AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಯಂತೆ ಬಾಬರ್ ನಾಯಕತ್ವ ತ್ಯಜಿಸಲಿ ಎಂದ ಪಾಕಿಸ್ತಾನದ ಮಾಜಿ ಬ್ಯಾಟರ್..!

ICC World Cup 2023: ಪಾಕಿಸ್ತಾನದ ಹೀನಾಯ ಸೋಲಿನ ನಂತರ ಬಾಬರ್ ಅವರನ್ನು ಟೀಕಿಸಿದ ಅಲಿ, ಭಾರತಕ್ಕೆ ವಿರಾಟ್ ಕೊಹ್ಲಿ ಮಾಡಿದಂತೆ ಪಾಕಿಸ್ತಾನದ ನಾಯಕ ಕೂಡ ನಾಯಕತ್ವದಿಂದ ಕೆಳಗಿಳಿಯುವುದನ್ನು ಪರಿಗಣಿಸಬೇಕು ಎಂದು ಹೇಳಿದರು. ನಾಯಕತ್ವವನ್ನು ತೊರೆಯುವುದು ಬಾಬರ್ ಬ್ಯಾಟರ್ ಆಗಿ ತನ್ನ ಪ್ರದರ್ಶನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬಸಿತ್ ಹೇಳಿದ್ದಾರೆ.

ಕೊಹ್ಲಿಯಂತೆ ಬಾಬರ್ ನಾಯಕತ್ವ ತ್ಯಜಿಸಲಿ ಎಂದ ಪಾಕಿಸ್ತಾನದ ಮಾಜಿ ಬ್ಯಾಟರ್..!
ಬಾಬರ್ ಆಝಂ
ಪೃಥ್ವಿಶಂಕರ
|

Updated on:Oct 25, 2023 | 1:03 PM

Share

ಅಫ್ಘಾನಿಸ್ತಾನ ವಿರುದ್ಧದ ಸೋಲು ಪಾಕಿಸ್ತಾನ (Pakistan vs Afghanistan) ತಂಡ ಹಾಗೂ ತಂಡದ ನಾಯಕ ಬಾಬರ್ ಆಝಂಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕೆಳ ಶ್ರೇಯಾಂಕಿತ ತಂಡದ ವಿರುದ್ಧ ಪಾಕ್ ತಂಡ ಸೋತಿದ್ದಕ್ಕೆ ತಂಡದ ಆಟಗಾರರ ಮೇಲೆ ನಿರಂತರವಾಗಿ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಅದರಲ್ಲೂ ತಂಡವನ್ನು ಸತತ ಮೂರು ಸೋಲುಗಳಿಗೆ ದೂಡಿದಕ್ಕಾಗಿ ನಾಯಕ ಬಾಬರ್ ಆಝಂರನ್ನು (Babar Azam) ಗುರಿಯಾಗಿಸಿಕೊಂಡು ಟೀಕಿಸಲಾಗುತ್ತಿದೆ. ಅಲ್ಲದೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಕೂಗು ಕೂಡ ಜೋರಾಗಿ ಕೇಳಿಬರುತ್ತಿದೆ. ಈ ನಡುವೆ ಅಫ್ಘಾನಿಸ್ತಾನ ವಿರುದ್ಧದ ಹೀನಾಯ ಸೋಲಿನ ನಂತರ ಬಾಬರ್ ನಾಯಕತ್ವ ತ್ಯಜಿಸಿ ಬ್ಯಾಟಿಂಗ್‌ನತ್ತ ಗಮನ ಹರಿಸುವಂತೆ ಪಾಕಿಸ್ತಾನದ ಮಾಜಿ ಬ್ಯಾಟರ್ ಬಸಿತ್ ಅಲಿ (Basit Ali) ಒತ್ತಾಯಿಸಿದ್ದಾರೆ.

ಅಫ್ಘಾನಿಸ್ತಾನದ ವಿರುದ್ಧ ಸೋತ ನಂತರ ಪಾಕಿಸ್ತಾನದ ವಿಶ್ವಕಪ್ ಅಭಿಯಾನಕ್ಕೆ ಸರಿಯಾದ ಹೊಡೆತಬಿದ್ದಿದೆ. ಏಕೆಂದರೆ ಪಾಕ್ ತಂಡ ಈಗ ಸತತವಾಗಿ ಮೂರು ಸೋಲುಗಳನ್ನು ಅನುಭವಿಸಿದೆ. ಹೀಗಾಗಿ ಬಾಬರ್ ಪಡೆಯ ಸೆಮಿಫೈನಲ್ ಅವಕಾಶ ಅಪಾಯದಲ್ಲಿದೆ. ಮೆನ್ ಇನ್ ಗ್ರೀನ್ ಇನ್ನೂ ಸೆಮಿ-ಫೈನಲ್‌ನ ರೇಸ್‌ನಿಂದ ಹೊರಗುಳಿಯದಿದ್ದರೂ, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ, ಬಾಬರ್ ತಂಡ ತಮ್ಮ ಉಳಿದ ನಾಲ್ಕು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

‘ದಿನಕ್ಕೆ 8 ಕೆಜಿ ಮಾಂಸ ತಿನ್ನುತ್ತಿರುವಂತೆ ತೋರುತ್ತಿದೆ’; ಬಾಬರ್ ಪಡೆಯ ಫಿಟ್ನೆಸ್ ಬಗ್ಗೆ ವಾಸಿಂ ಅಕ್ರಮ್ ಗರಂ..!

