Aus vs Pak ICC World Cup Highlights: ಆಸೀಸ್ ಸಾಂಘಿಕ ಆಟಕ್ಕೆ ಮಣಿದ ಪಾಕಿಸ್ತಾನ
Aus vs Pak ICC World Cup 2023 Highlights in Kannada:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 62 ರನ್‌ಗಳ ಜಯ ಸಾಧಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 62 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತು. ಆಸೀಸ್ ಪರ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ತಲಾ ಶತಕ ಸಿಡಿಸಿ ಮಿಂಚಿದರು. ಆಸೀಸ್ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭದ ಹೊರತಾಗಿಯೂ 305 ರನ್ ಗಳಿಸುವಷ್ಟರಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 62 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
LIVE NEWS & UPDATES
-
ಪಾಕ್ ತಂಡಕ್ಕೆ ಸತತ 2ನೇ ಸೋಲು
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ನಿಡಿದ 368 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 305 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ಪರ ಇಮಾಮ್ ಉಲ್ ಹಕ್ ಮತ್ತು ಅಬ್ದುಲ್ಲಾ ಶಫೀಕ್ ಅರ್ಧಶತಕ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆಸೀಸ್ ಪರ ಬೌಲಿಂಗ್ನಲ್ಲಿ ಮಿಂಚಿದ ಆ್ಯಡಮ್ ಝಂಪಾ 4 ವಿಕೆಟ್ ಪಡೆದರು.
-
ನವಾಜ್ ಔಟ್
ಆಡಮ್ ಝಂಪಾ ತನ್ನ ಎರಡನೇ ಸ್ಪೆಲ್ನಲ್ಲಿ ಪಾಕಿಸ್ತಾನ ತಂಡಕ್ಕೆ ಮೂರು ಶಾಕ್ ನೀಡಿದ್ದಾರೆ. ಆಸ್ಟ್ರೇಲಿಯಕ್ಕೆ ಕಂಟಕವಾಗಿದ್ದ ಎಲ್ಲ ಬ್ಯಾಟ್ಸ್‌ಮನ್‌ಗಳನ್ನು ಒಬ್ಬೊಬ್ಬರಾಗಿ ವಾಪಸ್ ಕಳುಹಿಸಿದ್ದಾರೆ. ಇದೀಗ 14 ರನ್ ಗಳಿಸಿದ್ದ ಮೊಹಮ್ಮದ್ ನವಾಜ್ ಅವರನ್ನು ಪೆವಿಲಿಯನ್ಗಟ್ಟಿದ್ದಾರೆ.
-
ಏಳನೇ ವಿಕೆಟ್ ಪತನ
ಪಾಕಿಸ್ತಾನ 277 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡಿದೆ. ಜೋಶ್ ಹ್ಯಾಜಲ್‌ವುಡ್ ಓಸಾಮ್ ಮಿರ್ ಅವರನ್ನು ಪೆವಿಲಿಯನ್ಗಟ್ಟಿದ್ದಾರೆ. ಮೀರ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇನ್ನು ನವಾಜ್ ಜೊತೆಗೆ ಶಾಹೀನ್ ಅಫ್ರಿದಿ ಕ್ರೀಸ್‌ನಲ್ಲಿದ್ದಾರೆ.
ಝಂಪಾಗೆ 2 ವಿಕೆಟ್
ಆಸ್ಟ್ರೇಲಿಯನ್ ತಂಡಕ್ಕೆ ಆಡಮ್ ಝಂಪಾ ಬ್ಯಾಕ್ ಟು ಬ್ಯಾಕ್ ವಿಕೆಟ್ ನೀಡಿದ್ದಾರೆ. ಕೊನೆಯ ಎರಡು ಓವರ್‌ಗಳಲ್ಲಿ ಎರಡು ದೊಡ್ಡ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೊದಲು ಇಫ್ತಿಕರ್ ಅಹ್ಮದ್ ಮತ್ತು ನಂತರ 46 ರನ್ ಗಳಿಸಿದ್ದ ಮೊಹಮ್ಮದ್ ರಿಜ್ವಾನ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದ್ದಾರೆ.
