ಏಕದಿನ ವಿಶ್ವಕಪ್ನ 24ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ (104) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಶತಕದ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತು. 400 ರನ್ಗಳ ಕಠಿಣ ಗುರಿ ಪಡೆದ ನೆದರ್ಲೆಂಡ್ಸ್ ತಂಡವು ಕೇವಲ 90 ರನ್ಗಳಿಗೆ ಆಲೌಟ್ ಆಗುವ ಮೂಲಕ 309 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿತು.
ಉಭಯ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 2 ಬಾರಿ ಮುಖಾಮುಖಿಯಾಗಿವೆ. ಈ ಮೂರು ಪಂದ್ಯಗಳಲ್ಲೂ ಆಸ್ಟ್ರೇಲಿಯಾ ತಂಡವೇ ಜಯ ಸಾಧಿಸಿದೆ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪಾ.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
21 ಓವರ್ಗಳಲ್ಲಿ 90 ರನ್ ಬಾರಿಸಿ ಆಲೌಟ್ ಆದ ನೆದರ್ಲೆಂಡ್ಸ್.
309 ರನ್ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ತಂಡ.
20 ಓವರ್ಗಳ ಮುಕ್ತಾಯದ ವೇಳೆಗೆ 87 ರನ್ ಕಲೆಹಾಕಿದ ನೆದರ್ಲೆಂಡ್ಸ್ ತಂಡ.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ಆರ್ಯನ್ ದತ್ ಬ್ಯಾಟಿಂಗ್.
ನೆದರ್ಲೆಂಡ್ಸ್ಗೆ ಗೆಲ್ಲಲು 30 ಓವರ್ಗಳಲ್ಲಿ 313 ರನ್ಗಳ ಗುರಿ.
19ನೇ ಓವರ್ನ 3ನೇ ಮತ್ತು 4ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಆ್ಯಡಂ ಝಂಪಾ.
3ನೇ ಎಸೆತದಲ್ಲಿ ವ್ಯಾನ್ ಬೀಕ್ ಎಲ್ಬಿಡಬ್ಲ್ಯೂ.
4ನೇ ಎಸೆತದಲ್ಲಿ ರೋಲೋಫ್ ವ್ಯಾನ್ ಡೆರ್ ಮೆರ್ವ್.
ಸೋಲಿನ ಸುಳಿಯಲ್ಲಿ ನೆದರ್ಲೆಂಡ್ಸ್ ತಂಡ.
15 ಓವರ್ಗಳ ಮುಕ್ತಾಯದ ವೇಳೆಗೆ 69 ರನ್ ಕಲೆಹಾಕಿದ ನೆದರ್ಲೆಂಡ್ಸ್.
5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ಮಿಚೆಲ್ ಮಾರ್ಷ್ ಎಸೆದ 14ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಬಾರಿಸಿದ ಸೈಬ್ರಾಂಡ್. ಬೌಂಡರಿ ಲೈನ್ನಲ್ಲಿ ಅದ್ಭುತ ಜಂಪಿಂಗ್ ಕ್ಯಾಚ್ ಹಿಡಿದ ಡೇವಿಡ್ ವಾರ್ನರ್.
ನೆದರ್ಲೆಂಡ್ಸ್ ತಂಡದ 5ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆದ 10ನೇ ಓವರ್ನ 2ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಕಾಲಿನ್ ಅಕರ್ಮನ್.
10 ಓವರ್ಗಳ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ತಂಡದ ಸ್ಕೋರ್ 48 ರನ್ಗಳು.
ಕ್ರೀಸ್ನಲ್ಲಿ ಬಾಸ್ ಲೀಡೆ ಹಾಗೂ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಬ್ಯಾಟಿಂಗ್.
ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಫೀಲ್ಡಿಂಗ್…ವಿಕ್ರಮಜಿತ್ ಸಿಂಗ್ ರನೌಟ್.
