IND W vs AUS W: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಡ್ರಾದಲ್ಲಿ ಅಂತ್ಯ; ಮಿಂಚಿದ ಮಂಧನಾ, ಮೇಘನಾ ಸಿಂಗ್
IND W vs AUS W: ಚೊಚ್ಚಲ ಪಂದ್ಯವನ್ನಾಡಿದ ಮೇಘನಾ ಸಿಂಗ್ ತನ್ನ ಔಟ್ ಸ್ವಿಂಗ್ ಎಸೆತಗಳಿಂದ ಬ್ಯಾಟರ್ಗಳಿಗೆ ಮತ್ತೆ ತೊಂದರೆ ನೀಡಿದರು. 81 ನೇ ಓವರ್ನಲ್ಲಿ ಹೊಸ ಚೆಂಡನ್ನು ತೆಗೆದುಕೊಂಡ ನಂತರ ಭಾರತ ನಾಲ್ಕು ವಿಕೆಟ್ ಗಳನ್ನು ಕಬಳಿಸಿತು.
ಭಾರತ ಮತ್ತು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಆಡಿದ ಏಕೈಕ ಪಿಂಕ್ ಬಾಲ್ ಟೆಸ್ಟ್ ನಾಲ್ಕನೇ ದಿನ ಡ್ರಾದಲ್ಲಿ ಕೊನೆಗೊಂಡಿತು. ಭಾರತ ನಾಲ್ಕನೇ ಮತ್ತು ಅಂತಿಮ ದಿನದಂದು ಚಹಾ ಸೇವಿಸಿದ ನಂತರ ಎರಡನೇ ಇನ್ನಿಂಗ್ಸ್ ಅನ್ನು ಮೂರು ವಿಕೆಟ್ ನಷ್ಟಕ್ಕೆ 135 ಕ್ಕೆ ಡಿಕ್ಲೇರ್ ಮಾಡಿತು. ಇದರೊಂದಿಗೆ, ಅವರು 32 ಓವರ್‌ಗಳಲ್ಲಿ ಗೆಲ್ಲಲು ಆಸ್ಟ್ರೇಲಿಯಾಕ್ಕೆ 271 ಗುರಿಯನ್ನು ನೀಡಿದರು. ಡ್ರಾಕ್ಕಾಗಿ ಕೈ ಜೋಡಿಸುವ ಮುನ್ನ ಆಸ್ಟ್ರೇಲಿಯಾ ತಂಡ 32 ರನ್ಗಳಿಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಭಾರತ ತಂಡವು ಮೊದಲ ಇನಿಂಗ್ಸ್ ಅನ್ನು 145 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 377 ಕ್ಕೆ ಡಿಕ್ಲೇರ್ ಮಾಡಿತು. ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ಗೆ 241 ರನ್ ಗಳಿಸಿತು.
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳಾ ಬೌಲರ್‌ಗಳು ಬಲಿಷ್ಠ ಪ್ರದರ್ಶನ ನೀಡಿ ಭಾರತಕ್ಕೆ ಆತಿಥೇಯರ ವಿರುದ್ಧ ದೊಡ್ಡ ಮುನ್ನಡೆ ನೀಡಿದರು. ಭಾರತೀಯ ಬ್ಯಾಟರ್ ಸ್ಮೃತಿ ಮಂಧನಾ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಟೆಸ್ಟ್ ಶತಕ ಗಳಿಸಿದರು. ಮಂಧನಾ ಡೇ ನೈಟ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ ದೇಶದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡರು. ಮಂಧಾನ 216 ಎಸೆತಗಳಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 127 ರನ್ ಗಳಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 377 ರನ್ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿತು. ಮಂಧನಾ ಹೊರತಾಗಿ, ದೀಪ್ತಿ ಶರ್ಮಾ 66 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಶೆಫಾಲಿ ವರ್ಮಾ 31 ಮತ್ತು ನಾಯಕಿ ಮಿಥಾಲಿ ರಾಜ್ 30 ರನ್ ಗಳಿಸಿದರು.
ಮೇಘನಾ ಸಿಂಗ್ ಅಬ್ಬರ ಹಿರಿಯ ವೇಗದ ಬೌಲರ್ ಜೂಲನ್ ಗೋಸ್ವಾಮಿ ಮೂರನೇ ದಿನ ಮೊದಲ ಎರಡು ವಿಕೆಟ್ ಪಡೆದರು. ಪೂಜಾ ವಸ್ತ್ರಕರ್ ಮೂವರು ಆಟಗಾರರನ್ನು ಔಟ್ ಮಾಡಿದರೆ, ದೀಪ್ತಿ ಶರ್ಮಾ ಮತ್ತು ಮೇಘನಾ ಸಿಂಗ್ ತಲಾ ಎರಡು ವಿಕೆಟ್ ಪಡೆದರು. ದೀಪ್ತಿ ಶರ್ಮಾ ಅವರು ಗಾರ್ಡ್ನರ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು, ನಂತರ ಚೊಚ್ಚಲ ಪಂದ್ಯವನ್ನಾಡಿದ ಮೇಘನಾ ಸಿಂಗ್ ತನ್ನ ಔಟ್ ಸ್ವಿಂಗ್ ಎಸೆತಗಳಿಂದ ಬ್ಯಾಟರ್ಗಳಿಗೆ ಮತ್ತೆ ತೊಂದರೆ ನೀಡಿದರು. 81 ನೇ ಓವರ್ನಲ್ಲಿ ಹೊಸ ಚೆಂಡನ್ನು ತೆಗೆದುಕೊಂಡ ನಂತರ ಭಾರತ ನಾಲ್ಕು ವಿಕೆಟ್ ಗಳನ್ನು ಕಬಳಿಸಿತು.
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಶೆಫಾಲಿ ವರ್ಮಾ 52 ರನ್ ಗಳಿಸಿದರು. ಮಂಧನಾ 30 ರನ್ ಮತ್ತು ಪೂನಮ್ ರಾವುತ್ ಔಟಾಗದೆ 41 ರನ್ ಗಳಿಸಿದರು. ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 135 ರನ್ಗಳಿಗೆ ಡಿಕ್ಲೇರ್ ಮಾಡಿತು. ಇದರ ನಂತರ ಅವರು ಆಸ್ಟ್ರೇಲಿಯಾಕ್ಕೆ ಗೆಲ್ಲಲು 271 ಗುರಿಯನ್ನು ನೀಡಿದರು. ಆಟವು ಡ್ರಾ ಕಡೆಗೆ ಸಾಗಿತು, ಆದ್ದರಿಂದ ಇಬ್ಬರೂ ನಾಯಕರು ಡ್ರಾಕ್ಕಾಗಿ ಕೈ ಜೋಡಿಸಿದರು. ಡ್ರಾ ಆಗುವ ಮುನ್ನ ಆಸ್ಟ್ರೇಲಿಯಾ 32 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು.