BBL 2021-22: ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ ಡೇನಿಯಲ್ ಸ್ಯಾಮ್ಸ್​

| Updated By: ಝಾಹಿರ್ ಯೂಸುಫ್

Updated on: Jan 23, 2022 | 5:13 PM

ಬಿಗ್ ಬ್ಯಾಷ್ ಲೀಗ್‌ನ ಈ ಸೀಸನ್​ನಲ್ಲಿ 10 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಐದು ಆಟಗಾರರಿದ್ದಾರೆ. ಈ ಬಾರಿಯ ಬಿಬಿಎಲ್​ನಲ್ಲಿ ಮ್ಯಾಥ್ಯೂ ಶಾರ್ಟ್ 12 ಕ್ಯಾಚ್‌ಗಳನ್ನು ಹಿಡಿದರೆ, ಸಿಡ್ನಿ ಸಿಕ್ಸರ್ಸ್‌ನ ಶಾನ್ ಅಬಾಟ್ ಮತ್ತು ಸಿಡ್ನಿ ಥಂಡರ್‌ನ ಬೆನ್ ಕಟಿಂಗ್ 11 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

BBL 2021-22: ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ ಡೇನಿಯಲ್ ಸ್ಯಾಮ್ಸ್​
Daniel Sams
Follow us on

ಕ್ರಿಕೆಟ್‌ನಲ್ಲಿ ಒಂದು ಮಾತಿದೆ…ಕ್ಯಾಚಸ್ ವಿನ್ ಮ್ಯಾಚಸ್…ಅಂದರೆ ಕ್ಯಾಚ್ ಹಿಡಿದ್ರೆ ಪಂದ್ಯವನ್ನು ಗೆಲ್ಲಬಹುದು ಎಂದು. ಏಕೆಂದರೆ ಫೀಲ್ಡಿಂಗ್ ಕೂಡ ಗೆಲುವು ಅಥವಾ ಸೋಲನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ (BBL 2021-22) ನಲ್ಲಿ ಕ್ರಿಕೆಟ್ ಅಭಿಮಾನಿಗಳು ಒಂದಕ್ಕಿಂತ ಹೆಚ್ಚು ಅದ್ಭುತ ಕ್ಯಾಚ್​ಗಳನ್ನು ವೀಕ್ಷಿಸಿದ್ದಾರೆ . ಭಾನುವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ನಡುವಿನ ನಾಕೌಟ್ ಪಂದ್ಯದಲ್ಲೂ ಇದೇ ರೀತಿಯ ಅದ್ಭುತ ಕ್ಯಾಚ್​ ಒಂದು ಮೂಡಿಬಂದಿದೆ. ಸಿಡ್ನಿ ಥಂಡರ್ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರು ಅತ್ಯುತ್ತಮ ಕ್ಯಾಚ್ ಹಿಡಿದಿದ್ದು , ಈ ಕ್ಯಾಚ್​ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಗ್ ಬ್ಯಾಷ್ ಲೀಗ್‌ನ ಕ್ವಾರ್ಟರ್-ಫೈನಲ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮೊದಲು ಬ್ಯಾಟ್ ಮಾಡಿತು. ಆರಂಭಿಕ ಆಟಗಾರ ಅಲೆಕ್ಸ್​ ಕ್ಯಾರಿ ಅಡಿಲೇಡ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದ್ದರು. 5ನೇ ಓವರ್​ನಲ್ಲಿ 40 ರನ್​ಗಳ ಗಡಿದಾಟಿಸಿದ ಕ್ಯಾರಿ ತನ್ವೀರ್ ಸಂಘಾ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಗೆರೆ ದಾಟಲಿದೆ ಅಂದುಕೊಂಡಿದ್ದ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ಡೇನಿಯಲ್ ಸ್ಯಾಮ್ಸ್, ಮಿಡ್‌ವಿಕೆಟ್ ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ಹಿಡಿದರು. ರನ್ನಿಂಗ್​ನೊಂದಿಗೆ ಬಂದ ಸ್ಯಾಮ್ಸ್​ ಬೌಂಡರಿ ಲೈನ್ ಬಳಿ ಹಿಂದಕ್ಕೆ ಡೈವ್ ಹೊಡೆಯುವ ಮೂಲಕ ಅದ್ಭುತವಾಗಿ ಚೆಂಡನ್ನು ಹಿಡಿದರು. ಇದರೊಂದಿಗೆ ಅಲೆಕ್ಸ್ ಕ್ಯಾರಿ ಇನಿಂಗ್ಸ್ ಅಂತ್ಯವಾಯಿತು. ಇದೀಗ ಈ ಅಧ್ಭುತ ಫೀಲ್ಡಿಂಗ್ ವಿಡಿಯೋ ವೈರಲ್ ಆಗಿದೆ.

ಡೇನಿಯಲ್ ಸ್ಯಾಮ್ಸ್ ಇದಕ್ಕೂ ಮುನ್ನ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅನೇಕ ಉತ್ತಮ ಕ್ಯಾಚ್‌ಗಳನ್ನು ಹಿಡಿದು ಗಮನ ಸೆಳೆದಿದ್ದಾರೆ. ಮೆಲ್ಬೋರ್ನ್ ರೆನೆಗೇಡ್ಸ್ ಫೀಲ್ಡರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಕೂಡ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಬೌಂಡರಿ ಲೈನ್‌ನಲ್ಲಿ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದು ಮಿಂಚಿದ್ದರು. ಹಾಗೆಯೇ ಮೆಲ್ಬೋರ್ನ್ ಸ್ಟಾರ್ಸ್ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಈ ಸೀಸನ್​ನಲ್ಲಿ ಹಿಮ್ಮುಖವಾಗಿ ಓಡಿ ಪ್ರಚಂಡ ಕ್ಯಾಚ್ ಹಿಡಿದಿದ್ದರು.

ಬಿಗ್ ಬ್ಯಾಷ್ ಲೀಗ್‌ನ ಈ ಸೀಸನ್​ನಲ್ಲಿ 10 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಐದು ಆಟಗಾರರಿದ್ದಾರೆ. ಈ ಬಾರಿಯ ಬಿಬಿಎಲ್​ನಲ್ಲಿ ಮ್ಯಾಥ್ಯೂ ಶಾರ್ಟ್ 12 ಕ್ಯಾಚ್‌ಗಳನ್ನು ಹಿಡಿದರೆ, ಸಿಡ್ನಿ ಸಿಕ್ಸರ್ಸ್‌ನ ಶಾನ್ ಅಬಾಟ್ ಮತ್ತು ಸಿಡ್ನಿ ಥಂಡರ್‌ನ ಬೆನ್ ಕಟಿಂಗ್ 11 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಹಾಗೆಯೇ ಸಿಡ್ನಿ ಥಂಡರ್‌ನ ಕ್ರಿಸ್ ಗ್ರೀನ್ ಮತ್ತು ಹೊಬರ್ಟ್ ಹರಿಕೇನ್ಸ್‌ನ ಡಾರ್ಸಿ ಶಾರ್ಟ್ 10 ಕ್ಯಾಚ್‌ಗಳನ್ನು ಹಿಡಿದು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(BBL 2021-22: Daniel Sams amazing catch of alex carey)

Published On - 5:06 pm, Sun, 23 January 22