KKR vs SRH, IPL 2021: ಸನ್​ರೈಸರ್ಸ್​ಗೆ ಮತ್ತೊಂದು ಸೋಲು: ಕೆಕೆಆರ್ ಪ್ಲೇಆಫ್ ಆಸೆ ಜೀವಂತ

TV9 Web
| Updated By: ಝಾಹಿರ್ ಯೂಸುಫ್

Updated on:Oct 03, 2021 | 10:59 PM

Kolkata Knight Riders vs Sunrisers Hyderabad Live Score: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕೇವಲ 7 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇನ್ನು ಎಸ್​ಆರ್​ಹೆಚ್​ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

KKR vs SRH, IPL 2021: ಸನ್​ರೈಸರ್ಸ್​ಗೆ ಮತ್ತೊಂದು ಸೋಲು: ಕೆಕೆಆರ್ ಪ್ಲೇಆಫ್ ಆಸೆ ಜೀವಂತ
KKR vs SRH

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ (IPL 2021) 49ನೇ ಪಂದ್ಯದಲ್ಲಿ ಇಯಾನ್ ಮೊರ್ಗನ್ (Eion Morgan) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್​ರೈಸರ್ಸ್ ಹೈದರಾಬಾದ್ (KKR vs SRH) ವಿರುದ್ದ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸನ್​ರೈಸರ್ಸ್​ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಎಸ್​ಆರ್​ಹೆಚ್​ ತಂಡವು ನಿಗದಿತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 115 ರನ್ ಪೇರಿಸಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ 19.4 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 119 ರನ್ ಬಾರಿಸುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

SRH 115/8 (20)

KKR 119/4 (19.4)

ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕೇವಲ 7 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇನ್ನು ಎಸ್​ಆರ್​ಹೆಚ್​ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಕೋಲ್ಕತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮೊರ್ಗನ್ (ನಾಯಕ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕರವರ್ತಿ

ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್

LIVE NEWS & UPDATES

The liveblog has ended.
  • 03 Oct 2021 10:56 PM (IST)

    ಕೆಕೆಆರ್​ಗೆ 6 ವಿಕೆಟ್​ಗಳ ಭರ್ಜರಿ ಜಯ

    SRH 115/8 (20)

    KKR 119/4 (19.4)

  • 03 Oct 2021 10:52 PM (IST)

    ಕೊನೆಯ ಓವರ್​ನಲ್ಲಿ 3 ರನ್​ಗಳ ಅವಶ್ಯಕತೆ

    SRH 115/8 (20)

    KKR 113/4 (19)

      

  • 03 Oct 2021 10:50 PM (IST)

    ಡಿಕೆ-ಶಾಟ್

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ದಿನೇಶ್ ಕಾರ್ತಿಕ್ ಆಫ್ ಸೈಡ್​ನತ್ತ ಸೂಪರ್ ಶಾಟ್…ಫೋರ್

  • 03 Oct 2021 10:47 PM (IST)

    ನಿತೀಶ್ ರಾಣಾ ಔಟ್

    ಜೇಸನ್ ಹೋಲ್ಡರ್​ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ನಿತೀಶ್ ರಾಣಾ (25)

    KKR 106/4 (18)

      

  • 03 Oct 2021 10:42 PM (IST)

    ಡಿಕೆ ಬಾಸ್

    ದಿನೇಶ್ ಕಾರ್ತಿಕ್ ಸ್ಟ್ರೈಟ್ ಡ್ರೈವ್…ಸಿದ್ದಾರ್ಥ್ ಕೌಲ್ ಎಸೆತಕ್ಕೆ ಬೌಂಡರಿ ಉತ್ತರ…ಫೋರ್

  • 03 Oct 2021 10:40 PM (IST)

    ಶುಭ್​ಮನ್ ಗಿಲ್ ಔಟ್

    57 ರನ್​ ಬಾರಿಸಿ ಸಿದ್ದಾರ್ಥ್​ ಕೌಲ್​ಗೆ ವಿಕೆಟ್ ಒಪ್ಪಿಸಿದ ಶುಭ್​ಮನ್ ಗಿಲ್

    KKR 93/3 (16.3)

      

  • 03 Oct 2021 10:36 PM (IST)

    ರಾಣಾ ರಾಕೆಟ್

    ರಶೀದ್ ಖಾನ್ ಎಸೆತದಲ್ಲಿ ಸ್ಟ್ರೈಟ್ ಹಿಟ್​..ರಾಣಾ ಬ್ಯಾಟ್​ನಿಂದ ಫೋರ್

  • 03 Oct 2021 10:34 PM (IST)

    15 ಓವರ್ ಮುಕ್ತಾಯ

    KKR 84/2 (15)

      

  • 03 Oct 2021 10:30 PM (IST)

    ಅರ್ಧಶತಕ ಪೂರೈಸಿದ ಶುಭ್​ಮನ್

    ಉಮ್ರಾನ್ ಮಲಿಕ್ ಓವರ್​ನಲ್ಲಿ ಸೂಪರ್ ಬೌಂಡರಿ…ಗಿಲ್ ಬ್ಯಾಟ್​ನಿಂದ ಫೋರ್

    43 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಗಿಲ್

    KKR 83/2 (14.4)

      

  • 03 Oct 2021 10:20 PM (IST)

    ಶುಭ್​ಮನ್ ಫೋರ್​ ಶುಭಾರಂಭ

    ಉಮ್ರಾನ್ ಮಲಿಕ್ ಎಸೆತದಲ್ಲಿ ಬ್ಯಾಕ್​ ಟು ಬ್ಯಾಕ್ ಬೌಂಡರಿ…ಫೋರ್

    KKR 71/2 (12.2)

      

  • 03 Oct 2021 10:16 PM (IST)

    ಗಿಲ್ಲಿ ಶಾಟ್

    ಜೇಸನ್ ಹೋಲ್ಡರ್ ಎಸೆತದಲ್ಲಿ ಶುಭ್​ಮನ್ ಗಿಲ್ ಸೂಪರ್ ಶಾಟ್…ಫೋರ್

  • 03 Oct 2021 10:12 PM (IST)

    10 ಓವರ್ ಮುಕ್ತಾಯ

    KKR 44/2 (10.1)

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್-ನಿತೀಶ್ ರಾಣಾ ಬ್ಯಾಟಿಂಗ್

      

  • 03 Oct 2021 10:01 PM (IST)

    8 ಓವರ್ ಮುಕ್ತಾಯ

    KKR 40/2 (8)

     ಕ್ರೀಸ್​ನಲ್ಲಿ ಶುಭ್​ಮನ್ ಗಿಲ್-ನಿತೀಶ್ ರಾಣಾ ಬ್ಯಾಟಿಂಗ್

  • 03 Oct 2021 09:56 PM (IST)

    2 ವಿಕೆಟ್ ಕಳೆದುಕೊಂಡ ಕೆಕೆಆರ್

    ರಶೀದ್ ಖಾನ್ ಎಸೆತದಲ್ಲಿ  ವಿಕೆಟ್ ಒಪ್ಪಿಸಿದ ರಾಹುಲ್ ತ್ರಿಪಾಠಿ

    KKR 39/2 (7.3)

      

  • 03 Oct 2021 09:48 PM (IST)

    ಪವರ್​ಪ್ಲೇ ಮುಕ್ತಾಯ

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್-ರಾಹುಲ್ ತ್ರಿಪಾಠಿ ಬ್ಯಾಟಿಂಗ್

    KKR 36/1 (6)

      

    ಭುವಿ ಓವರ್​ನಲ್ಲಿ  ಭರ್ಜರಿ ಬೌಂಡರಿ ಬಾರಿಸಿದ  ಗಿಲ್

  • 03 Oct 2021 09:42 PM (IST)

    ಮೊದಲ ವಿಕೆಟ್ ಪತನ

    ಜೇಸನ್ ಹೋಲ್ಡರ್ ಎಸೆತದಲ್ಲಿ ಕೇನ್ ವಿಲಿಯಮ್ಸನ್​ಗೆ ಕ್ಯಾಚ್​ ನೀಡಿ ವಿಕೆಟ್ ಒಪ್ಪಿಸಿದ ವೆಂಕಟೇಶ್ ಅಯ್ಯರ್

  • 03 Oct 2021 09:37 PM (IST)

    ಶುಭ್​ಮನ್ ಶುಭಾರಂಭ

    KKR 21/0 (4)

     

    ಎರಡು ಬೌಂಡರಿ ಬಾರಿಸಿ ಉತ್ತಮ ಇನಿಂಗ್ಸ್​ ಕಟ್ಟುತ್ತಿರುವ ಶುಭ್​ಮನ್ ಗಿಲ್

  • 03 Oct 2021 09:32 PM (IST)

    3 ಓವರ್ ಮುಕ್ತಾಯ

    KKR 11/0 (3)

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್

      

  • 03 Oct 2021 09:15 PM (IST)

    ಟಾರ್ಗೆಟ್-116

    ಕೆಕೆಆರ್ ತಂಡಕ್ಕೆ 116 ರನ್​ಗಳ ಸಾಧಾರಣ ಗುರಿ ನೀಡಿದ ಸನ್​ರೈಸರ್ಸ್​ ಹೈದರಾಬಾದ್

  • 03 Oct 2021 09:04 PM (IST)

    SRH ಇನಿಂಗ್ಸ್​ ಅಂತ್ಯ

    SRH 115/8 (20)

      

  • 03 Oct 2021 08:59 PM (IST)

    SRH 104/8 (18.3)

    8 ವಿಕೆಟ್ ಕಳೆದುಕೊಂಡ ಸನ್​ರೈಸರ್ಸ್​

    ಮಾವಿ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಔಟ್

  • 03 Oct 2021 08:52 PM (IST)

    ಸಮದ್ ಔಟ್

    ಟಿಮ್ ಸೌಥಿ ಎಸೆತದಲ್ಲಿ ಗಿಲ್​ಗೆ ಕ್ಯಾಚ್ ನೀಡಿ ಇನಿಂಗ್ಸ್ ಅಂತ್ಯಗೊಳಿಸಿದ ಅಬ್ದುಲ್ ಸಮದ್ (25)

    SRH 95/7 (17.2)

      

  • 03 Oct 2021 08:51 PM (IST)

    ಸಿಕ್ಸರ್ ಸಮದ್

    ವರುಣ್ ಚಕ್ರವರ್ತಿ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಅಬ್ದುಲ್ ಸಮದ್

    SRH 95/7 (17.2)

      

  • 03 Oct 2021 08:47 PM (IST)

    ಜೇಸನ್ ಹೋಲ್ಡರ್ ಔಟ್

    SRH 80/6 (16.1)

     ವರುಣ್ ಚಕ್ರವರ್ತಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಜೇಸನ್ ಹೋಲ್ಡರ್

  • 03 Oct 2021 08:44 PM (IST)

    16 ಓವರ್ ಮುಕ್ತಾಯ

    SRH 80/5 (16)

      

    ಕ್ರೀಸ್​ನಲ್ಲಿ ಅಬ್ದುಲ್ ಸಮದ್-ಜೇಸನ್ ಹೋಲ್ಡರ್ ಬ್ಯಾಟಿಂಗ್

  • 03 Oct 2021 08:36 PM (IST)

    ಪ್ರಿಯಂ ಗರ್ಗ್ ಔಟ್

    ವರುಣ್ ಚಕ್ರವರ್ತಿ ಎಸೆತದಲ್ಲಿ ರಾಹುಲ್ ತ್ರಿಪಾಠಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ಪ್ರಿಯಂ ಗರ್ಗ್

    SRH 70/5 (14.2)

     

  • 03 Oct 2021 08:29 PM (IST)

    ಗರ್ಗ್​ ಬಿಗ್ ಹಿಟ್

    ಶಕೀಬ್ ಎಸೆತದಲ್ಲಿ ಪ್ರಿಯಂ ಗರ್ಗ್​ ಬಿಗ್ ಹಿಟ್​…ಸಿಕ್ಸ್

    SRH 64/4 (12.3)

     

  • 03 Oct 2021 08:21 PM (IST)

    4ನೇ ವಿಕೆಟ್ ಪತನ

    SRH 51/4 (10.1)

     ಶಕೀಬ್ ಎಸೆತದಲ್ಲಿ ಅಭಿಷೇಕ್ ಶರ್ಮಾ ಸ್ಟಂಪ್​ಔಟ್

  • 03 Oct 2021 08:14 PM (IST)

    SRH 46/3 (9)

    ಕ್ರೀಸ್​ನಲ್ಲಿ ಅಭಿಷೇಕ್ ಶರ್ಮಾ-ಪ್ರಿಯಂ ಗರ್ಗ್ ಬ್ಯಾಟಿಂಗ್

  • 03 Oct 2021 08:09 PM (IST)

    ವಿಲಿಯಮ್ಸನ್ ಔಟ್

    ಶಕೀಬ್ ಅಲ್ ಹಸನ್ ಉತ್ತಮ ಫೀಲ್ಡಿಂಗ್…ವಿಲಿಯಮ್ಸನ್ ರನೌಟ್

    SRH 40/3 (7.4)

     

  • 03 Oct 2021 08:02 PM (IST)

    ಪವರ್​ಪ್ಲೇ ಮುಕ್ತಾಯ

    SRH 35/2 (6)

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಪ್ರಿಯಂ ಗರ್ಗ್ ಬ್ಯಾಟಿಂಗ್

     

  • 03 Oct 2021 07:59 PM (IST)

    ಕೇನ್-ಬೌಂಡರಿ

    ಆಫ್​ಸೈಡ್​ನತ್ತ ಬೌಂಡರಿ…ಮಾವಿ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಕೇನ್ ವಿಲಿಯಮ್ಸನ್

  • 03 Oct 2021 07:57 PM (IST)

    ವಿಲಿಯಮ್ಸನ್ ಸೂಪರ್ ಶಾಟ್

    ಶಿವಂ ಮಾವಿ ಎಸೆತದಲ್ಲಿ ಆಫ್​ ಸೈಡ್​ನತ್ತ ಕೇನ್ ವಿಲಿಯಮ್ಸನ್ ಸೂಪರ್ ಶಾಟ್- ಫೋರ್

  • 03 Oct 2021 07:56 PM (IST)

    5 ಓವರ್ ಮುಕ್ತಾಯ

    SRH 17/2 (5)

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಪ್ರಿಯಂ ಗರ್ಗ್ ಬ್ಯಾಟಿಂಗ್

  • 03 Oct 2021 07:49 PM (IST)

    ರಾಯ್ ಔಟ್

    ಶಿವಂ ಮಾವಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಜೇಸನ್ ರಾಯ್ (10)

    SRH 16/2 (3.4)

      

  • 03 Oct 2021 07:43 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಟಿಮ್ ಸೌಥಿ ಎಸೆತ…ಜೇಸನ್ ರಾಯ್ ಬ್ಯೂಟಿಫುಲ್​ ಶಾಟ್…ಲೆಗ್​ ಸೈಡ್​ನತ್ತ ಫೋರ್

  • 03 Oct 2021 07:42 PM (IST)

    ಜೇಸನ್-ಫೋರ್

    ಸೌಥಿ ಎಸೆತದಲ್ಲಿ ಜೇಸನ್ ರಾಯ್​ ಬ್ಯಾಟ್ ಇನ್​ ಸೈಡ್​ ಎಡ್ಜ್​…ಫೋರ್

  • 03 Oct 2021 07:41 PM (IST)

    2 ಓವರ್ ಮುಕ್ತಾಯ

    SRH 6/1 (2)

    ಕ್ರೀಸ್​ನಲ್ಲಿ ಜೇಸನ್ ರಾಯ್-ಕೇನ್ ವಿಲಿಯಮ್ಸನ್

  • 03 Oct 2021 07:38 PM (IST)

    ಮೊದಲ ಓವರ್​ನಲ್ಲೇ ಮೊದಲ ವಿಕೆಟ್​

    ಟಿಮ್ ಸೌಥಿ ಎಸೆತದಲ್ಲಿ ವೃದ್ದಿಮಾನ್ ಸಾಹ ಎಲ್​ಬಿಡಬ್ಲ್ಯೂ

    SRH 4/1 (1.1)

      

  • 03 Oct 2021 07:25 PM (IST)

    ಕಣಕ್ಕಿಳಿಯುವ ಕಲಿಗಳು

    ಕೋಲ್ಕತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮೊರ್ಗನ್ (ನಾಯಕ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕರವರ್ತಿ

    ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್

  • 03 Oct 2021 07:24 PM (IST)

    ಟಾಸ್ ವಿಡಿಯೋ

  • Published On - Oct 03,2021 7:02 PM

    Follow us
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು