
ಈ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಅಥವಾ ರಿಷಬ್ ಪಂತ್ (Rishabh Pant) ಅಂತಹ ಪ್ರಸಿದ್ಧ ಆಟಗಾರನಲ್ಲ. ಆದರೆ ಆತ ಆಟದ ಮೇಲೆ ತೋರಿದ ಉತ್ಸಾಹ ಅವರಿಗಿಂತ ಕಡಿಮೆಯಿಲ್ಲ. ತಂದೆಗೆ ತನ್ನ ಮಗುವಿನ ಮರಣದ ನೋವನ್ನು ಅರಗಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಕ್ರಿಕೆಟ್‌ನ ವಿಷಯಕ್ಕೆ ಬಂದಾಗ, ತಂಡ ಸಂಕಷ್ಟದಲ್ಲಿದ್ದಾಗ ನೆರವಾಗಿ ಆ ಕ್ರಿಕೆಟರ್ ಉತ್ಸಾಹಕ್ಕೆ ವಿಶಿಷ್ಟ ಉದಾಹರಣೆಯನ್ನು ನೀಡಿದರು. ನಾವು ಚಂಡೀಗಢ ವಿರುದ್ಧದ ರಣಜಿ ಟ್ರೋಫಿ ( Ranji Trophy) ಪಂದ್ಯದಲ್ಲಿ ಶತಕ ಸಿಡಿಸಿರುವ ವಿಷ್ಣು ಸೋಲಂಕಿ (Vishnu Solanki) ಬಗ್ಗೆ ಮಾತನಾಡುತ್ತಿದ್ದೇವೆ. ವಿಷ್ಣು ಸೋಲಂಕಿ ಕೆಲ ದಿನಗಳ ಹಿಂದೆಯಷ್ಟೇ ತಂದೆಯಾದರು. ಅವರ ಮನೆಯ ಅಂಗಳದಲ್ಲಿ ಹೆಣ್ಣು ಮಗು ಜನಿಸಿತು. ಆದರೆ ಅನಾರೋಗ್ಯದ ಕಾರಣದಿಂದ ಆ ಮಗು ಸಾವನ್ನಪ್ಪಿತು. ಮಗಳ ಸಾವು ವಿಷ್ಣುವನ್ನು ಬೆಚ್ಚಿಬೀಳಿಸಿತ್ತು. ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿತ್ತು. ಆದರೆ, ಬರೋಡಾ ಪರ ಕ್ರಿಕೆಟ್ ಆಡುವ ವಿಷ್ಣು ನೋವನ್ನು ಬದಿಗಿಟ್ಟು ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.
ವಿಷ್ಣು ಚಂಡೀಗಢದ ವಿರುದ್ಧ ಬರೋಡಾ ಪರ ಉತ್ತಮ ಆಟ ಪ್ರದರ್ಶಿಸಿಸಿ ಅದ್ಭುತ ಶತಕಕ್ಕೆ ಸ್ಕ್ರಿಪ್ಟ್ ಬರೆದರು. ಕಷ್ಟಗಳನ್ನು ದಾಟಿ ವಿಷ್ಣು ಸೋಲಂಕಿ ಈ ಶತಕ ಬಾರಿಸಿದ್ದನ್ನು ನೋಡಿದ ಬರೋಡಾ ಕ್ರಿಕೆಟ್ ಸಂಸ್ಥೆಯ ಸಿಇಒ ಅವರನ್ನು ರಿಯಲ್ ಹೀರೋ ಎಂದು ಬಣ್ಣಿಸಿದ್ದಾರೆ. ಇಷ್ಟೇ ಅಲ್ಲ, ವಿಷ್ಣು ಸೋಲಂಕಿ ಅವರ ಈ ದಿಟ್ಟ ಇನ್ನಿಂಗ್ಸ್‌ಗೆ ಎದುರಾಳಿ ತಂಡದ ಆಟಗಾರರು ಸಹ ಸೆಲ್ಯೂಟ್ ಹೊಡೆದಿದೆ.
ಸೋಲಂಕಿ ಆಟಕ್ಕೆ ಎದುರಾಳಿ ಸಲಾಂ
ರಣಜಿ ಟ್ರೋಫಿ ಎಲೈಟ್ ಗುಂಪಿನ ಬಿ ಪಂದ್ಯದಲ್ಲಿ ಚಂಡೀಗಢ ವಿರುದ್ಧ ವಿಷ್ಣು ಸೋಲಂಕಿ 12 ಬೌಂಡರಿಗಳ ಸಹಾಯದಿಂದ 104 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ ಈ ಶತಕದ ಇನ್ನಿಂಗ್ಸ್‌ನಿಂದಾಗಿ ತಂಡವು ಚಂಡೀಗಢ ವಿರುದ್ಧ ಪ್ರಾಬಲ್ಯ ಮೆರೆದಿದೆ. ಈಗ ಸೌರಾಷ್ಟ್ರ ಪರ ರಣಜಿ ಟ್ರೋಫಿ ಆಡುತ್ತಿರುವ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ ಸೋಶೀಯಲ್ ಮೀಡಿಯಾದಲ್ಲಿ ಸೋಲುಂಕಿ ಶತಕಕ್ಕೆ ಅಭಿನಂದನೆ ತಿಳಿಸಿದ್ದಾರೆ.ಜೊತೆಗೆ ವಿಷ್ಣು ಮತ್ತು ಅವರ ಕುಟುಂಬಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಬ್ಯಾಟ್‌ನಿಂದ ಇನ್ನೂ ಹೆಚ್ಚಿನ ಶತಕಗಳು ಬರಲಿ ಎಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
What a player . Has to be the toughest player i have known. A big salute to vishnu and his family by no means this is easy? wish you many more hundreds and alot of success ?? pic.twitter.com/i6u7PXfY4g
— Sheldon Jackson (@ShelJackson27) February 25, 2022
ಇದನ್ನೂ ಓದಿ:IND vs SL: ಧರ್ಮಶಾಲಾದಲ್ಲಿ ಅಂಕಿಅಂಶಗಳೇ ಭಾರತಕ್ಕೆ ವಿಲನ್; ಶ್ರೀಲಂಕಾಗೆ ಗೆಲುವಿನ ಅವಕಾಶ!