ರಿಜ್ವಾನ್ ಔಟ್
ಪಾಕಿಸ್ತಾನ 274 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡಿದೆ. ಮೊಹಮ್ಮದ್ ರಿಜ್ವಾನ್ 40 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. ಆಡಮ್ ಝಂಪಾ ಈ ವಿಕೆಟ್ ಪಡೆದರು. ಒಸಾಮಾ ಮಿರ್ ಮತ್ತು ಮೊಹಮ್ಮದ್ ನವಾಜ್ ಕ್ರೀಸ್‌ನಲ್ಲಿದ್ದಾರೆ. ಆದರೆ, ಈಗ ಆಸ್ಟ್ರೇಲಿಯಾ ಗೆಲುವು ಬಹುತೇಕ ಖಚಿತವಾಗಿದೆ.
250 ರನ್ ಪೂರ್ಣ
ಪಾಕ್ ತಂಡದ 250 ರನ್ ಪೂರ್ಣಗೊಂಡಿದೆ. 37ನೇ ಓವರ್ನಲ್ಲಿ ಇಫ್ತಿಕರ್ ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು 250 ರನ್‌ಗಳ ಗಡಿ ದಾಟಿಸಿದರು.
ಸೌದ್ ಶಕೀಲ್ ಔಟ್
ಸೌದ್ ಶಕೀಲ್ ಪ್ಯಾಟ್ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ. ಸೌದ್ ಶಕೀಲ್ 30 ರನ್ ಬಾರಿಸಿ ಮಾರ್ಕಸ್ ಸ್ಟೊಯಿನಿಸ್ಗೆ ಕ್ಯಾಚ್ ನೀಡಿ ಔಟಾದರು.
200 ರನ್ ಪೂರ್ಣ
ಮೂರು ವಿಕೆಟ್ ನಷ್ಟಕ್ಕೆ ಪಾಕಿಸ್ತಾನ ಸ್ಕೋರ್ 200ರ ಗಡಿ ದಾಟಿದೆ. 35 ಓವರ್‌ಗಳಲ್ಲಿ ಪಾಕಿಸ್ತಾನ ಸ್ಕೋರ್ 232/4.
ಬಾಬರ್ ಔಟ್
ಪಾಕಿಸ್ತಾನದ ನಾಯಕ ಬಾಬರ್, ಆಡಮ್ ಝಂಪಾ ಬಲೆಗೆ ಬಿದ್ದಿದ್ದಾರೆ. 200 ರನ್‌ಗಳ ಅಂತರದಲ್ಲಿ ಪಾಕಿಸ್ತಾನ ತಂಡಕ್ಕೆ ಮೂರನೇ ಹೊಡೆತ ಬಿದ್ದಿದೆ. ಈಗ ಸಂಪೂರ್ಣ ಜವಾಬ್ದಾರಿ ಮೊಹಮ್ಮದ್ ರಿಜ್ವಾನ್ ಮೇಲಿದೆ.
ಎರಡನೇ ವಿಕೆಟ್ ಪತನ
ಪಾಕಿಸ್ತಾನದ ಎರಡನೇ ವಿಕೆಟ್ 154 ರನ್‌ಗಳಿಗೆ ಪತನವಾಯಿತು. ಮಾರ್ಕಸ್ ಸ್ಟೊಯಿನಿಸ್ ಅವರು ಆಸ್ಟ್ರೇಲಿಯಾಕ್ಕೆ ಮತ್ತೊಂದು ವಿಕೆಟ್ ನೀಡಿದರು. ಇಮಾಮ್-ಉಲ್-ಹಕ್, 70 ರನ್‌ಗಳಿಗೆ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚಿತ್ತು ಔಟಾದರು. ಬಾಬರ್ ಅಜಂ ಜೊತೆಗೆ ಮೊಹಮ್ಮದ್ ರಿಜ್ವಾನ್ ಕ್ರೀಸ್‌ನಲ್ಲಿದ್ದಾರೆ.
ಮೊದಲ ವಿಕೆಟ್ ಪತನ
134 ರನ್‌ಗಳಾಗುವಷ್ಟರಲ್ಲಿ ಪಾಕಿಸ್ತಾನದ ಮೊದಲ ವಿಕೆಟ್ ಪತನವಾಗಿದೆ. ಅಬ್ದುಲ್ಲಾ ಶಫೀಕ್ 64 ರನ್ ಗಳಿಸಿ ಔಟಾದರು. ಬಾಬರ್ ಆಜಮ್ ಇಮಾಮ್ ಜೊತೆ ಕ್ರೀಸ್‌ನಲ್ಲಿದ್ದಾರೆ.
ಇಮಾಮ್-ಶಫೀಕ್ ಅರ್ಧ ಶತಕ
ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಅರ್ಧಶತಕ ಪೂರೈಸಿದ್ದಾರೆ. ಇಬ್ಬರೂ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು, ಪಾಕ್ ತಂಡ ದಾಖಲೆಯ ಗುರಿ ಬೆನ್ನಟ್ಟುವತ್ತ ಸಾಗುತ್ತಿದೆ. 19 ಓವರ್‌ಗಳ ನಂತರ ಪಾಕಿಸ್ತಾನ ಸ್ಕೋರ್ 116/0.
ಕಮ್ಮಿನ್ಸ್ ದುಬಾರಿ
12 ಓವರ್ ಬೌಲ್ ಮಾಡಿದ ಕಮ್ಮಿನ್ಸ್ ಒಂದೇ ಓವರ್ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ನೀಡಿದರು. ಈ ಓವರ್ನಲ್ಲಿ 12 ರನ್ ಬಂದವು.
10 ಓವರ್ ಪೂರ್ಣ
ಪಾಕಿಸ್ತಾನ ಇನ್ನಿಂಗ್ಸ್ನ 10 ಓವರ್ ಮುಗಿದಿದೆ. ಇದರಲ್ಲಿ ಪಾಕ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 59 ರನ್ ಕಲೆಹಾಕಿದೆ.
ಅಬ್ದುಲ್ಲಾ ಶಫೀಕ್22* (32)
ಇಮಾಮ್-ಉಲ್-ಹಕ್31* (28)
ಪಾಕ್ ಇನ್ನಿಂಗ್ಸ್ ಆರಂಭ
368 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಪಡೆದಿದೆ. ಇಮಾಮ್ ಉಲ್ ಹಕ್ ಮತ್ತು ಅಬ್ದುಲ್ಲಾ ಶಫೀಕ್ ವೇಗದಲ್ಲಿ ರನ್ ಗಳಿಸುತ್ತಿದ್ದಾರೆ. ಇಬ್ಬರೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ನಾಲ್ಕು ಓವರ್‌ಗಳ ನಂತರ ಪಾಕಿಸ್ತಾನ ಸ್ಕೋರ್ 28/0.
ಇಮಾಮ್-ಉಲ್-ಹಕ್15* (14)
ಅಬ್ದುಲ್ಲಾ ಶಫೀಕ್9* (10)
ಪಾಕಿಸ್ತಾನಕ್ಕೆ ಕಠಿಣ ಗುರಿ
ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ 368 ರನ್ ಟಾರ್ಗೆಟ್ ನೀಡಿತ್ತು. 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 367 ರನ್ ಗಳಿಸಿತು. ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ 163 ಮತ್ತು ಮಿಚೆಲ್ ಮಾರ್ಷ್ 121 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು 25 ರನ್‌ಗಳ ಗಡಿ ಮುಟ್ಟಲಿಲ್ಲ. ಶಾಹೀನ್ ಅಫ್ರಿದಿ ಪಾಕಿಸ್ತಾನದ ಪರ ಗರಿಷ್ಠ ಐದು ವಿಕೆಟ್ ಪಡೆದರೆ, ಹಾರಿಸ್ ರವೂಫ್ ಮೂರು ವಿಕೆಟ್, ಉಸಾಮಾ ಮಿರ್ ಒಂದು ವಿಕೆಟ್ ಪಡೆದರು.
ಸ್ಟೊಯಿನಿಸ್ ಔಟ್
ಶಾಹೀನ್ ಅಫ್ರಿದಿ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಔಟ್ ಮಾಡಿ ಆಸ್ಟ್ರೇಲಿಯಾಕ್ಕೆ ಆರನೇ ಹೊಡೆತ ನೀಡಿದರು. ಸ್ಟೊಯಿನಿಸ್ 24 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.
ಇಂಗ್ಲಿಸ್ ಔಟ್
45ನೇ ಓವರ್‌ನ ಎರಡನೇ ಎಸೆತದಲ್ಲಿ ಹ್ಯಾರಿಸ್ ರೌಫ್ ಮತ್ತೊಂದು ವಿಕೆಟ್ ಪಡೆದರು. ಇಂಗ್ಲಿಸ್ ಒಂಬತ್ತು ಎಸೆತಗಳಲ್ಲಿ 13 ರನ್‌ಗಳಿಗೆ ಔಟಾದರು.