25 ಎಸೆತಗಳಲ್ಲಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಿಕ್ರಮಜಿತ್ ಸಿಂಗ್.
ಕ್ರೀಸ್ನಲ್ಲಿ ಕಾಲಿನ್ ಅಕರ್ಮನ್ ಹಾಗೂ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 5ನೇ ಓವರ್ನ 5ನೇ ಎಸೆತದಲ್ಲಿ ಬೌಲ್ಡ್ ಆದ ಮ್ಯಾಕ್ಸ್ ಓಡೌಡ್.
5 ಓವರ್ಗಳ ಮುಕ್ತಾಯದ ವೇಳೆಗೆ 33 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಕಾಲಿನ್ ಅಕರ್ಮನ್ ಹಾಗೂ ವಿಕ್ರಮಜಿತ್ ಸಿಂಗ್ ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆದ 2ನೇ ಓವರ್ನ 4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಜೋಶ್ ಹ್ಯಾಝಲ್‌ವುಡ್.
2 ಓವರ್ಗಳ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ತಂಡದ ಸ್ಕೋರ್ 18 ರನ್ಗಳು.
ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ವಿಕ್ರಮಜಿತ್ ಸಿಂಗ್.
ಕ್ರೀಸ್ನಲ್ಲಿ ಮ್ಯಾಕ್ಸ್ ಓಡೌಡ್ ಹಾಗೂ ವಿಕ್ರಮಜಿತ್ ಸಿಂಗ್ ಬ್ಯಾಟಿಂಗ್.
ನೆದರ್ಲೆಂಡ್ಸ್ ತಂಡಕ್ಕೆ 400 ರನ್ಗಳ ಗುರಿ ನೀಡಿದ ಆಸ್ಟ್ರೇಲಿಯಾ.
50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಆಸೀಸ್ ಪರ ಕೇವಲ 44 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 106 ರನ್ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
ನೆದರ್ಲೆಂಡ್ಸ್ ತಂಡಕ್ಕೆ 400 ರನ್ಗಳ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ
ಬಾಸ್ ಲೀಡೆ ಎಸೆದ 48ನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
ಈ ಸಿಕ್ಸ್ಗಳೊಂದಿಗೆ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್‌ವೆಲ್.
ಏಕದಿನ ವಿಶ್ವಕಪ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ಮ್ಯಾಕ್ಸ್‌ವೆಲ್ ಪಾಲು
ಬಾಸ್ ಡಿ ಲೀಡೆ ಎಸೆದ 47ನೇ ಓವರ್ನ 2ನೇ ಎಸೆತದಲ್ಲಿ ಸ್ವಿಚ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
ಈ ಸಿಕ್ಸ್ನೊಂದಿಗೆ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮ್ಯಾಕ್ಸಿ.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್.
45 ಓವರ್ಗಳ ಮುಕ್ತಾಯದ ವೇಳೆಗೆ 312 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್.
ಕೊನೆಯ 5 ಓವರ್ಗಳಲ್ಲಿ ಬೃಹತ್ ರನ್ ಕಲೆಹಾಕುವ ನಿರೀಕ್ಷೆಯಲ್ಲಿ ಆಸೀಸ್ ಬ್ಯಾಟರ್ಗಳು.
ಬಾಸ್ ಡಿ ಲೀಡೆ ಎಸೆದ 39ನೇ ಓವರ್ನ 3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಡೇವಿಡ್ ವಾರ್ನರ್.
ಈ ಫೋರ್ನೊಂದಿಗೆ 91 ಎಸೆತಗಳಲ್ಲಿ ಶತಕ ಪೂರೈಸಿದ ಎಡಗೈ ದಾಂಡಿಗ ಡೇವಿಡ್ ವಾರ್ನರ್.
ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಜೋಶ್ ಇಂಗ್ಲಿಸ್ (14).
ಬಾಸ್ ಡಿ ಲೀಡೆ ಎಸೆದ 37ನೇ ಓವರ್ನ ಮೊದಲ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಮಾರ್ನಸ್ ಲಾಬುಶೇನ್.
