ಭಾರತ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಮ್ಮದುಲ್ಲಾ, ಹೌದು, ಈ ಸರಣಿಯ ನಂತರ ನಾನು ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗುತ್ತಿದ್ದೇನೆ. ಈ ಮೊದಲೇ ನಿರ್ಧಾರವಾದಂತೆ ಈ ಸ್ವರೂಪವನ್ನು ತೊರೆಯಲು ಇದು ಸರಿಯಾದ ಸಮಯ. ಇನ್ನು ಮುಂದೆ ನಾನು ಏಕದಿನ ಪಂದ್ಯಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ.