ರಜತ್ ಪಾಟಿದಾರ್ ಭರ್ಜರಿ ಸಿಕ್ಸ್, ಅಭಿಮಾನಿಯ ಬೋಲ್ ತಲೆಗೆ ಬಡಿದ ಚೆಂಡು, ನೋವು ಅನುಭವಿಸಿದ ಹಿರಿಯ ವ್ಯಕ್ತಿ!
ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದ ವೇಳೆ ಅರ್ಸಿಬಿ ಆಟಗಾರ ರಜತ್ ಪಾಟಿದಾರ್ ಭರ್ಜರಿ ಸಿಕ್ಸ್ ಒಂದನ್ನು ಬಾರಿಸಿದರು. ಈ ಚೆಂಡು ಹಿರಿಯ ಅಭಿಮಾನಿಯೊಬ್ಬರ ಬೋಲ್ ತಲೆಗೆ ತಾಗಿದ ಘಟನೆ ನಡೆಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಚಾಜ್ ಕಿಂಗ್ಸ್(Punjab Kings) ತಂಡದ ನಡುವೆ ನಿನ್ನೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಅಭಿಮಾನಿಯೊಬ್ಬರು ನೋವು ಅನುಭವಿಸುವ ಪ್ರಸಂಗ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ಹೌದು, ಅರ್ಸಿಬಿ(RCB) ಆಟಗಾರ ರಜತ್ ಪಾಟಿದಾರ್(Rajat patidar) ಅವರು 9ನೇ ಓವರ್ನಲ್ಲಿ 102 ಮೀಟರ್ ದೂರದ ಸಿಕ್ಸ್ ಅನ್ನು ಬಾರಿಸಿದರು. ಹೀಗೆ ಹೋದ ಚೆಂಡು ಸ್ಟೇಡಿಯಂನಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿಯೊಬ್ಬರ ತಲೆಗೆ ಬಡಿದಿದೆ. ಈ ವೇಳೆ ಅವರು ನೋವಿನಿಂದ ಅಸ್ವಸ್ಥರಾಗಿದ್ದು, ಪಕ್ಕದಲ್ಲಿ ಕುಳಿತು ಪಂದ್ಯ ವಿಕ್ಷಿಸುತ್ತಿದ್ದ ಮಹಿಳೆಯೊಬ್ಬರು ಅವರ ನೆರವಿಗೆ ದಾವಿಸಿದ್ದಾರೆ. ಅಲ್ಲದೆ, ಆ ಹಿರಿಯ ವ್ಯಕ್ತಿಯ ತಲೆಯನ್ನು ಸವರಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
— Varma Fan (@VarmaFan1) May 13, 2022
ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ಪ್ಲೇಆಫ್ ತಲುಪಲು ಶಕ್ತಿ ಸಿಕ್ಕಂತಾಗಿದೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಪಂಜಾಬ್, 20 ಓವರ್ಗಳಲ್ಲಿ 209 ರನ್ ಬಾರಿಸಿ ಆರ್ಸಿಬಿಗೆ ಬೃಹತ್ ಮೊತ್ತದ ಗೆಲುವಿನ ಗುರಿ ನೀಡಿತು. ಗುರಿ ಬೆನ್ನತ್ತಿದ ಆರ್ಸಿಬಿ, 20 ಓವರ್ಗಳಲ್ಲಿ 155ರನ್ ಬಾರಿಸಿ ಸೋಲು ಅನುಭವಿಸಿತು.
ಪಂಜಾಬ್ ತಂಡವು ಅರ್ಸಿಬಿ ವಿರುದ್ಧ 54ರನ್ಗಳ ಅಂತರದಿಂದ ಗೆಲುವು ದಾಖಲಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಕನಸು ಕೂಡ ಜೀವಂತವಾಗಿದ್ದು, ಲಖ್ನೋ ತಂಡದ ವಿರುದ್ಧ ಗೆಲುವು ದಾಖಲಿಸುವುದು ಅನಿವಾರ್ಯವಾಗಿದೆ. ಸದ್ಯ 13 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ 14 ಪಾಯಿಂಟ್ಗಳೊಂದಿಗೆ 4ನೇ ಸ್ಥಾನದಲ್ಲಿದೆ. ನಿನ್ನೆಯ ಗೆಲುವಿನೊಂದಿಗೆ ಪಂಜಾಬ್ 6ನೇ ಸ್ಥಾನಕ್ಕೇರಿದೆ.
Published On - 1:34 pm, Sat, 14 May 22