AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಗೆಲುವಿನೊಂದಿಗೆ ಪ್ಲೇಆಫ್​ಗೆ ಎಂಟ್ರಿಕೊಟ್ಟ ಆರ್‌ಸಿಬಿ; ಸೋತ ಪಂಜಾಬ್​ಗೆ ಪ್ಲೇಆಫ್‌ ಹಾದಿ ಮತ್ತಷ್ಟು ಕಠಿಣ

IPL 2021: ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ ತಂಡ 6 ವಿಕೆಟ್​ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು.

IPL 2021: ಗೆಲುವಿನೊಂದಿಗೆ ಪ್ಲೇಆಫ್​ಗೆ ಎಂಟ್ರಿಕೊಟ್ಟ ಆರ್‌ಸಿಬಿ; ಸೋತ ಪಂಜಾಬ್​ಗೆ ಪ್ಲೇಆಫ್‌ ಹಾದಿ ಮತ್ತಷ್ಟು ಕಠಿಣ
ಪ್ಲೇಆಫ್​ಗೆ ಎಂಟ್ರಿಕೊಟ್ಟ ಆರ್‌ಸಿಬಿ
TV9 Web
| Updated By: ಪೃಥ್ವಿಶಂಕರ|

Updated on:Oct 03, 2021 | 7:46 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2021) 48 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್​ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ ತಂಡ 6 ವಿಕೆಟ್​ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ, ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿತು.

ವಿರಾಟ್ ಕೊಹ್ಲಿ (25) ಮತ್ತು ದೇವದತ್ ಪಡಿಕ್ಕಲ್ (40) ಆರ್ಸಿಬಿಗೆ ತಂಡಕ್ಕೆ ಉತ್ತಮ ಆರಂಭ ನೀಡಿದರು. ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಸಾಮರ್ಥ್ಯ ತೋರಿಸಿದರು ಮತ್ತು ಆರ್‌ಸಿಬಿ ಪರ 33 ಎಸೆತಗಳಲ್ಲಿ 57 ರನ್​ಗಳ ಇನ್ನಿಂಗ್ಸ್ ಆಡಿದರು. ಎಬಿ ಡಿವಿಲಿಯರ್ಸ್ 23 ರನ್ ಗಳಿಸಿದರು. ಪಂಜಾಬ್ ಪರ ಮೊಹಮ್ಮದ್ ಶಮಿ ಮತ್ತು ಹೆನ್ರಿಕ್ಸ್ ತಲಾ ಮೂರು ವಿಕೆಟ್ ಪಡೆದರು. ಬೆಂಗಳೂರು ತಂಡದ ಪರವಾಗಿ ಯುಜ್ವೇಂದ್ರ ಚಾಹಲ್ ನಾಲ್ಕು ಓವರ್​ಗಳಲ್ಲಿ 29 ರನ್ ನೀಡಿ ಮೂರು ವಿಕೆಟ್ ಪಡೆದರು. ಪಂಜಾಬ್ ಪರ ಮಾಯಾಂಕ್ ಅಗರ್ವಾಲ್ ಅತ್ಯಧಿಕ 57 ರನ್ ಗಳಿಸಿದರು.

ರಾಹುಲ್ ಮಯಾಂಕ್ ಉತ್ತಮ ಆರಂಭ 164 ರನ್​ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಉತ್ತಮವಾಗಿ ಆರಂಭಿಸಿತು. ಓಪನರ್ ಮಯಾಂಕ್ ಅಗರ್ವಾಲ್ ಅತ್ಯಧಿಕ 57 ರನ್ ಗಳಿಸಿದರು. ಅವರು ನಾಯಕ ಕೆಎಲ್ ರಾಹುಲ್ ಜೊತೆಗೂಡಿ ತಂಡಕ್ಕೆ ಪ್ರಬಲ ಆರಂಭ ನೀಡಿದರು. ಆದರೆ ತಂಡವು ಈ ಆರಂಭದ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ರಾಹುಲ್ 39 ರನ್​ಗಳ ಇನ್ನಿಂಗ್ಸ್ ಆಡಿದರು. ಏಡನ್ ಮಾರ್ಕ್ರಮ್ 20 ರನ್ ಗಳಿಸಿದರು. ಪಂಜಾಬ್‌ನಿಂದ ಉತ್ತಮ ಆರಂಭದ ನಂತರ, ಆರ್‌ಸಿಬಿ ಪುನರಾಗಮನ ಮಾಡಿತು ಮತ್ತು ಮಧ್ಯಮ ಓವರ್‌ಗಳಲ್ಲಿ ನಿಯಮಿತವಾಗಿ ವಿಕೆಟ್ ಪಡೆದರು. 165 ರ ಗುರಿಯನ್ನು ಬೆನ್ನಟ್ಟಿದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಪವರ್ ಪ್ಲೇನಲ್ಲಿ 49 ರನ್ ಸೇರಿಸಿದರು. ಆದರೆ ಇದರ ಹೊರತಾಗಿ, ಯಾವುದೇ ಬ್ಯಾಟ್ಸ್‌ಮನ್ 20 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದರ ಫಲವಾಗಿ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 158 ರನ್ ಗಳಿಸಲು ಸಾಧ್ಯವಾಯಿತು.

ಚಹಲ್ ಮತ್ತೆ ಅಬ್ಬರ ಚಾಹಲ್ ಮತ್ತೊಮ್ಮೆ ಆರ್‌ಸಿಬಿ ಪರ ಮಿಂಚಿದರು ಮತ್ತು ಅವರ ಹೆಸರಿನಲ್ಲಿ ಮೂರು ವಿಕೆಟ್ ಪಡೆದರು. ಚಾಹಲ್ ಅದ್ಭುತವಾಗಿ ಬೌಲಿಂಗ್ ಮಾಡಿ ನಾಲ್ಕು ಓವರ್​ಗಳಲ್ಲಿ 29 ರನ್ ನೀಡಿ ಮೂರು ವಿಕೆಟ್ ಪಡೆದರು. ಚಹಲ್ ಹೊರತುಪಡಿಸಿ, ಜಾರ್ಜ್ ಗಾರ್ಟೆನ್ ಮತ್ತು ಶಹಬಾಜ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

Published On - 7:24 pm, Sun, 3 October 21