47 ಎಸೆತಗಳಲ್ಲಿ 62 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮಾರ್ನಸ್ ಲಾಬುಶೇನ್.
35 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 231 ರನ್ಗಳು.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ (95) ಹಾಗೂ ಮಾರ್ನಸ್ ಲಾಬುಶೇನ್ (50) ಬ್ಯಾಟಿಂಗ್.
ಕೊನೆಯ 15 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಆಸ್ಟ್ರೇಲಿಯಾ ಬ್ಯಾಟರ್ಗಳು.
ರೋಲೋಫ್ ವ್ಯಾನ್ ಡೆರ್ ಮೆರ್ವ್ ಎಸೆದ 34ನೇ ಓವರ್ನ ಮೊದಲ ಎಸೆತದಲ್ಲೇ ಸ್ವೀಪ್ ಶಾಟ್ ಮೂಲಕ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ನಸ್ ಲಾಬುಶೇನ್.
2ನೇ ಎಸೆತದಲ್ಲಿ ಮಾರ್ನಸ್ ಬ್ಯಾಟ್ನಿಂದ ಲೆಗ್ ಸೈಡ್ನತ್ತ ಫೋರ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಆರ್ಯನ್ ದತ್ ಎಸೆದ 30ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಮಾರ್ನಸ್ ಲಾಬುಶೇನ್,
30 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಮೊತ್ತ 192 ರನ್ಗಳು.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ (87) ಹಾಗೂ ಮಾರ್ನಸ್ ಲಾಬುಶೇನ್ (21) ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 166 ರನ್ಗಳು.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಮಿಚೆಲ್ ಮಾರ್ಷ್ (12) ಹಾಗೂ ಸ್ಟೀವ್ ಸ್ಮಿತ್ (71) ಔಟ್.
ಸ್ಪಿನ್ನರ್ ಆರ್ಯನ್ ದತ್ ಎಸೆದ 24ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಬಾರಿಸಿದ ಸ್ಟೀವ್ ಸ್ಮಿತ್…ರೋಲೋಫ್ ವ್ಯಾನ್ ಡೆರ್ ಮೆರ್ವೆ ಅದ್ಭುತ ಡೈವಿಂಗ್ ಕ್ಯಾಚ್…ಸ್ಮಿತ್ ಔಟ್.
68 ಎಸೆತಗಳಲ್ಲಿ 71 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಟೀವ್ ಸ್ಮಿತ್.
ಬಾಸ್ ಡಿ ಲೀಡೆ ಎಸೆದ 23ನೇ ಓವರ್ನಲ್ಲಿ 19 ರನ್ ಚಚ್ಚಿದ ಡೇವಿಡ್ ವಾರ್ನರ್.
ಮೂರು ಫೋರ್ ಹಾಗೂ 1 ಸಿಕ್ಸ್ ಸಿಡಿಸಿ ಅಬ್ಬರಿಸಿದ ಆಸ್ಟ್ರೇಲಿಯಾದ ಎಡಗೈ ದಾಂಡಿಗ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
ರೋಲೋಫ್ ವ್ಯಾನ್ ಡೆರ್ ಮೆರ್ವೆ ಎಸೆದ 22ನೇ ಓವರ್ನ ಮೊದಲ ಎಸೆತದಲ್ಲೇ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಡೇವಿಡ್ ವಾರ್ನರ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 124 ರನ್ ಕಲೆಹಾಕಿದ ಆಸ್ಟ್ರೇಲಿಯಾ ತಂಡ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
ಮಿಚೆಲ್ ಮಾರ್ಷ್ (12) ಔಟ್.
ವಿಕ್ರಮಜಿತ್ ಸಿಂಗ್ ಎಸೆದ 18ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಡೇವಿಡ್ ವಾರ್ನರ್.
2ನೇ ಎಸೆತದಲ್ಲಿ ವಾರ್ನರ್ ಬ್ಯಾಟ್ನಿಂದ ಸ್ಟ್ರೈಟ್ ಹಿಟ್ ಫೋರ್ .
ಈ ಫೋರ್ನೊಂದಿಗೆ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್.
ಕಾಲಿನ್ ಅಕರ್ಮನ್ ಎಸೆದ 17ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಡೇವಿಡ್ ವಾರ್ನರ್.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಡೇವಿಡ್ ವಾರ್ನರ್ ಹಾಗೂ ಬಲಗೈ ಬ್ಯಾಟರ್ ಸ್ಟೀವ್ ಸ್ಮಿತ್ ಬ್ಯಾಟಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 88 ರನ್ಗಳು.
ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ (12) ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಡೇವಿಡ್ ವಾರ್ನರ್ (45) ಹಾಗೂ ಬಲಗೈ ಬ್ಯಾಟರ್ ಸ್ಟೀವ್ ಸ್ಮಿತ್ (31) ಬ್ಯಾಟಿಂಗ್.
ವ್ಯಾನ್ ಮೀಕೆರನ್ ಎಸೆದ 13ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್.
ಆಸ್ಟ್ರೇಲಿಯಾ ತಂಡದಿಂದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
ಲೋಗನ್ ವ್ಯಾನ್ ಬೀಕ್ ಎಸೆದ 10ನೇ ಓವರ್ನ ಮೊದಲ ಮೂರು ಎಸೆತೆಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ಗಳನ್ನು ಬಾರಿಸಿದ ಸ್ಟೀವ್ ಸ್ಮಿತ್.
10 ಓವರ್ಗಳ ಮುಕ್ತಾಯದ ವೇಳೆಗೆ 66 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
ಮಿಚೆಲ್ ಮಾರ್ಷ್ (12) ಔಟ್.
ವ್ಯಾನ್ ಮೀಕೆರನ್ ಎಸೆದ 7ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಸ್ಟೀವ್ ಸ್ಮಿತ್.
ಕೊನೆಯ ಎಸೆತದಲ್ಲಿ ಸ್ಮಿತ್ ಬ್ಯಾಟ್ನಿಂದ ಆಕರ್ಷಕ ಕವರ್ ಡ್ರೈವ್ ಫೋರ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
5 ಓವರ್ಗಳ ಮುಕ್ತಾಯದ ವೇಳೆಗೆ 30 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಮಿಚೆಲ್ ಮಾರ್ಷ್ (9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
ಲೋಗನ್ ವ್ಯಾನ್ ಬೀಕ್ ಎಸೆದ 4ನೇ ಓವರ್ನ ಐದನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಥರ್ಟಿ ಯಾರ್ಡ್ನಲ್ಲೇ ಸುಲಭ ಕ್ಯಾಚ್ ನೀಡಿದ ಮಿಚೆಲ್ ಮಾರ್ಷ್.
15 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್.
ನೆದರ್ಲೆಂಡ್ಸ್ ತಂಡಕ್ಕೆ ಮೊದಲ ಯಶಸ್ಸು.
ಸ್ಪಿನ್ನರ್ ಆರ್ಯನ್ ದತ್ ಎಸೆದ 3ನೇ ಓವರ್ನಲ್ಲಿ 4 ಫೋರ್ಗಳನ್ನು ಬಾರಿಸಿದ ಡೇವಿಡ್ ವಾರ್ನರ್.
ಮೊದಲ ಎಸೆತದಲ್ಲಿ ಡಿಫೆನ್ಸ್ ಆಡಿದ ವಾರ್ನರ್ ಉಳಿದ 4 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ ಮತ್ತೆ ರಕ್ಷಣಾತ್ಮಕವಾಗಿ ಆಡಿದರು.