ವಾರ್ನರ್ ಪೆವಿಲಿಯನ್‌ಗೆ
ಡೇವಿಡ್ ವಾರ್ನರ್ ಇನ್ನಿಂಗ್ಸ್ ಕೊನೆಗೊಂಡಿದ್ದು, 163 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 43ನೇ ಓವರ್‌ನ ಎರಡನೇ ಎಸೆತದಲ್ಲಿ ವಾರ್ನರ್ ಹ್ಯಾರಿಸ್ ರೌಫ್ಗೆ ಬಲಿಯಾದರು. ಬದಲಿ ಫೀಲ್ಡರ್ ಶಾದಾಬ್ ಖಾನ್ ಅವರ ಕ್ಯಾಚ್ ಪಡೆದರು. ವಾರ್ನರ್ 124 ಎಸೆತಗಳಲ್ಲಿ 163 ರನ್ ಗಳಿಸಿ ಔಟಾದರು. ಅವರು 14 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 330 ರನ್ ಗಳಿಸಿದೆ. ಮಾರ್ಕಸ್ ಸ್ಟೊಯಿನಿಸ್ ಅಜೇಯ 14 ಮತ್ತು ಜೋಶ್ ಇಂಗ್ಲಿಷ್ 5 ರನ್ ಗಳಿಸಿದ್ದಾರೆ.
ವಾರ್ನರ್ 150 ರನ್ ಪೂರ್ಣ
ಡೇವಿಡ್ ವಾರ್ನರ್ ಸಿಕ್ಸರ್ ಬಾರಿಸಿ 160 ರನ್ ಪೂರೈಸಿದ್ದಾರೆ. ಇನ್ನೊಂದು ತುದಿಯಲ್ಲಿ, ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಆಸ್ಟ್ರೇಲಿಯಾದ ಸ್ಕೋರ್ 300 ದಾಟಿದೆ.
ಸ್ಮಿತ್ ಔಟ್
ಆಸ್ಟ್ರೇಲಿಯಾದ ಮೂರನೇ ವಿಕೆಟ್ ಪತನಗೊಂಡಿದೆ. ಸ್ಮಿತ್ 7 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯಾ ಸ್ಕೋರ್ 38.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 287 ರನ್ ಆಗಿದೆ. ವಾರ್ನರ್ 140 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಆಸ್ಟ್ರೇಲಿಯಾ ಸ್ಕೋರ್ 284/2
ಆಸ್ಟ್ರೇಲಿಯಾ 38 ಓವರ್‌ಗಳಲ್ಲಿ 2 ವಿಕೆಟ್‌ಗೆ 284 ರನ್ ಗಳಿಸಿದೆ.
ಮ್ಯಾಕ್ಸ್‌ವೆಲ್ ಖಾತೆ ತೆರೆಯದೆ ಔಟ್
ಮಾರ್ಷ್ ವಿಕೆಟ್ ಬಳಿಕ ಬಂದ ಮ್ಯಾಕ್ಸ್‌ವೆಲ್ ಖಾತೆ ತೆರೆಯದೇ ಔಟಾಗಿದ್ದಾರೆ. 34 ಓವರ್‌ಗಳ ನಂತರ ಆಸ್ಟ್ರೇಲಿಯಾ ಸ್ಕೋರ್ ಎರಡು ವಿಕೆಟ್ ನಷ್ಟಕ್ಕೆ 259 ರನ್ ಆಗಿದೆ.
ಮಾರ್ಷ್ ಔಟ್
ಶಾಹೀನ್ ಅಫ್ರಿದಿ ಪಾಕಿಸ್ತಾನಕ್ಕೆ ಸತತ ಎರಡು ವಿಕೆಟ್ ತಂದುಕೊಟ್ಟಿದ್ದಾರೆ. ಅವರು ಮೊದಲು ಮಿಚೆಲ್ ಮಾರ್ಷ್ ಮತ್ತು ನಂತರ ಮ್ಯಾಕ್ಸ್ವೆಲ್ ಅವರನ್ನು ಔಟ್ ಮಾಡಿದರು. ಆಸ್ಟ್ರೇಲಿಯ 259 ಸ್ಕೋರ್‌ನಲ್ಲಿ ಮತ್ತೊಂದು ಹಿನ್ನಡೆ ಅನುಭವಿಸಿದೆ.
