‘ದಿನಕ್ಕೆ 8 ಕೆಜಿ ಮಾಂಸ ತಿನ್ನುತ್ತಿರುವಂತೆ ತೋರುತ್ತಿದೆ’; ಬಾಬರ್ ಪಡೆಯ ಫಿಟ್ನೆಸ್ ಬಗ್ಗೆ ವಾಸಿಂ ಅಕ್ರಮ್ ಗರಂ..!
ICC World Cup 2023: ಪಾಕಿಸ್ತಾನದ ಖ್ಯಾತ ಆಟಗಾರ ಹಾಗೂ ಮಾಜಿ ನಾಯಕ ವಾಸಿಂ ಅಕ್ರಮ್ ಒಂದು ಹೆಜ್ಜೆ ಮುಂದಿಟ್ಟು ಪಾಕಿಸ್ತಾನಿ ಕ್ರಿಕೆಟಿಗರ ಫಿಟ್ನೆಸ್ ಬಗ್ಗೆ ಟೀಕೆ ಮಾಡಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ವಾಸಿಂ ಮಾಡಿರುವ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಪ್ರತಿಷ್ಠಿತ ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಥಿತಿ ಹದಗೆಟ್ಟಿದೆ. ಭಾರಿ ನಿರೀಕ್ಷೆಯೊಂದಿಗೆ ಮೆಗಾ ಟೂರ್ನಿಗೆ ಎಂಟ್ರಿ ಕೊಟ್ಟಿರುವ ತಂಡ ಸತತ ಸೋಲು ಎದುರಿಸುತ್ತಿದೆ. ಭಾರತ, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ಎದುರು ಸೋತಿದ್ದ ತಂಡವನ್ನು ಸೋಮವಾರ ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಅಫ್ಘಾನಿಸ್ತಾನ ತಂಡ (Pakistan vs Afghanistan) ಸೋಲಿಸಿತು. ಈ ಸೋಲನ್ನು ಅರಗಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ತಮ್ಮ ಕ್ರಿಕೆಟಿಗರ ಪ್ರದರ್ಶನವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಮಾಜಿ ಆಟಗಾರರು ಕೂಡ ಪಾಕಿಸ್ತಾನಿ ಕ್ರಿಕೆಟಿಗರ (Pakistan Cricket Team) ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಪಾಕಿಸ್ತಾನದ ಖ್ಯಾತ ಆಟಗಾರ ಹಾಗೂ ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram) ಒಂದು ಹೆಜ್ಜೆ ಮುಂದಿಟ್ಟು ಪಾಕಿಸ್ತಾನಿ ಕ್ರಿಕೆಟಿಗರ ಫಿಟ್ನೆಸ್ ಬಗ್ಗೆ ಟೀಕೆ ಮಾಡಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ವಾಸಿಂ ಮಾಡಿರುವ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಸೋಮವಾರ ಚೆನ್ನೈನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡ, ಕೆಳ ಶ್ರೇಯಾಂಕದ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡಿತು. ಆ ಬಳಿಕ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಬಿರುಗಾಳಿ ಎದ್ದಿದ್ದು, ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಅವರು ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಟಗಾರರ ಫಿಟ್‌ನೆಸ್ ಲೇವೆಲ್ ಅನ್ನು ಟೀಕಿಸಿದ್ದಾರೆ.
ಪಾಕ್ ತಂಡ ಮುಂದಿನ ಎಲ್ಲಾ ಪಂದ್ಯಗಳನ್ನು ಸೋಲಬೇಕು ಎಂದ ತಂಡದ ಮಾಜಿ ಆಟಗಾರ..!
50 ಓವರ್‌ಗಳಲ್ಲಿ 282 ರನ್ ಕಲೆಹಾಕಿತು
ವಾಸ್ತವವಾಗಿ ಉಭಯ ತಂಡಗಳ ನಡುವಿನ 8ನೇ ಮುಖಾಮುಖಿಯಲ್ಲಿ ಇದು ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನದ ಮೊದಲ ಸೋಲಾಗಿದೆ. ಬಾಬರ್ ಆಝಂ, ಅಬ್ದುಲ್ಲಾ ಶಫೀಕ್ ಮತ್ತು ಇಫ್ತಿಕಾರ್ ಅಹ್ಮದ್ ಮತ್ತು ಶಾದಾಬ್ ಖಾನ್ ಅವರ ಅರ್ಧಶತಕದ ನೆರವಿನಿಂದಾಗಿ ಚೆನ್ನೈನಲ್ಲಿನ ಟ್ರಿಕಿ ಪಿಚ್‌ನಲ್ಲಿ ಪಾಕಿಸ್ತಾನ 50 ಓವರ್‌ಗಳಲ್ಲಿ 282 ರನ್ ಕಲೆಹಾಕಿತು.