ಬಾಬರ್ ಅವರನ್ನು ಟೀಕಿಸಿದ ಅಲಿ

ಪಾಕಿಸ್ತಾನದ ಹೀನಾಯ ಸೋಲಿನ ನಂತರ ಬಾಬರ್ ಅವರನ್ನು ಟೀಕಿಸಿದ ಅಲಿ, ಭಾರತಕ್ಕೆ ವಿರಾಟ್ ಕೊಹ್ಲಿ ಮಾಡಿದಂತೆ ಪಾಕಿಸ್ತಾನದ ನಾಯಕ ಕೂಡ ನಾಯಕತ್ವದಿಂದ ಕೆಳಗಿಳಿಯುವುದನ್ನು ಪರಿಗಣಿಸಬೇಕು ಎಂದು ಹೇಳಿದರು. ನಾಯಕತ್ವವನ್ನು ತೊರೆಯುವುದು ಬಾಬರ್ ಬ್ಯಾಟರ್ ಆಗಿ ತನ್ನ ಪ್ರದರ್ಶನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬಸಿತ್ ಹೇಳಿದ್ದಾರೆ.

ಕೊಹ್ಲಿಯಂತೆ ನಾಯಕತ್ವ ತ್ಯಜಿಸಬೇಕು

ಬಾಬರ್ ಆಜಮ್ ತುಂಬಾ ಒಳ್ಳೆಯ ಬ್ಯಾಟರ್, ಹೀಗಾಗಿ ಆತ ವಿರಾಟ್ ಕೊಹ್ಲಿಯಂತೆ ನಾಯಕತ್ವ ತ್ಯಜಿಸಬೇಕು ಎಂದು ನಾನು ಒಂದು ವರ್ಷದ ಹಿಂದೆ ನನ್ನ ಚಾನೆಲ್‌ನಲ್ಲಿ ಹೇಳಿದ್ದೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಪ್ರದರ್ಶನವನ್ನು ನೋಡಿ. ಹಾಗಾಗಿ ನಾಯಕತ್ವದಿಂದ ಕೆಳಗಿಳಿದರೆ ಬಾಬರ್ ಅವರ ಪ್ರದರ್ಶನವು ಖಂಡಿತವಾಗಿಯೂ ಉತ್ತಮಗೊಳ್ಳುತ್ತದೆ.

ನಾನು ದೇಶದ್ರೋಹಿ ಎಂದಿದ್ದರು

ಆದರೆ ನಮಗೆಲ್ಲರಿಗೂ ತಿಳಿದಿರುವಂತೆ, ನಾನು ಈ ಮಾತನ್ನು ಹೇಳಿದಾಗ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಜನರು ನನ್ನ ಮಾತುಗಳನ್ನು ತಿರುಚಿದರು. ನನಗೆ ಬಾಬರ್ ಆಝಂ ಇಷ್ಟವಿಲ್ಲ. ಹೀಗಾಗಿ ನಾನು ಈ ರೀತಿಯ ಹೇಳಿಕೆ ನೀಡುತ್ತಿದ್ದೇನೆ. ನಾನು ದೇಶದ್ರೋಹಿ ಎಂದು ನನ್ನ ವಿರುದ್ಧ ವಾಕ್ಸಮರ ನಡೆಸಿದ್ದರು.ಆದರೀಗ ಅಂದು ನಾನು ಹೇಳಿದ್ದು ನಿಜ ಎಂಬುದು ಕೆಲವರಿಗೆ ಅರ್ಥವಾಗುತ್ತಿದೆ ಎಂದಿದ್ದಾರೆ.

ಮತ್ತೆ ಲಯಕ್ಕೆ ಮರಳಿದ ವಿರಾಟ್

2021 ರಲ್ಲಿ ಟಿ20 ವಿಶ್ವಕಪ್‌ನಲ್ಲಿ ತಂಡದ ನಿರಾಶಾದಾಯಕ ಅಭಿಯಾನದ ನಂತರ ಕೊಹ್ಲಿ ಭಾರತದ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದರು. ನಂತರ ಏಕದಿನ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ, 2022 ರಲ್ಲಿ ಸ್ವತಃ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು. ಕೊಹ್ಲಿ ತಮ್ಮ ನಾಯಕತ್ವವನ್ನು ತೊರೆಯುವ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್​ನಿಂದಾಗಿ ಭಾರಿ ಟೀಕೆಗೆ ಒಳಗಾಗಿದ್ದರು. ಆದರೆ ಆ ಬಳಿಕ ತಮ್ಮ ಹಳೆಯ ಲಯಕ್ಕೆ ಮರಳಿದ ವಿರಾಟ್, ಒಂದರ ಹಿಂದೆ ಒಂದರಂತೆ ದಾಖಲೆ ಬರೆಯುತ್ತಿದ್ದಾರೆ.

ಪ್ರಸ್ತುತ 2023 ರ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಇದುವರೆಗೆ ಐದು ಪಂದ್ಯಗಳಿಂದ 118 ರ ಸರಾಸರಿಯಲ್ಲಿ ಮತ್ತು 90 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 354 ರನ್‌ ಕಲೆಹಾಕಿದ್ದಾರೆ. ಕೊಹ್ಲಿ ಪ್ರಸ್ತುತ ಪಂದ್ಯಾವಳಿಯ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Wed, 25 October 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