300ರ ಸಮೀಪಕ್ಕೆ ಆಸೀಸ್
ವಾರ್ನರ್ ಮತ್ತು ಮಾರ್ಷ್ ಅವರ ವಿಕೆಟ್‌ಗೆ ಬಾಬರ್ ಅಜಮ್ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ಆದರೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾಗುವ ಲಕ್ಷಣ ಕಾಣುತ್ತಿಲ್ಲ. ಆಸ್ಟ್ರೇಲಿಯ ತಂಡ 300ರ ಸಮೀಪಕ್ಕೆ ಸಾಗುತ್ತಿದೆ.
ಆರಂಭಿಕರು ಶತಕ
ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಪಾಕಿಸ್ತಾನದ ವಿರುದ್ಧ ತಮ್ಮ ಶತಕಗಳನ್ನು ಪೂರ್ಣಗೊಳಿಸಿದ್ದಾರೆ. 31ನೇ ಓವರ್‌ನಲ್ಲಿ ಮೊಹಮ್ಮದ್ ನವಾಜ್ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ವಾರ್ನರ್ ಶತಕ ಪೂರೈಸಿದರು. ಬಳಿಕ ಮಿಚೆಲ್ ಮಾರ್ಷ್ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿ ಶತಕ ಗಳಿಸಿದರು. ಇದು ವಾರ್ನರ್ ಅವರ 21ನೇ ಏಕದಿನ ಶತಕ ಮತ್ತು ಮಾರ್ಷ್ ಅವರ ಎರಡನೇ ಶತಕವಾಗಿದೆ. ಒಂದೇ ಪಂದ್ಯದಲ್ಲಿ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲು. ಕಾಂಗರೂ ತಂಡ 31 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 214 ರನ್ ಗಳಿಸಿದೆ.
ವಾರ್ನರ್ ಶತಕ
ವಾರ್ನರ್-ಮಾರ್ಷ್ ಪಾಕ್ ಆಟಗಾರರನ್ನು ಬೆಚ್ಚಿಬೀಳಿಸಿದ್ದಾರೆ. ಆಸ್ಟ್ರೇಲಿಯಾದ ಮೊತ್ತವನ್ನು 200 ರ ಗಡಿ ದಾಟಿಸುವ ಮೂಲಕ ಇಬ್ಬರೂ ಶತಕ ಬಾರಿಸಿದ್ದಾರೆ.
ವಿಕೆಟ್ ಹುಡುಕಾಟದಲ್ಲಿ ಪಾಕಿಸ್ತಾನ
29 ಓವರ್‌ಗಳ ಆಟ ಮುಗಿದಿದೆ. ಆದರೆ ಪಾಕಿಸ್ತಾನಕ್ಕೆ ಇನ್ನೂ ವಿಕೆಟ್ ಸಿಕ್ಕಿಲ್ಲ. ಆಸ್ಟ್ರೇಲಿಯಾದ ಸ್ಕೋರ್ ವಿಕೆಟ್ ನಷ್ಟವಿಲ್ಲದೆ 200 ರನ್ ಆಗಿದೆ. ವಾರ್ನರ್ ಶತಕದ ಸಮೀಪದಲ್ಲಿದ್ದು 99 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಮಾರ್ಷ್ ಕೂಡ 97 ರನ್ ಸಿಡಿಸಿದ್ದಾರೆ.
ಶತಕದ ಸಮೀಪದಲ್ಲಿ ವಾರ್ನರ್
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಶತಕ ಪೂರೈಸಿದ್ದಾರೆ. ಮಾರ್ಷ್ ಕೂಡ 80ರ ಗಡಿ ದಾಟಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನ ವಿಕೆಟ್‌ಗಳ ನಿರೀಕ್ಷೆಯಲ್ಲಿದೆ.
150+ ಪಾಲುದಾರಿಕೆ
ಆಸ್ಟ್ರೇಲಿಯಾ ಬಲಿಷ್ಠ ಆರಂಭ ಪಡೆದು ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದೆ. ವಾರ್ನರ್ ಮತ್ತು ಮಿಚೆಲ್ ಮಾರ್ಷ್ 150 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ತಂಡದ ಸ್ಕೋರ್ 176/0.
