AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ತಂಡ ಮುಂದಿನ ಎಲ್ಲಾ ಪಂದ್ಯಗಳನ್ನು ಸೋಲಬೇಕು ಎಂದ ತಂಡದ ಮಾಜಿ ಆಟಗಾರ..!

ICC World Cup 2023: ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಆದರೆ ಈ ನಡುವೆ ಪಾಕ್ ತಂಡ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಬಾರದು ಎಂಬ ಶಾಕಿಂಗ್ ಹೇಳಿಕೆಯನ್ನು ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್ ನೀಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ.

ಪಾಕ್ ತಂಡ ಮುಂದಿನ ಎಲ್ಲಾ ಪಂದ್ಯಗಳನ್ನು ಸೋಲಬೇಕು ಎಂದ ತಂಡದ ಮಾಜಿ ಆಟಗಾರ..!
ಪಾಕಿಸ್ತಾನ ತಂಡ
ಪೃಥ್ವಿಶಂಕರ
|

Updated on:Oct 25, 2023 | 9:51 AM

Share

ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಪಾಕಿಸ್ತಾನ ತಂಡಕ್ಕೆ ಯಾವುದೇ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಈ ಬಾರಿಯ ವಿಶ್ವಕಪ್ ಗೆಲ್ಲುವ ಪ್ರಮುಖ ತಂಡಗಳ ಪೈಕಿ ಸ್ಥಾನ ಪಡೆದು, ಟೂರ್ನಿಗೆ ಎಂಟ್ರಿಕೊಟ್ಟಿದ್ದ ಪಾಕ್ ಪಡೆ ಸೋಲಿನ ಸುಳಿಗೆ ಸಿಲುಕಿದೆ. ಅದರಲ್ಲೂ ಅಫ್ಘಾನಿಸ್ತಾನ (Pakistan vs Afghanistan) ವಿರುದ್ಧದ ಸೋಲು ಬಾಬರ್ ಪಡೆಗೆ ತೀವ್ರ ಆಘಾತ ನೀಡಿದೆ. ಒಂದೆಡೆ ಅಷ್ಟು ಬಲಿಷ್ಠವಲ್ಲದ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಸೋತಿರುವುದು ಟೀಕಕಾರರ ಬಾಯಿಗೆ ಆಹಾರವಾಗಿದ್ದರೆ, ಇನ್ನೊಂದೆಡೆ ಅಫ್ಘಾನ್ ವಿರುದ್ಧದ ಸೋಲು ಪಾಕ್ ತಂಡದ (Pakistan Cricket Team )  ಸೆಮಿಫೈನಲ್ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಸೋಲು ಪಾಕಿಸ್ತಾನಕ್ಕೆ ಸತತ ಮೂರನೇ ಸೋಲಾಗಿದ್ದು, ಭಾರತ, ಆಸ್ಟ್ರೇಲಿಯಾ ನಂತರ ಇದೀಗ ಅಫ್ಘಾನಿಸ್ತಾನ ವಿರುದ್ಧವೂ ಸೋಲು ಅನುಭವಿಸಿದೆ. ಹೀಗಾಗಿ, ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಆದರೆ ಈ ನಡುವೆ ಪಾಕ್ ತಂಡ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬಾರದು ಎಂಬ ಶಾಕಿಂಗ್ ಹೇಳಿಕೆಯನ್ನು ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್ ನೀಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ.

ಮುಂದಿನ ನಾಲ್ಕು ಪಂದ್ಯಗಳನ್ನು ಗೆಲ್ಲಬಾರದು

ಒಂದು ಅಂದಾಜಿನ ಪ್ರಕಾರ, ಮೊದಲ 5 ಪಂದ್ಯಗಳ ನಂತರ, ಬಾಬರ್ ಪಡೆ ಸೆಮಿಫೈನಲ್‌ಗೆ ಹೋಗುವ ಸಾಧ್ಯತೆ ಕೇವಲ 8 ಪ್ರತಿಶತದಷ್ಟು ಮಾತ್ರ. ಇದು ಪಾಕಿಸ್ತಾನಿ ತಂಡ ಮತ್ತು ಅದರ ಅಭಿಮಾನಿಗಳಿಗೆ ಇನ್ನಿಲ್ಲದ ನೋವು ನೀಡಿದೆ. ಇದೆಲ್ಲದರ ನಡುವೆ ಪಾಕಿಸ್ತಾನ ಪರ 268 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಕಮ್ರಾನ್ ಅಕ್ಮಲ್, ಪಾಕಿಸ್ತಾನದ ಟಿವಿ ಚಾನೆಲ್‌ನಲ್ಲಿ ಕುಳಿತು ತಂಡದ ಬಗ್ಗೆ ನೀಡಿರುವ ಹೇಳಿಕೆ ಪಾಕ್ ಕ್ರಿಕೆಟ್​ನಲ್ಲಿ ತಲ್ಲಣ ಮೂಡಿಸಿದೆ. ತಂಡದ ಬಗ್ಗೆ ಮಾತನಾಡಿರುವ ಅಕ್ಮಲ್, ‘ಪಾಕಿಸ್ತಾನ ಮುಂದಿನ ನಾಲ್ಕು ಪಂದ್ಯಗಳನ್ನು ಗೆಲ್ಲಬಾರದು’ ಎಂದಿದ್ದಾರೆ.

PAK vs AFG, ICC World Cup: ಅಫ್ಘಾನ್ ವಿರುದ್ಧ ಸೋತ ಪಾಕಿಸ್ತಾನಕ್ಕೆ ಸೆಮಿ ಫೈನಲ್ ತಲುಪುವ ಅವಕಾಶ ಇದೆಯೇ?

ಸುಧಾರಣೆ ತರಲು ಈ ಹೇಳಿಕೆ

ಪಾಕಿಸ್ತಾನ ಪರ 53 ಟೆಸ್ಟ್, 157 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿರುವ ಕಮ್ರಾನ್ ಅಕ್ಮಲ್ ಹೀಗೆ ಹೇಳಲು ಕಾರಣವೂ ಇದ್ದು, ಅವರ ಪ್ರಕಾರ ಪಾಕ್ ತಂಡ ಉಳಿದ ನಾಲ್ಕೂ ಪಂದ್ಯಗಳನ್ನು ಸೋತರೆ ಮುಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಸುಧಾರಣೆ ತರಬಹುದಾಗಿದೆ. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ಅನ್ನು ಸರಿಪಡಿಸಬೇಕಾದರೆ ಮುಂದಿನ ಯಾವುದೇ ಪಂದ್ಯವನ್ನು ಗೆಲ್ಲಬಾರದು ಮತ್ತು ಅಗ್ರ 4 ರೊಳಗೆ ತಲುಪಬಾರದು ಎಂಬುದಾಗಿದೆ.

ಕಮ್ರಾನ್ ಹೀಗೆ ಹೇಳಿದ ಕೂಡಲೇ ಶೋನಲ್ಲಿ ಕೋಲಾಹಲ ಉಂಟಾಯಿತು. ಈ ವಿಚಾರವಾಗಿ ಕಾರ್ಯಕ್ರಮದ ನಿರೂಪಕ ಕಮ್ರಾನ್ ಅಕ್ಮಲ್ ಜತೆ ಘರ್ಷಣೆಗೆ ಮುಂದಾದರು. ಪಾಕಿಸ್ತಾನ ಸೋಲುವುದನ್ನು ನೋಡಲು ಸಾಧ್ಯವಿಲ್ಲ. ನೀವು ಇದನ್ನು ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿದರು.

ಅಹಂ ಹೆಚ್ಚುತ್ತದೆ

ಆದರೆ, ತನ್ನ ಮಾತಿಗೆ ಸಮಜಾಯಿಶಿ ನೀಡಿದ ಕಮ್ರಾನ್, ಪಾಕ್ ತಂಡ ಇಲ್ಲಿಂದ ಗೆದ್ದು ಸೆಮಿಫೈನಲ್ ತಲುಪಿದರೆ ಅವರಲ್ಲಿ ಅಹಂ ಹೆಚ್ಚುತ್ತದೆ. ಆಗ ಯಾರೂ ಏನನ್ನೂ ಹೇಳುವುದಿಲ್ಲ ಮತ್ತು ಪಾಕಿಸ್ತಾನ ಕ್ರಿಕೆಟ್‌ನ ಸ್ಥಿತಿ ಹಾಗೆಯೇ ಇರುತ್ತದೆ. ಹೀಗಾಗಿ ಪಾಕ್ ತಂಡ ಮುಂದಿನ ಎಲ್ಲಾ ಪಂದ್ಯಗಳನ್ನು ಸೋತರೆ ಪಾಕ್ ಕ್ರಿಕೆಟ್‌ಗೆ ಸ್ವಲ್ಪ ಲಾಭ ಸಿಗಬಹುದು ಮತ್ತು ಸುಧಾರಣೆ ಕಾಣಬಹುದು ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:48 am, Wed, 25 October 23

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?