ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಭಾರತವನ್ನು 345 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿತ್ತು. ಓಪನರ್ಗಳಂತು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ರಹಾನೆ (Ajinkya Rahane) ಪಡೆಗೆ ಕಂಟಕವಾಗಿ ಪರಿಣಮಿಸಿದ್ದರು. ಕೇನ್ ಪಡೆಯ ದಿಟ್ಟ ಬ್ಯಾಟಿಂಗ್ಗೆ ಬ್ರೇಕ್ ಹಾಕಿದ್ದು ಅಕ್ಷರ್ ಪಟೇಲ್ (Axar Patel). ನ್ಯೂಜಿಲೆಂಡ್ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದ ಪಟೇಲ್ 5 ವಿಕೆಟ್ ಕಿತ್ತು ಕ್ರಿಕೆಟ್ ದಂತಕಥೆಗಳಾದ ಟಾಮ್ ರಿಚರ್ಡಸನ್, ರೋಡ್ನಿ ಹಾಗ್ ಅವರ ದಾಖಲೆಗಳನ್ನು ಸರಿಗಟ್ಟಿದ್ದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಇವರು ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“ನನ್ನನ್ನು ಯಾರು ವೈಟ್ ಬಾಲ್ ಪ್ಲೇಯರ್ ಎಂದು ಕರೆದರೋ ಗೊತ್ತಿಲ್ಲ. ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಭಾರತ ಎ ತಂಡದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ನಾನು ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಸೀಮಿತ ಓವರ್‌ಗಳ ಆಟಗಾರ ಎಂದು ನಾನು ಯಾವತ್ತೂ ಭಾವಿಸಿಲ್ಲ. ವೈಟ್ ಬಾಲ್ ಆಗಲಿ ಅಥವಾ ರೆಡ್ ಬಾಲ್ ಆಗಲಿ ಇದೆಲ್ಲವೂ ಮನಸನ್ನು ಅವಲಂಬಿಸಿರುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ಪಡೆದುಕೊಂಡು ಉತ್ತಮ ಪ್ರದರ್ಶನ ತೋರಲು ಕಾಯುತ್ತಿದ್ದೆ. ಅದರಂತೆ ಇಂಗ್ಲೆಂಡ್ ವಿರುದ್ಧ ತವರು ಸರಣಿಯಲ್ಲಿ ಅವಕಾಶ ಪಡೆದುಕೊಂಡು ಉತ್ತಮ ಪ್ರದರ್ಶನ ತೋರಿದ್ದೆ. ತಂಡದಲ್ಲಿ ನನಗೆ ಸ್ಥಾನ ನೀಡಿ, ನನ್ನ ಮೇಲೆ ವಿಶ್ವಾಸವಿಟ್ಟಿರುವ ತಂಡಕ್ಕೆ ನಾನು ಅಭಾರಿಯಾಗಿದ್ದೇನೆ” ಎಂದು ಹೇಳಿದ್ದಾರೆ.
“ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಆಡಿದ 7 ಇನಿಂಗ್ಸ್‌ಗಳಲ್ಲಿ ಇದು ನನ್ನ ಐದನೇ 5 ವಿಕೆಟ್ ಸಾಧನೆ. ಮೈದಾನದಲ್ಲಿ ಆಡುವಾಗ ನನಗೆ ನಾನೇ ಖುಷಿಪಡುತ್ತೇನೆ. ಹಾಗಾಗಿ, ಅಶ್ವಿನ್ ಹಾಗೂ ಜಡೇಜಾ ಬಗ್ಗೆ ನಾನು ಚಿಂತಿಸುವುದಿಲ್ಲ. ಆದರೆ, ನನ್ನ ಕೈಗೆ ಚೆಂಡು ಸಿಕ್ಕಾಗ ಪಿಚ್ ಹೇಗಿದೆ, ವಿಕೆಟ್ ಹೇಗೆ ಪಡೆಯಬೇಕೆಂದು ಯೋಚಿಸುತ್ತೇನೆ. ಇದು ಬಿಟ್ಟು ಹಿರಿಯ ಸ್ಪಿನ್ನರ್ ಅಥವಾ ಮುಂಚೂಣಿಯಲ್ಲಿರುವವರ ಬಗ್ಗೆ ಚಿಂತಿಸುವುದಿಲ್ಲ” ಎಂದು ಅಕ್ಷರ್ ಪಟೇಲ್ ಮೂರನೇ ದಿನದಾಟ ಮುಗಿದ ಬಳಿಕ ತಿಳಿಸಿದ್ದಾರೆ.
Special: @ashwinravi99 takes centre stage to interview Mr. Fifer @akshar2026 & Super sub @KonaBharat. ?
You don’t want to miss this rendezvous with the #TeamIndia trio after Day 3 of the Kanpur Test. ?- By @28anand
Full interview ? ⬇️ #INDvNZ @Paytm https://t.co/KAycXfmiJG pic.twitter.com/jZcAmU41Nf
— BCCI (@BCCI) November 27, 2021
ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಪಡೆಯ ಪ್ರಮುಖ ಐದು ವಿಕೆಟ್ ಗಳನ್ನು ಪಡೆದ ಅಕ್ಸರ್ ಪಟೇಲ್ ಆ ಮೂಲಕ 6ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ಅಂತೆಯೇ ಅತೀ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಭಾರತದ ಪರ ಎಲ್ ಶಿವರಾಮಕೃಷ್ಣನ್ ಮತ್ತು ನರೇಂದ್ರ ಹಿರ್ವಾನಿ ತಲಾ 3 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.
India vs New Zealand: ರೋಚಕ ಘಟ್ಟಕ್ಕೆ ತಲುಪುತ್ತಿದೆ ಕಾನ್ಪುರ ಟೆಸ್ಟ್: ಕುತೂಹಲ ಕೆರಳಿಸಿದೆ 4ನೇ ದಿನದಾಟ
(Axar Patel says the secret of his success afetr India vs New Zealand 1st Test Day 3)