ನನಗೂ ಮೈದಾನಕ್ಕೆ ಬರಲು ಅವಕಾಶ ಕೊಡಲಿಲ್ಲ! ಆರ್​ಸಿಬಿ ವಿರುದ್ಧ ಡೇಲ್ ಸ್ಟೇನ್ ಗಂಭೀರ ಆರೋಪ

ಐಪಿಎಲ್ 2020 ರಲ್ಲಿ ಆರ್‌ಸಿಬಿಯಲ್ಲಿದ್ದಾಗ ನಾನು ಕೂಡ ಈ ನಿಯಮಕ್ಕೆ ಬಲಿಯಾಗಿದ್ದೆ. ನಾನು ಮೈದಾನಕ್ಕೆ ಹೋಗಲು ಬಯಸಿದ್ದೆ, ಆದರೆ ಆಟಗಾರರನ್ನು ಒಯ್ಯಲು ಒಂದು ನಿಗದಿತ ಮಿತಿಯಿದ್ದರೆ, ಅಷ್ಟು ಆಟಗಾರರು ಮಾತ್ರ ಹೋಗಬೇಕು.

ನನಗೂ ಮೈದಾನಕ್ಕೆ ಬರಲು ಅವಕಾಶ ಕೊಡಲಿಲ್ಲ! ಆರ್​ಸಿಬಿ ವಿರುದ್ಧ ಡೇಲ್ ಸ್ಟೇನ್ ಗಂಭೀರ ಆರೋಪ
ಡೇಲ್ ಸ್ಟೇನ್, ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on:Oct 03, 2021 | 7:03 PM

ಡೇವಿಡ್ ವಾರ್ನರ್ ಜೊತೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಿರ್ವಹಣೆಯ ಕೆಟ್ಟ ನಡವಳಿಕೆ ಈ ದಿನಗಳಲ್ಲಿ ಮುಖ್ಯಾಂಶವಾಗಿದೆ. ಈ ತಂಡವು ಐಪಿಎಲ್ 2021 ರ ಪ್ಲೇಆಫ್‌ ಸ್ಪರ್ಧೆಯಿಂದ ಹೊರಬಿದ್ದಿದೆ. ಕಳಪೆ ಪ್ರದರ್ಶನದ ನಂತರ, ಹೈದರಾಬಾದ್ ವಾರ್ನರ್‌ ಅವರನ್ನು ನಾಯಕತ್ವದಿಂದ ತೆಗೆದುಹಾಕಿತು. ನಂತರ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈಬಿಡಲಾಯಿತು. ಐಪಿಎಲ್ 2021 ಪುನರಾರಂಭವಾದಾಗ ಯುಎಇಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಇಲ್ಲಿಯೂ ಸಹ ಡೇವಿಡ್ ವಾರ್ನರ್ ಕ್ರೀಡಾಂಗಣದಲ್ಲಿ ಕಾಣಲಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್ಮೆಂಟ್ ವಾರ್ನರ್​ಗೆ ಕ್ರೀಡಾಂಗಣಕ್ಕೆ ಹೋಗಲು ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಇನ್ನೊಂದು ಸುದ್ದಿ ಹೊರಬರುತ್ತಿದೆ. ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಕೂಡ ಇಂತಹ ಗಂಭೀರ ಆರೋಪವನ್ನು ಆರ್​ಸಿಬಿ ತಂಡದ ಮೇಲೆ ಹೊರಿಸಿದ್ದಾರೆ. ಜೊತೆಗೆ ಐಪಿಎಲ್ 2020 ರಲ್ಲಿ ತನಗೂ ಇದೇ ರೀತಿ ಆಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

