ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಎರಡೆರಡು ಆಘಾತ

|

Updated on: Jan 19, 2025 | 6:44 PM

Champions Trophy 2025: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ. ನಾಯಕ ಸ್ಟೀವ್ ಸ್ಮಿತ್ ಮೊಣಕೈ ಗಾಯದಿಂದ ಬಳಲುತ್ತಿದ್ದು ಅವರು ಶ್ರೀಲಂಕಾ ಪ್ರವಾಸಕ್ಕೆ ಹೋಗುವುದು ಅನುಮಾನ ಎನ್ನಲಾಗುತ್ತಿದೆ. ಅಲ್ಲದೆ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಪಾದದ ಗಾಯದಿಂದ ಬಳಲುತ್ತಿದ್ದಾರೆ. ಮತ್ತೊಂದೆಡೆ, ಮ್ಯಾಥ್ಯೂ ಕುಹ್ನೆಮನ್ ಗಾಯದಿಂದಾಗಿ ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಎರಡೆರಡು ಆಘಾತ
ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್
Follow us on

ತವರಿನಲ್ಲಿ ಟೀಂ ಇಂಡಿಯಾವನ್ನು 3-1 ಅಂತರದಲ್ಲಿ ಸೋಲಿಸಿದ್ದ ಆಸ್ಟ್ರೇಲಿಯಾ ತಂಡ ಇದೀಗ ಎರಡು ಟೆಸ್ಟ್ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿದೆ. ಜನವರಿ 29ರಿಂದ ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕಾಂಗರೂ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ, ಈ ಪ್ರವಾಸದಲ್ಲಿ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮೊಣಕೈ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಸ್ತುತ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುತ್ತಿರುವ ಸ್ಮಿತ್ ಫೀಲ್ಡಿಂಗ್ ಮಾಡುವಾಗ ಈ ಇಂಜುರಿಗೆ ತುತ್ತಾಗಿದ್ದಾರೆ. ವಾಸ್ತವವಾಗಿ ಬಹಳ ದಿನಗಳಿಂದಲೇ ಸ್ಮಿತ್ ಮೊಣಕೈ ಸಮಸ್ಯೆಯಿಂದ ಬಳಲುತ್ತಿದ್ದರು. ಇದು ಅವರ ಹಳೆಯ ಗಾಯವಾಗಿದ್ದು, ಮತ್ತೆ ಕಾಣಿಸಿಕೊಂಡಿದೆ. ಮತ್ತೊಂದೆಡೆ, ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಗಾಯಗೊಂಡಿರುವುದು ಆಸ್ಟ್ರೇಲಿಯಾಕ್ಕೆ ದೊಡ್ಡ ತಲೆನೋವಾಗಿದೆ.

ತಂಡದ ಜೊತೆ ಸ್ಮಿತ್ ಪ್ರಯಾಣ ಬೆಳೆಸಿಲ್ಲ

ಆಸ್ಟ್ರೇಲಿಯ ತಂಡ ಶ್ರೀಲಂಕಾಕ್ಕೂ ಮುನ್ನ ದುಬೈನಲ್ಲಿ ಐದು ದಿನಗಳ ತರಬೇತಿ ಶಿಬಿರ ನಡೆಸಲಿದೆ. ಹೀಗಾಗಿ ಸ್ಮಿತ್​ರನ್ನು ಹೊರತುಪಡಿಸಿ ಉಳಿದ 15 ಆಟಗಾರರು ದುಬೈಗೆ ತೆರಳಿದ್ದಾರೆ. ಇತ್ತ ಇಂಜುರಿಗೊಂಡಿರುವ ಸ್ಮಿತ್ ಚಿಕಿತ್ಸೆ ಮತ್ತು ಚೇತರಿಕೆಗಾಗಿ ತಜ್ಞರ ಬಳಿಗೆ ಹೋಗಲಿದ್ದು, ಅವರ ಸಲಹೆಯ ನಂತರವೇ ಅವರು ಆಸ್ಟ್ರೇಲಿಯಾದಿಂದ ಶ್ರೀಲಂಕಾಗೆ ಪ್ರಯಾಣಿಸಲಿದ್ದಾರೆ.

ಸ್ಮಿತ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದಿದ್ದರೆ, ಅವರ ಬದಲಿಯಾಗಿ ಟ್ರಾವಿಸ್ ಹೆಡ್ ಮೊದಲ ಬಾರಿಗೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು. ಸದ್ಯ ಹೆಡ್ ಅವರನ್ನು ಕಾಂಗರೂ ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ಕಳೆದ ವಾರ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಕೂಡ ಗಾಯಗೊಂಡಿದ್ದು, ಅವರ ಬಲಗೈ ಹೆಬ್ಬೆರಳು ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿ ಕುಹ್ನೆಮನ್ ಆಡುವ ಬಗ್ಗೆ ಸಸ್ಪೆನ್ಸ್ ಇದೆ.

ಕಮ್ಮಿನ್ಸ್ ಚಾಂಪಿಯನ್ಸ್ ಟ್ರೋಫಿ ಆಡುತ್ತಾರಾ?

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ ಅತಿ ಹೆಚ್ಚು ಬೌಲಿಂಗ್ ಮಾಡಿದರು. ಈ ಕೆಲಸದ ಹೊರೆಯಿಂದಾಗಿ ಅವರು ಪಾದದ ಗಾಯಕ್ಕೆ ಒಳಗಾಗಿದ್ದರು. ಆದ್ದರಿಂದಲೇ ಅವರ ಶ್ರೀಲಂಕಾ ಪ್ರವಾಸದಿಂದ ಹೊರಗುಳಿದಿದ್ದರು. ಆದಾಗ್ಯೂ, ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಇದೀಗ ಅವರ ಗಾಯದ ಬಗ್ಗೆ ದೊಡ್ಡ ಅಪ್‌ಡೇಟ್‌ ಹೊರಬಿದ್ದಿದ್ದು, ವರದಿಯ ಪ್ರಕಾರ ಅವರು ಗಾಯದಿಂದ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಆಡುವ ಬಗ್ಗೆ ಇನ್ನೂ ಸಸ್ಪೆನ್ಸ್ ಇದೆ. ಫೆಬ್ರವರಿ 22 ರಿಂದ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಆಸ್ಟ್ರೇಲಿಯಾ ತಂಡವು ತನ್ನ ಚಾಂಪಿಯನ್ಸ್ ಟ್ರೋಫಿ ಪ್ರಯಾಣವನ್ನು ಪ್ರಾರಂಭಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