2ನೇ ಓವರ್ನಲ್ಲಿ ಕೇವಲ 3 ರನ್ ನೀಡಿದ ಕಾಲಿನ್ ಅಕರ್ಮನ್.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಆಸ್ಟ್ರೇಲಿಯಾ.
ಸ್ಪಿನ್ನರ್ ಆರ್ಯನ್ ದತ್ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಮಿಚೆಲ್ ಮಾರ್ಷ್.
ಇದು ಆಸ್ಟ್ರೇಲಿಯಾ ಇನಿಂಗ್ಸ್ನ ಮೊದಲ ಬೌಂಡರಿ.
5ನೇ ಎಸೆತದಲ್ಲಿ ಥರ್ಡ್ಮ್ಯಾನ್ ಬೌಂಡರಿಯತ್ತ ಮತ್ತೊಂದು ಪೋರ್ ಬಾರಿಸಿದ ಮಾರ್ಷ್.
ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.
ಬೆಂಗಳೂರು: ಬಿಎಸ್ವೈ ಹಣ ನೀಡಿ ಸರ್ಕಾರ ಬೀಳಿಸಿದರು ಅಂತಾ ನೀವೇ ಹೇಳಿದ್ರಿ. ವಿಧಾನಸಭೆಯಲ್ಲೇ ಹೆಚ್ಡಿ ಕುಮಾರಸ್ವಾಮಿಯವರು ಮಾತನಾಡಿದ ಸಾಕ್ಷಿಗಳು ಸಾಕಷ್ಟಿವೆ. ನಾವು ಕೊಟ್ಟ ಬೆಂಬಲವನ್ನು ನಿಮಗೆ ಉಳಿಸಿಕೊಳ್ಳಲು ಆಗಲಿಲ್ಲ. ಯಾರು ನಿಮ್ಮ ಸರ್ಕಾರ ತೆಗೆಯಲು ಶ್ರಮ ಹಾಕಿ ಯಶಸ್ವಿ ಆದ್ರಲ್ಲ, ಒಬ್ಬರು ಬೆಳಗಾವಿಯವರು, ಒಬ್ಬ ಚನ್ನಪಟ್ಟಣದವರು ಮತ್ತೊಬ್ಬರು ಬೆಂಗಳೂರಿನವರು, ಈಗ ಅವರನ್ನೇ ತಬ್ಬಿಕೊಂಡಿದ್ದೀರಾ? ಆಗ ಹಗಲೂ, ರಾತ್ರಿ ನಿಮ್ಮ ಜೊತೆಗೆ ನಿಂತವರು ಯಾರು? ಅಂದು ಸಿದ್ದರಾಮಯ್ಯ ನಿಮಗೆ ಬೇಷರತ್ ಆಶೀರ್ವಾದ ಮಾಡಿದ್ರು. ಹೈಕಮಾಂಡ್ ಹೇಳಿದರೂ ಅಂತಾ ಬೇಷರತ್ ಆಶೀರ್ವಾದ ಮಾಡಿದ್ರು. ಮಾನವೀಯತೆ ಬೇಡವೇ? ಉಪಕಾರ ಸ್ಮರಣೆ ಬೇಡವೇ? ಸರ್ಕಾರ ನೀವು ಉಳಿಸಿಕೊಳ್ಳಬೇಕಿತ್ತು. ಅಂದು ಸರ್ಕಾರ ಬೀಳಿಸಿದವರ ಜೊತೆಗೆ ಈಗ ಕೈ ಜೋಡಿಸಿದ್ದೀರಿ. ಸಿದ್ದರಾಮಯ್ಯಗೆ ಯಾಕೆ ಮೀರ್ ಸಾದಿಕ್ ಅಂತೀರಿ? ಬೆಳಗಾವಿ ಅಧಿವೇಶನದಲ್ಲಿ ದಾಖಲೆ ಸಮೇತ ಮಾತನಾಡಿ ಎಂದು ಹೆಚ್ ಡಿ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲಾಗಿದರು.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪಾ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Wed, 25 October 23