 17 ರಿಂದ ಶುರುವಾಗಲಿದೆ. ಇನ್ನು  ಜನವರಿ 25 ರಿಂದ ದ್ವಿತೀಯ ಟೆಸ್ಟ್ ಪ್ರಾರಂಭವಾಗಲಿದೆ. ಮೊದಲ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಿದರೆ, 2ನೇ ಪಂದ್ಯವು ಗಬ್ಬಾದಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್.

ಇದನ್ನೂ ಓದಿ: ನನಗೆ RCB ಪರ ಆಡೋದು ಇಷ್ಟವಿರಲಿಲ್ಲ, ಬೆದರಿಸಿ ಆಡ್ಸಿದ್ರು: ಪ್ರವೀಣ್ ಕುಮಾರ್ ಗಂಭೀರ ಆರೋಪ

ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಅಲ್ಝಾರಿ ಜೋಸೆಫ್ (ಉಪನಾಯಕ), ತೇಜ್​ನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಅಲಿಕ್ ಅಥಾನಾಝ್, ಕವೆಮ್ ಹಾಡ್ಜ್, ಜಸ್ಟಿನ್ ಗ್ರೀವ್ಸ್, ಜೋಶುವಾ ಡಾಸಿಲ್ವಾ, ಅಕೀಮ್ ಜೋರ್ಡಾನ್, ಗುಡಾಕೇಶ್ ಮೋಟಿ, ಕೆಮರ್ ರೋಚ್, ಕೆವಿನ್ ಸಿಂಕ್ಲೇರ್, ಟೆವಿನ್ ಇಮ್ಲಾಚ್, ಶಮರ್ ಜೋಸೆಫ್, ಜಕಾರಿ ಮೆಕಾಸ್ಕಿ.

 

Published On - 6:43 am, Wed, 10 January 24