ESPNcricinfo ಜೊತೆಗಿನ ಸಂಭಾಷಣೆಯಲ್ಲಿ, ಡೇನ್ ಸ್ಟೇನ್ ವಾರ್ನರ್‌ಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡುತ್ತಾ, ವಾರ್ನರ್ ಮೈದಾನಕ್ಕೆ ಬರುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಏಕೆಂದರೆ ತಂಡವು ಯುವಕರಿಗೆ ಅವಕಾಶಗಳನ್ನು ನೀಡಲು ಬಯಸುತ್ತದೆ ಎಂದು ಅರ್ಥವಾಗುತ್ತದೆ. ಜೊತೆಗೆ ಅವರಿಗೆ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಆಡುವ ಇಲೆವೆನ್​ನಲ್ಲಿ ಅವಕಾಶವಿಲ್ಲ ಎಂದು ಅವರಿಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲವೇ ಆಟಗಾರರನ್ನು ಮಾತ್ರ ಮೈದಾನಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ನನಗೆ ಗೊತ್ತು, ಐಪಿಎಲ್ 2020 ರಲ್ಲಿ ಆರ್‌ಸಿಬಿಯಲ್ಲಿದ್ದಾಗ ನಾನು ಕೂಡ ಈ ನಿಯಮಕ್ಕೆ ಬಲಿಯಾಗಿದ್ದೆ. ನಾನು ಮೈದಾನಕ್ಕೆ ಹೋಗಲು ಬಯಸಿದ್ದೆ, ಆದರೆ ಆಟಗಾರರನ್ನು ಒಯ್ಯಲು ಒಂದು ನಿಗದಿತ ಮಿತಿಯಿದ್ದರೆ, ಅಷ್ಟು ಆಟಗಾರರು ಮಾತ್ರ ಹೋಗಬೇಕು. ಅವರುಗಳನ್ನು ಹೊರತುಪಡಿಸಿ, ಆಟಗಾರರಿಗೆ ಮೈದಾನದಲ್ಲಿ ಅವಕಾಶವಿಲ್ಲ. ಅದಕ್ಕಾಗಿಯೇ ಅವರು ಇದನ್ನು ಮಾಡುತ್ತಿರಬಹುದು ಎಂದರು.

ಐಪಿಎಲ್ 2020 ರಲ್ಲಿ ಸ್ಟೇನ್ ಕೇವಲ 3 ಪಂದ್ಯಗಳನ್ನು ಆಡಿದ್ದಾರೆ ಐಪಿಎಲ್ 2020 ರಲ್ಲಿ ಡೇಲ್ ಸ್ಟೇನ್ ಆರ್‌ಸಿಬಿ ಪರ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದರು. ಇದರ ನಂತರ, ಅವರು ಐಪಿಎಲ್ 2021 ಕ್ಕಿಂತ ಮುಂಚೆಯೇ ಪಂದ್ಯಾವಳಿಯಿಂದ ಹೊರ ನಡೆದರು. ಇಂತಹ ಪರಿಸ್ಥಿತಿಯಲ್ಲಿ, ಆರ್ಸಿಬಿ ಡೇಲ್ ಸ್ಟೇನ್ ಅವರನ್ನು ಬಿಡುಗಡೆ ಮಾಡಿತು. ಅವರು 95 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 97 ವಿಕೆಟ್ ಪಡೆದರು. ಅವರು ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್​ನಂತಹ ತಂಡಗಳಿಗಾಗಿ ಐಪಿಎಲ್​ನಲ್ಲಿ ಆಡಿದ್ದರು.

ಕೆಲವು ತಿಂಗಳ ಹಿಂದೆ ಐಪಿಎಲ್ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಡೇಲ್ ಸ್ಟೇನ್ ಟೀಕೆಗೆ ಗುರಿಯಾಗಿದ್ದರು. ಅವರು ಪಾಕಿಸ್ತಾನ ಸೂಪರ್ ಲೀಗ್ ಅನ್ನು ಐಪಿಎಲ್​ಗಿಂತ ಉತ್ತಮ ಎಂದು ಹೇಳಿದ್ದರು. ಐಪಿಎಲ್‌ನಲ್ಲಿ ಸಾಕಷ್ಟು ಹಣವಿದೆ ಎಂದು ಅವರು ಹೇಳಿದರು, ಇದರಿಂದಾಗಿ ಅನೇಕ ಬಾರಿ ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ ಎಂದಿದ್ದರು. ಈ ಕಾರಣದಿಂದಾಗಿ, ಡೇಲ್ ಸ್ಟೇನ್ ಅವರನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದರು.

Published On - 7:00 pm, Sun, 3 October 21

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM