India vs Australia Highlights, WTC Final 2023 Day 5: ಭಾರತಕ್ಕೆ ಸೋಲು; ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ಆಸ್ಟ್ರೇಲಿಯಾ
India vs Australia Highlights today WTC Final 2023 Day 5 Match match scorecard in Kannada: ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಸತತ ಎರಡನೇ ಬಾರಿಗೆ ಸೋಲಿನ ಶಾಕ್ ಎದುರಾಗಿದೆ.
ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಸತತ ಎರಡನೇ ಬಾರಿಗೆ ಸೋಲಿನ ಶಾಕ್ ಎದುರಾಗಿದೆ. ಮತ್ತೊಮ್ಮೆ ಟೀಂ ಇಂಡಿಯಾ ತನ್ನ ಅನುಭವಿ ಬ್ಯಾಟ್ಸ್‌ಮನ್‌ಗಳ ವೈಫಲ್ಯವನ್ನು ಅನುಭವಿಸಬೇಕಾಯಿತು. ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನ ಕೊನೆಯ ದಿನ ಟೀಂ ಇಂಡಿಯಾ ಕೇವಲ 234 ರನ್‌ಗಳಿಗೆ ಆಲೌಟ್ ಆಗಿದ್ದು, 209 ರನ್‌ಗಳಿಂದ ಪಂದ್ಯ ಮತ್ತು ಪ್ರಶಸ್ತಿಯನ್ನು ಕಳೆದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಆಯಿತು.
LIVE NEWS & UPDATES
-
India vs Australia Live Score: ಭಾರತಕ್ಕೆ ಸೋಲು
ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನ ಕೊನೆಯ ದಿನ ಟೀಂ ಇಂಡಿಯಾ ಕೇವಲ 234 ರನ್‌ಗಳಿಗೆ ಆಲೌಟ್ ಆಗಿದ್ದು, 209 ರನ್‌ಗಳಿಂದ ಪಂದ್ಯ ಮತ್ತು ಪ್ರಶಸ್ತಿಯನ್ನು ಕಳೆದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಆಯಿತು.
-
India vs Australia Live Score: ಠಾಕೂರ್ ಔಟ್
ಓವಲ್‌ನಲ್ಲಿ ಸತತ 3 ಅರ್ಧಶತಕ ಗಳಿಸಿದ್ದ ಶಾರ್ದೂಲ್ಗೆ ಈ ಬಾರಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ನಾಥನ್ ಲಿಯಾನ್ ಎಸೆತದಲ್ಲಿ ಠಾಕೂರ್ ಎಲ್ಬಿಡಬ್ಲ್ಯೂ ಆದರು.
-
India vs Australia Live Score: ರಹಾನೆ ಔಟ್
ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ರೂಪದಲ್ಲಿ ಭಾರತ ತಂಡಕ್ಕೆ ಆರನೇ ಹೊಡೆತ ಬಿದ್ದಿದೆ. ತಂಡದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸುವ ಮೂಲಕ ರಹಾನೆ ಮಿಚೆಲ್ ಸ್ಟಾರ್ಕ್‌ಗೆ ಬಲಿಯಾಗಿದ್ದಾರೆ. ತಂಡದ ಸ್ಕೋರ್ 56.2 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 212 ರನ್ ಆಗಿದೆ.
India vs Australia Live Score: ರವೀಂದ್ರ ಜಡೇಜಾ ಔಟ್
ಭಾರತ ತಂಡ ಐದನೇ ವಿಕೆಟ್ ಕಳೆದುಕೊಂಡಿದೆ. ಕೊಹ್ಲಿ ಔಟಾದ ನಂತರ ರವೀಂದ್ರ ಜಡೇಜಾ ಕೂಡ ಒಂದು ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು. ಬೋಲ್ಯಾಂಡ್ ಅವರಿಗೆ ಖಾತೆ ತೆರೆಯಲೂ ಬಿಡಲಿಲ್ಲ. ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿದೆ.
India vs Australia Live Score: 49 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ ಕೊಹ್ಲಿ
ವಿರಾಟ್ ಕೊಹ್ಲಿ ರೂಪದಲ್ಲಿ ಭಾರತ ಕ್ರಿಕೆಟ್ ತಂಡ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಭಾರತ 179 ರನ್ ಗಳಿಸುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು.
India vs Australia Live Score: ಅಂತಿಮ ದಿನದ ಆಟ ಆರಂಭ
ಅಂತಿಮ ದಿನದ ಆಟ ಆರಂಭವಾಗಿದೆ. ಟೀಂ ಇಂಡಿಯಾ ಪರ ಕೊಹ್ಲಿ ಹಾಗೂ ರಹಾನೆ ಬ್ಯಾಟಿಂಗ್ ಆರಂಭಿಸಿದ್ದಾರೆ. ಭಾರತ ಗೆಲ್ಲಬೇಕೆಂದರೆ 89 ಓವರ್ಗಳಲ್ಲಿ 280 ರನ್ ಬಾರಿಸಬೇಕಿದೆ.
India vs Australia Live Score: ಕೊಹ್ಲಿ- ರಹಾನೆ ಮೇಲಿದೆ ದೊಡ್ಡ ಜವಬ್ದಾರಿ
ಟೀಂ ಇಂಡಿಯಾ ಅಜಿಂಕ್ಯ ರಹಾನೆ ಮತ್ತು ಕೊಹ್ಲಿ ಅವರಿಂದ ದೊಡ್ಡ ಜೊತೆಯಾಟವನ್ನು ನಿರೀಕ್ಷಿಸುತ್ತಿದೆ. ಇಬ್ಬರೂ ಅನುಭವಿ ಆಟಗಾರರು ಹೌದು. ಸದ್ಯ ಇವರಿಬ್ಬರು ನಾಲ್ಕನೇ ವಿಕೆಟ್‌ಗೆ ಅಜೇಯ 71 ರನ್‌ಗಳ ಜೊತೆಯಾಟವಾಡಿದ್ದಾರೆ. ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಪಾಲುದಾರಿಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.
Published On - Jun 11,2023 2:11 PM