8 ವಿಕೆಟ್‌ಗಳ ಭಾರಿ ಜಯ
ಆದಾಗ್ಯೂ ಆಶ್ಚರ್ಯವಾಗುವಂತೆ, ಅಫ್ಘಾನಿಸ್ತಾನ ತಂಡ ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆ, 8 ವಿಕೆಟ್‌ಗಳ ಭಾರಿ ಜಯ ಸಾಧಿಸಿತು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಇಬ್ರಾಹಿಂ ಜದ್ರಾನ್ 87 ರನ್ ಗಳಿಸಿ ಔಟಾದರು. ಆದರೆ ರಹಮತ್ ಸಾಹ್ (77) ಮತ್ತು ಹಶ್ಮತುಲಾ ಶಾಹಿದಿ (48) ಅಫ್ಘಾನಿಸ್ತಾನ ಐತಿಹಾಸಿಕ ಗೆಲುವು ಸಾಧಿಸುವಂತೆ ಮಾಡಿದರು. ಇದು ಪಾಕ್ ತಂಡದಲ್ಲಿನ ದುರ್ಬಲ್ಯಗಳನ್ನು ಜಗಜ್ಜಾಹೀರು ಮಾಡಿತ್ತು. ಆ ಬಳಿಕ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್, ಬಾಬರ್ ಪಡೆಯ ಮೇಲೆ ವಾಕ್ಸಮರ ನಡೆಸಿದ್ದಾರೆ.
8 ಕೆಜಿ ಮಟನ್ ತಿನ್ನುತ್ತಿದ್ದಾರೆ
‘ಇದು ಮುಜುಗರದ ಸಂಗತಿ. ಕೇವಲ 2 ವಿಕೆಟ್ಗೆ 280 ಅಥವಾ 290 ರನ್ಗಳನ್ನು ಬೆನ್ನಟ್ಟುವುದು ಸುಲಭದ ಮಾತಲ್ಲ. ಚೆನ್ನೈನ ಪಿಚ್ ಅನ್ನು ಪಕ್ಕಕ್ಕಿಡಿ. ಆದರೆ ಪಾಕಿಸ್ತಾನಿ ಆಟಗಾರರ ಫೀಲ್ಡಿಂಗ್ ನೋಡಿ. ಅವರ ಫಿಟ್ನೆಸ್ ಮಟ್ಟ ಹೇಗಿದೆ ಎಂಬುದು ಅರ್ಥವಾಗುತ್ತದೆ. ಫಿಟ್ ಆಗದ ಕ್ರಿಕೆಟಿಗರ ಹೆಸರು ಹೇಳಿದರೆ ಅವರು ಅದನ್ನು ಇಷ್ಟಪಡುವುದಿಲ್ಲ. ಆದರೆ ಅವರ ಫಿಟ್ನೆಸ್ ಮಟ್ಟವನ್ನು ನೋಡಿದರೆ ಅವರು ಪ್ರತಿದಿನ 8 ಕೆಜಿ ಮಟನ್ ತಿನ್ನುತ್ತಿದ್ದಾರೆ ಎಂದು ತೋರುತ್ತಿದೆ’ ಎಂದಿದ್ದಾರೆ.
Wasim Akram raised many points!
– Rated this defeat as a embracing one. – Fitness of players. – PCB Chairmanship issues (Removal of Ramiz Raja). – Clueless captaincy in terms of reviews.#BabarAzam𓃵 #PakistanCricketTeam#PAKvsAFG #Captaincy pic.twitter.com/TRfKPxv4yS
— King Babar Azam Army (@ZimBabar_Azam) October 24, 2023
ಆಟಗಾರರು ಮಿಸ್ಬಾ ಅವರನ್ನು ದ್ವೇಷಿಸುತ್ತಿದ್ದರು
‘ಮಿಸ್ಬಾ-ಉಲ್-ಹಕ್ ಮುಖ್ಯ ಕೋಚ್ ಆಗಿದ್ದಾಗ ಪಾಕಿಸ್ತಾನದ ಆಟಗಾರರು ಫಿಟ್‌ನೆಸ್ ಪರೀಕ್ಷೆಗಳನ್ನು ಇಷ್ಟಪಡಲಿಲ್ಲ. ಆದರೆ ಆ ಪರೀಕ್ಷೆಗಳು ತಂಡಕ್ಕೆ ಮೂಲಭೂತ ಅಂಶಗಳನ್ನು ಸರಿಯಾಗಿ ಮಾಡಲು ಸಹಾಯ ಮಾಡಿದೆ. ಪರೀಕ್ಷೆಗಳು ಇರಬೇಕು, ವೃತ್ತಿಪರವಾಗಿ, ನೀವು ನಿಮ್ಮ ದೇಶಕ್ಕಾಗಿ ಆಡುತ್ತಿದ್ದೀರಿ, ನಿಮಗೆ ಸಂಬಳ ನೀಡಲಾಗುತ್ತಿದೆ. ನಾನು ಮಿಸ್ಬಾ ಅವರೊಂದಿಗೆ ಇದ್ದೇನೆ, ಅವರು ಕೋಚ್ ಆಗಿದ್ದಾಗ, ಅವರು ಆ ಮಾನದಂಡವನ್ನು ಹೊಂದಿದ್ದರು. ಆದರೆ ಆಟಗಾರರು ಮಿಸ್ಬಾ ಅವರನ್ನು ದ್ವೇಷಿಸುತ್ತಿದ್ದರು. ಆದರೆ, ಅದು ತಂಡಕ್ಕೆ ಕೆಲಸ ಮಾಡಿದೆ. ಆದರೀಗ ಫಿಟ್ನೆಸ್ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ತಂಡದ ಪ್ರದರ್ಶನ ಹೀಗಿದೆ’ ಎಂದು ದೂರಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