AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಬಿಸಿಸಿಐ ಬಿಗ್​ಬಾಸ್ ಗಂಗೂಲಿ ಕೆಂಗಣ್ಣಿಗೆ ಗುರಿಯಾಗಿರುವ ಕೊಹ್ಲಿಯ ಮುಂದಿರುವ 3 ಸವಾಲುಗಳಿವು

Virat Kohli: ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಮಂಡಳಿ ಪುರಸ್ಕರಿಸಿತು ಎಂದು ವಿರಾಟ್ ಹೇಳಿಕೊಂಡಿದ್ದಾರೆ. ಆದರೆ ಈ ಹಿಂದೆ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಿ ಎಂದು ನಾವು ಕೊಹ್ಲಿ ಬಳಿ ಮನವಿ ಮಾಡಿದ್ದೇವು ಎನ್ನುವ ಹೇಳಿಕೆ ಸುಳ್ಳು ಎಂಬುದು ಈಗ ಜಗಜ್ಜಾಹೀರಾಗಿದೆ

Virat Kohli: ಬಿಸಿಸಿಐ ಬಿಗ್​ಬಾಸ್ ಗಂಗೂಲಿ ಕೆಂಗಣ್ಣಿಗೆ ಗುರಿಯಾಗಿರುವ ಕೊಹ್ಲಿಯ ಮುಂದಿರುವ 3 ಸವಾಲುಗಳಿವು
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on: Dec 16, 2021 | 5:35 PM

Share

ಭಾರತ ತಂಡ ದಕ್ಷಿಣ ಆಫ್ರಿಕಾ ತಲುಪಿದೆ. ಡಿಸೆಂಬರ್ 26 ರಿಂದ ಸೆಂಚುರಿಯನ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿವೆ. ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ನಂತರ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತು. ಈಗ ಈ ಕುರ್ಚಿಯನ್ನು ಉಳಿಸುವ ಸವಾಲು ಅವರ ಮುಂದಿದೆ. ದಕ್ಷಿಣ ಆಫ್ರಿಕಾಕ್ಕೆ ಹೊರಡುವ ಒಂದು ವಾರದ ಮೊದಲು, ಟೀಂ ಇಂಡಿಯಾದೊಳಗೆ ವಿವಾದ ಬುಗಿಲೆದ್ದಿದೆ. ಡಿಸೆಂಬರ್ 8 ರಂದು ತಂಡದ ಘೋಷಣೆಯೊಂದಿಗೆ, ಆಯ್ಕೆದಾರರು ODI ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಿದರು.ಇದರೊಂದಿಗೆ ವಿವಾದದ ಹೊಗೆ ಹಬ್ಬಲು ಆರಂಭಿಸಿತು.

ಕಥೆ ಕೂಡ ಚೆನ್ನಾಗಿತ್ತು. ಆದರೆ ಟಿ20 ನಾಯಕತ್ವ ತೊರೆಯುವ ಕುರಿತು ವಿರಾಟ್ ಕೊಹ್ಲಿ ನೀಡಿದ ಹೇಳಿಕೆಯಿಂದ ಕಥೆ ಬದಲಾಗಿದೆ. ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಮಂಡಳಿ ಪುರಸ್ಕರಿಸಿತು ಎಂದು ವಿರಾಟ್ ಹೇಳಿಕೊಂಡಿದ್ದಾರೆ. ಆದರೆ ಈ ಹಿಂದೆ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಿ ಎಂದು ನಾವು ಕೊಹ್ಲಿ ಬಳಿ ಮನವಿ ಮಾಡಿದ್ದೇವು ಎನ್ನುವ ಹೇಳಿಕೆ ಸುಳ್ಳು ಎಂಬುದು ಈಗ ಜಗಜ್ಜಾಹೀರಾಗಿದೆ. ಕೊಹ್ಲಿಯ ಈ ಹೇಳಿಕೆಯಿಂದ ಈಗ ವಿರಾಟ್ ಮತ್ತು ರೋಹಿತ್ ನಡುವೆ ಕಾಣಿಸುತ್ತಿದ್ದ ಟೆನ್ಶನ್ ಈಗ ವಿರಾಟ್ ಮತ್ತು ಬಿಸಿಸಿಐ ನಡುವೆ ಕಾಣಿಸುತ್ತಿದೆ ಎಂಬುದೇ ಸ್ಟೋರಿಯಾಗಿದೆ. ಬಿಸಿಸಿಐ ಬಿಗ್​ಬಾಸ್ ಗಂಗೂಲಿ ಕೆಂಗಣ್ಣಿಗೆ ಗುರಿಯಾಗಿರುವ ಕೊಹ್ಲಿ ಮುಂದೆ ಎದುರಿಸಬೇಕಾದ ಕೆಲವು ಸವಾಲುಗಳ ಬಗ್ಗೆ ನಾವೀಗ ಹೇಳಲಿದ್ದೇವೆ.

