
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಮೆನಿಂಜೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಇದೀಗ ಕೋಮಾಕ್ಕೆ ಜಾರಿದ್ದಾರೆ ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ (AAP) ಉಲ್ಲೇಖಿಸಿ cricket.com.au ವರದಿ ಮಾಡಿದೆ.
ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಪ್ರಕಾರ, ಮಾರ್ಟಿನ್ ಮೆನಿಂಜೈಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ನೀಡಲಾದ ಔಷಧಿಗಳ ರಿಯಾಕ್ಷನ್ನಿಂದಾಗಿ ಅವರು ಕೋಮಾಕ್ಕೆ ಜಾರಿದ್ದಾರೆ. ವೈದ್ಯರು ಮಾರ್ಟಿನ್ ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆಗೆ ಮುಂದಾಗಿದ್ದಾರೆ.
ಡೇಮಿಯನ್ ಮಾರ್ಟಿನ್ ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ಡೇಮಿಯನ್ ಮಾರ್ಟಿನ್ 18 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು. 1991-92 ರಿಂದ ಶುರುವಾದ ಅವರ ಕ್ರಿಕೆಟ್ ಕೆರಿಯರ್ 2010 ರವರೆಗೆ ಮುಂದುವರೆದಿತ್ತು. ಈ ಅವಧಿಯಲ್ಲಿ ಒಟ್ಟು 509 ಪಂದ್ಯಗಳನ್ನಾಡಿದ್ದರು. ಈ ವೇಳೆ 54 ಶತಕಗಳೊಂದಿಗೆ ಒಟ್ಟು 23,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
Damien Martyn: Australia’s most aesthetically pleasing batsman to watch 😍😍😍
Unmatched grace, divine timing, flawless purity – Perfection bows to him.👌👌👌@damienmartyn https://t.co/cnEfKSs4yh pic.twitter.com/392HYikM19
— AkCricTalks🎤🇮🇳 (@AKCricTalks) December 15, 2025
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 67 ಟೆಸ್ಟ್ ಪಂದ್ಯಗಳನ್ನಾಡಿರುವ ಡೇಮಿಯನ್ ಮಾರ್ಟಿನ್ 109 ಇನಿಂಗ್ಸ್ಗಳ ಮೂಲಕ 4406 ರನ್ ಕಲೆಹಾಕಿದ್ದಾರೆ. ಈ ವೇಳೆ 13 ಶತಕ ಹಾಗೂ 23 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಹಾಗೆಯೇ 208 ಏಕದಿನ ಪಂದ್ಯಗಳನ್ನಾಡಿದ್ದ ಮಾರ್ಟಿನ್ 182 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 5 ಶತಕಗಳೊಂದಿಗೆ 5346 ರನ್ಗಳು ಮೂಡಿಬಂದಿದ್ದವು.
ಇದರ ಜೊತೆಗೆ ಆಸ್ಟ್ರೇಲಿಯಾ ಪರ 4 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 120 ರನ್ಗಳಿಸಿದ್ದರು. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ
ಇದೀಗ ಆಸ್ಪತ್ರೆಯಲ್ಲಿ ಜೀವನ್ಮರಣದ ವಿರುದ್ಧ ಹೋರಾಡುತ್ತಿರುವ ಡೇಮಿಯನ್ ಮಾರ್ಟಿನ್ ಅವರ ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಹಾರೈಸಿದ್ದಾರೆ.
Published On - 10:14 am, Wed, 31 December 25