IPL 2021: ಹೈದರಾಬಾದ್ ತಂಡದಲ್ಲಿ ಕಾಶ್ಮೀರಿ ಯುವ ಬೌಲರ್ಗೆ ಅವಕಾಶ; ಇರ್ಫಾನ್ ಪಠಾಣ್ ಸಂತಸ
IPL 2021: ಹೈದರಾಬಾದ್ ತಂಡದಲ್ಲಿ, ಉಮ್ರಾನ್ ಮಲಿಕ್ ಜಮ್ಮು ಮತ್ತು ಕಾಶ್ಮೀರದಿಂದ ಬಂದ ಎರಡನೇ ಕ್ರಿಕೆಟಿಗ. ಜೊತೆಗೆ ಈ ರಾಜ್ಯದಿಂದ ಅಬ್ದುಲ್ ಸಮದ್ ಕೂಡ ಇದೆ ತಂಡದಲ್ಲಿ ಆಡುತ್ತಿದ್ದಾರೆ.
ಐಪಿಎಲ್ 2021 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಅನನುಭವಿ ಆಟಗಾರನಿಗೆ ಅವಕಾಶ ನೀಡಿದೆ. ಟಿ ನಟರಾಜನ್ಗೆ ಕೊರೊನಾದ ಕಾರಣ, ಐಪಿಎಲ್ ಪಂದ್ಯದಲ್ಲಿ ಬದಲಿಯಾಗಿ ತೆಗೆದುಕೊಂಡ ಆಟಗಾರನನ್ನು ಇಂದಿನ ಪಂದ್ಯದಲ್ಲಿ ಆಡಿಸಲಾಗುತ್ತಿದೆ. ಈ ಆಟಗಾರನ ಹೆಸರು ಉಮ್ರಾನ್ ಮಲಿಕ್. ಅವರು ಜಮ್ಮು ಮತ್ತು ಕಾಶ್ಮೀರದವರಾಗಿದ್ದು ಬೌಲರ್ ಆಗಿದ್ದಾರೆ. ಉಮ್ರಾನ್ ಮಲಿಕ್ ಮಧ್ಯಮ ವೇಗದಲ್ಲಿ ಬೌಲ್ ಮಾಡುತ್ತಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ, ಸಂದೀಪ್ ಶರ್ಮಾ ಬದಲಿಗೆ ಅವರಿಗೆ ಅವಕಾಶ ನೀಡಲಾಯಿತು. ಕುತೂಹಲಕಾರಿ ಸಂಗತಿಯೆಂದರೆ ಉಮ್ರಾನ್ ಅಲ್ಪಾವಧಿಯ ಬದಲಿ ಆಟಗಾರನಾಗಿ ಹೈದರಾಬಾದ್ ತಂಡದ ಭಾಗವಾದರು ಮತ್ತು ಈಗ ನೇರವಾಗಿ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆಯುತ್ತಿದ್ದಾರೆ. ಅವರು ಐಪಿಎಲ್ 2021 ಕ್ಕೆ ನೆಟ್ ಬೌಲರ್ ಆಗಿ ಹೈದರಾಬಾದಿನಲ್ಲಿದ್ದರು ಆದರೆ ನಟರಾಜನ್ ಕೊರೊನಾ ಸೋಂಕಿಗೆ ತುತ್ತಾಗಿದ್ದರಿಂದ ಅವರನ್ನು ಮುಖ್ಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕಾಗಿ ಉಮ್ರಾನ್ ಮಲಿಕ್ ಕೇವಲ 1 ಲಿಸ್ಟ್ ಎ (ಏಕದಿನ) ಮತ್ತು 1 ಟಿ 20 ಪಂದ್ಯವನ್ನು ಆಡಿದ್ದಾರೆ. ಅವರು 2021 ರ ಆರಂಭದಲ್ಲಿ ದೇಶೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 21 ವರ್ಷದ ಬೌಲರ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರೈಲ್ವೇಸ್ ವಿರುದ್ಧ ಟಿ 20 ಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು 24 ರನ್ ಗಳಿಗೆ ಮೂರು ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಪಂದ್ಯ ಆಡಿದರು. ಇಲ್ಲಿ ಅವರ 10 ಓವರ್‌ಗಳಲ್ಲಿ 98 ರನ್ಗಳನ್ನು ಎದುರಾಳಿ ಬ್ಯಾಟ್ಸ್‌ಮನ್‌ಗಳು ಲೂಟಿ ಮಾಡಿದರು. ಈ ಪಂದ್ಯದಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದರು.
ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ನಾಲ್ಕನೇ ಕಾಶ್ಮೀರಿ ಹೈದರಾಬಾದ್ ತಂಡದಲ್ಲಿ, ಉಮ್ರಾನ್ ಮಲಿಕ್ ಜಮ್ಮು ಮತ್ತು ಕಾಶ್ಮೀರದಿಂದ ಬಂದ ಎರಡನೇ ಕ್ರಿಕೆಟಿಗ. ಜೊತೆಗೆ ಈ ರಾಜ್ಯದಿಂದ ಅಬ್ದುಲ್ ಸಮದ್ ಕೂಡ ಇದೆ ತಂಡದಲ್ಲಿ ಆಡುತ್ತಿದ್ದಾರೆ. ಸಮದ್ ಪ್ರಬಲ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್. ಮತ್ತೊಂದೆಡೆ, ಉರ್ಮಾನ್ ಮಲಿಕ್ ಐಪಿಎಲ್‌ನಲ್ಲಿ ಆಡುತ್ತಿರುವ ನಾಲ್ಕನೇ ಕಾಶ್ಮೀರಿ ಆಟಗಾರ. ಪರ್ವೇಜ್ ರಸೂಲ್, ರಸಿಕ್ ಸಲಾಂ ಮತ್ತು ಅಬ್ದುಲ್ ಸಮದ್ ಅವರಿಗಿಂತ ಮೊದಲು ಆಡಿದ್ದಾರೆ. ಮಂಜೂರ್ ಅಹ್ಮದ್ ದಾರ್ ಪಂಜಾಬ್ ಕಿಂಗ್ಸ್ ಭಾಗವಾಗಿದ್ದರು. ಆದರೂ ಅವರು ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ.
The young pacer makes his debut in #Risers colours tonight. Go well, Umran! #KKRvSRH #OrangeArmy #OrangeOrNothing #IPL2021 pic.twitter.com/QvpStyxOjF
— SunRisers Hyderabad (@SunRisers) October 3, 2021
ಈ ಹಿಂದೆ ಉಮ್ರಾನ್ ಅವರನ್ನು ಹೈದರಾಬಾದ್ ತಂಡಕ್ಕೆ ಸೇರಿಸಿಕೊಂಡಾಗ, ಇರ್ಫಾನ್ ಪಠಾಣ್ ತುಂಬಾ ಸಂತೋಷ ವ್ಯಕ್ತಪಡಿಸಿದ್ದರು. ಅವರು ಟ್ವೀಟ್ ಮಾಡಿ, “ಐಪಿಎಲ್‌ನಲ್ಲಿ ಮತ್ತೊಂದು ಆಯ್ಕೆಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಅಭಿನಂದನೆಗಳು. ಮರವು ಇನ್ನೂ ಫಲ ನೀಡುತ್ತಿದೆ. ಅದನ್ನು ಮುಂದುವರಿಸಿ. ಇರ್ಫಾನ್ ಪಠಾಣ್ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಕೋಚ್ ಮತ್ತು ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.