ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ 13ನೇ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಸಿಡ್ನಿ ತಂಡದ ನಾಯಕ ಮೊಯಿಸೆಸ್ ಹೆನ್ರಿಕ್ಸ್ ಬೌಲಿಂಗ್ ಆಯ್ದುಕೊಂಡರು. ಅತ್ತ ಇನಿಂಗ್ಸ್ ಆರಂಭಿಸಿದ ಮೆಲ್ಬೋರ್ನ್ ತಂಡವು 6 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ವೇಳೆ ಕಣಕ್ಕಿಳಿದ ನಾಯಕ ಗ್ಲೆನ್ ಮ್ಯಾಕ್ಸ್ವೆಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
ಸ್ಪೋಟಕ ಇನಿಂಗ್ಸ್ ಮೂಲಕ ಆರಂಭಿಕ ಆಘಾತಕ್ಕೆ ಸಿಲುಕಿದ್ದ ತಂಡವನ್ನು ಮೇಲೆತ್ತಿದರು. ಸಿಡ್ನಿ ಸಿಕ್ಸರ್ಸ್ ಬೌಲರುಗಳ ಬೆಂಡೆತ್ತಿದ ಮ್ಯಾಕ್ಸ್ವೆಲ್ 12 ಫೋರ್ ಹಾಗೂ 3 ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಕೇವಲ 57 ಎಸೆತಗಳಲ್ಲಿ 103 ರನ್ ಬಾರಿಸಿ ಅಬ್ಬರಿಸಿದರು. ಈ ಬಿರುಸಿನ ಬ್ಯಾಟಿಂಗ್ ಪರಿಣಾಮ ಮೆಲ್ಬೋರ್ನ್ ಸ್ಟಾರ್ಸ್ ತಂಡವು ನಿಗದಿತ 20 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ ತಂಡಕ್ಕೆ ಜೋಶ್ ಫಿಲಿಪೆ ಸಿಡಿಲಬ್ಬರದ ಆರಂಭ ಒದಗಿಸಿದರು. ಆರಂಭಿಕ ಜೇಮ್ಸ್ ವಿನ್ಸ್ (9) ಬೇಗನೆ ಔಟಾದರೂ, ಫಿಲಿಪೆ ಅಬ್ಬರ ಮಾತ್ರ ಮುಂದುವರೆದಿತ್ತು. ಮತ್ತೊಂದೆಡೆ ಹೆನ್ರಿಕ್ಸ್ (29), ಜೋರ್ಡನ್ ಸಿಲ್ಕ್ (25) ಉತ್ತಮ ಸಾಥ್ ನೀಡಿದರು. ಅಂತಿಮವಾಗಿ 61 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ನೊಂದಿಗೆ ಜೋಶ್ ಫಿಲಿಪೆ ಅಜೇಯ 99 ರನ್ ಬಾರಿಸಿದರು. ಈ ಮೂಲಕ 19.4 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 182 ರನ್ಗಳಿಸುವ ಮೂಲಕ ಸಿಡ್ನಿ ಸಿಕ್ಸರ್ಸ್ ಭರ್ಜರಿ ಜಯ ಸಾಧಿಸಿತು. ಅತ್ತ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಶತಕ ವ್ಯರ್ಥವಾಯಿತು.
Even though the Stars narrowly missed out on the win, Glenn Maxwell’s maiden BBL century was still a very special moment! ? #BBL11 pic.twitter.com/wq1tiwU4B1
— KFC Big Bash League (@BBL) December 15, 2021
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!
(BBL 2021: Glenn Maxwell magic at the MCG: Stars skipper’s superb century)