20 ಓವರ್‌ಗಳ ಆಟ ಅಂತ್ಯ
ಆಸೀಸ್ ಇನ್ನಿಂಗ್ಸ್ನ 20 ಓವರ್‌ಗಳ ಆಟ ಮುಗಿದಿದೆ. ಆಸ್ಟ್ರೇಲಿಯಾದ ಸ್ಕೋರ್ ವಿಕೆಟ್ ನಷ್ಟವಿಲ್ಲದೆ 149 ರನ್ ಆಗಿದೆ. ವಾರ್ನರ್ 74 ಮತ್ತು ಮಾರ್ಷ್ 64 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಮೊದಲ ವಿಕೆಟ್ ಅಗತ್ಯವಿದೆ.
150 ರ ಸಮೀಪದಲ್ಲಿ ಆಸೀಸ್
ಪಾಕಿಸ್ತಾನ ತಂಡ ಇನ್ನೂ ಒಂದು ವಿಕೆಟ್ ಪಡೆದಿಲ್ಲ. 17 ಓವರ್ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 150ರ ಸಮೀಪದಲ್ಲಿದೆ.
ವಾರ್ನರ್-ಮಾರ್ಷ್ ಅರ್ಧಶತಕ
ಮಾರ್ಷ್ ಮತ್ತು ವಾರ್ನರ್ ಜೋಡಿ ಸಿಕ್ಸರ್ ಮತ್ತು ಬೌಂಡರಿಳ ಸುರಿಮಳೆಗೈಯುತ್ತಿದೆ. ಆಸ್ಟ್ರೇಲಿಯಾದ ಸ್ಕೋರ್ 15 ಓವರ್‌ಗಳಲ್ಲಿ 128 ರನ್ ಆಗಿದೆ. ಒಂದು ವಿಕೆಟ್ ಕೂಡ ಬಿದ್ದಿಲ್ಲ. ವಾರ್ನರ್ ಮತ್ತು ಮಾರ್ಷ್ ಇಬ್ಬರೂ ತಮ್ಮ ಅರ್ಧಶತಕಗಳನ್ನು ಪೂರೈಸಿದ್ದಾರೆ. ಮಾರ್ಷ್ 43 ಎಸೆತಗಳಲ್ಲಿ 56 ರನ್ ಗಳಿಸಿದರೆ, 8 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ವಾರ್ನರ್ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 63 ರನ್ ಸಿಡಿಸಿದ್ದಾರೆ.
13 ಓವರ್‌ಗಳಲ್ಲಿ ಶತಕ ಪೂರ್ಣ
13ನೇ ಓವರ್‌ನಲ್ಲಿ ಆಸ್ಟ್ರೇಲಿಯದ 100 ರನ್‌ಗಳು ಪೂರ್ಣಗೊಂಡಿವೆ. ಪಾಕಿಸ್ತಾನದ ಯಾವುದೇ ಬೌಲರ್ ಇದುವರೆಗೆ ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಡೇವಿಡ್ ವಾರ್ನರ್ 54 ಹಾಗೂ ಮಿಚೆಲ್ ಮಾರ್ಷ್ 42 ರನ್ ಗಳಿಸಿ ಆಡುತ್ತಿದ್ದಾರೆ.
ಒಂದೇ ಓವರ್‌ನಲ್ಲಿ 24 ರನ್
ರೌಫ್ ಅವರ ಮೊದಲ ಓವರ್‌ನಲ್ಲಿ ಆಸ್ಟ್ರೇಲಿಯಾ 24 ರನ್ ಕಲೆಹಾಕಿತು. ಕೊನೆಯ ಎರಡು ಓವರ್‌ಗಳಲ್ಲಿ 35 ರನ್‌ಗಳು ಬಂದವು. 10 ಓವರ್‌ಗಳಲ್ಲಿ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 82 ರನ್ ಬಾರಿಸಿದೆ.
50 ರನ್ ಪೂರೈಸಿದ ಆಸ್ಟ್ರೇಲಿಯಾ
9ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ 50 ರನ್‌ಗಳು ಪೂರ್ಣಗೊಂಡವು. ಮಿಚೆಲ್ ಮಾರ್ಷ್ 27 ರನ್ ಹಾಗೂ ಡೇವಿಡ್ ವಾರ್ನರ್ 33 ರನ್ ಗಳಿಸಿ ಆಡುತ್ತಿದ್ದಾರೆ.
6 ಓವರ್‌ಗಳಲ್ಲಿ 37 ರನ್
ಆಸ್ಟ್ರೇಲಿಯಾ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ ಕಲೆಹಾಕಿದೆ. ವಾರ್ನರ್ 19 ಎಸೆತಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದರೆ, ಮಾರ್ಷ್ 17 ಎಸೆತಗಳಲ್ಲಿ 15 ರನ್ ಗಳಿಸಿ ಆಡುತ್ತಿದ್ದಾರೆ. ಇವರಿಬ್ಬರೂ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ.
ಆಸ್ಟ್ರೇಲಿಯಾ ಸ್ಕೋರ್-27/0
ಐದನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯಾ ಸ್ಕೋರ್-27/0 ಆಗಿದೆ. ಈ ಓವರ್ನಲ್ಲಿ ಆಸ್ಟ್ರೇಲಿಯಾ ಐದು ರನ್ ಗಳಿಸಿತು. ಉಸಾಮಾ ಮಿರ್, ಡೇವಿಡ್ ವಾರ್ನರ್ ಅವರ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು, ಇದು ಪಾಕಿಸ್ತಾನಕ್ಕೆ ದುಬಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವಾರ್ನರ್‌ಗೆ ಜೀವದಾನ
ಡೇವಿಡ್ ವಾರ್ನರ್ ನೀಡಿದ ಸುಲಭ ಕ್ಯಾಚ್ ಅನ್ನು ಮಿರ್ ಕೈಬಿಟ್ಟರು.
4 ಓವರ್‌ಗಳಲ್ಲಿ 22 ರನ್
ಆಸ್ಟ್ರೇಲಿಯಾ 4 ಓವರ್‌ಗಳಲ್ಲಿ 22 ರನ್ ಕಲೆಹಾಕಿದೆ. ಡೇವಿಡ್ ವಾರ್ನರ್ 10 ಎಸೆತಗಳಲ್ಲಿ 10 ರನ್, ಮಾರ್ಷ್ 14 ಎಸೆತಗಳಲ್ಲಿ 10 ರನ್ ಗಳಿಸಿ ಆಡುತ್ತಿದ್ದಾರೆ.
ಆಸೀಸ್ ಬ್ಯಾಟಿಂಗ್ ಆರಂಭ
ಶಾಹೀನ್ ಶಾ ಆಫ್ರಿದಿ ಎಸೆದ ಮೊದಲ ಓವರ್‌ನ ಐದನೇ ಎಸೆತವನ್ನು ಸಿಕ್ಸರ್‌ನೊಂದಿಗೆ ಮಿಚೆಲ್ ಮಾರ್ಷ್ ಇನ್ನಿಂಗ್ಸ್ ಆರಂಭಿಸಿದರು. ಲಾಂಗ್ ಆಫ್ ಓವರ್‌ನಲ್ಲಿ ಈ ಸಿಕ್ಸರ್ ಬಾರಿಸಿದರು.
ಆಸ್ಟ್ರೇಲಿಯಾ ಸ್ಕೋರ್ 7/0
Karnataka Breaking News Live: ಬಿಜೆಪಿಯವರು ಎಟಿಎಂ ಸರ್ಕಾರ ಅಂತಾ ಸಾಬೀತು ಮಾಡಲಿ; ಸಂತೋಷ್ ಲಾಡ್
ಮೈಸೂರು: ಬಿಜೆಪಿಯವರು ಎಟಿಎಂ ಸರ್ಕಾರ ಅಂತಾ ಸಾಬೀತು ಮಾಡಲಿ ಎಂದು ಮೈಸೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲ್ ಹಾಕಿದ್ದಾರೆ. ತನಿಖಾ ಸಂಸ್ಥೆಗಳು ಕೇಂದ್ರ ಬಿಜೆಪಿ ನಾಯಕರ ಕೈಯಲ್ಲಿ ಇದೆ. 10 ವರ್ಷದಿಂದ ಕೇಂದ್ರದಲ್ಲಿ ಅವರೇ ಆಡಳಿತ ಮಾಡುತ್ತಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
ಆಸ್ಟ್ರೇಲಿಯಾ ತಂಡ
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.
ಪಾಕಿಸ್ತಾನ ತಂಡ
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಉಸಾಮಾ ಮಿರ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ , ಹಾರಿಸ್ ರೌಫ್.
ಟಾಸ್ ಗೆದ್ದ ಪಾಕಿಸ್ತಾನ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
Published On - Oct 20,2023 1:35 PM