ವಿರಾಟ್ ಫಾರ್ಮ್ ಕೂಡ ದೊಡ್ಡ ಸವಾಲು ವಿರಾಟ್ ಕೊಹ್ಲಿ ಬಹಳ ದಿನಗಳಿಂದ ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ. ಅವರ ಶತಕಗಳ ಸಂಖ್ಯೆ 70ಕ್ಕೆ ಅಂಟಿಕೊಂಡಿದೆ. ಒಂದು ಕಾಲದಲ್ಲಿ ಕ್ರೀಸ್‌ನಲ್ಲಿ ಉಳಿದುಕೊಂಡು ಶತಕ ಬಾರಿಸುವುದರಲ್ಲಿ ಹೆಸರುವಾಸಿಯಾಗಿದ್ದ ವಿರಾಟ್ ಕೊಹ್ಲಿ ಈಗ ಮಂಕಾಗಿದ್ದಾರೆ. ವಿರಾಟ್ ಕೊಹ್ಲಿ ಎರಡು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ಶತಕ ದಾಖಲಿಸಿದ್ದರು. ಇದಾದ ಬಳಿಕ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ.

ಏಕದಿನ ಪಂದ್ಯದಲ್ಲೂ ಅದೇ ಕಥೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಒಟ್ಟುಗೂಡಿಸಿ, ವಿರಾಟ್ ಕೊಹ್ಲಿ ಹಲವು ಬಾರಿ 60-70 ರನ್ ಗಳಿಸಿದ್ದಾರೆ ಆದರೆ ಅದನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅವರ 71ನೇ ಶತಕ ಚರ್ಚೆಯ ವಿಷಯವಾಗಿದೆ. ಎರಡು ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಅವರ ನೂರು ಶತಕಗಳ ದಾಖಲೆ ಸುಲಭವಾಗಿ ಮುರಿಯುವಂತಿತ್ತು, ಈಗ ದೊಡ್ಡ ಮಟ್ಟದಲ್ಲಿ ಸುರಕ್ಷಿತವಾಗಿ ಕಾಣಲಾರಂಭಿಸಿದೆ. ವಿರಾಟ್ ಕೊಹ್ಲಿ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಶತಕ ಬಾರಿಸುವ ಒತ್ತಡಕ್ಕೆ ಸಿಲುಕಲಿದ್ದಾರೆ.

ಬಯೋ ಬಬಲ್‌ನ ಮಾನಸಿಕ ಒತ್ತಡವೂ ಒಂದು ಸವಾಲು ಬಯೋ ಬಬಲ್‌ನ ಮಾನಸಿಕ ಒತ್ತಡ ಪ್ರತಿಯೊಬ್ಬ ಆಟಗಾರನಲ್ಲೂ ಇದೆ ಎಂದು ವಿರಾಟ್ ಕೊಹ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿಂದೆ ಭಾರತ ತಂಡ ಸುಮಾರು 6 ತಿಂಗಳ ಕಾಲ ಭಾರತದ ಹೊರಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌, ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಹಾಗೂ ಐಪಿಎಲ್‌ನ ಎರಡನೇ ಲೆಗ್ ಮತ್ತು ಅಂತಿಮವಾಗಿ ಟಿ 20 ವಿಶ್ವಕಪ್. ಇದಾದ ಬಳಿಕ ಸುಮಾರು ಒಂದು ತಿಂಗಳ ಕಾಲ ಮನೆಯಲ್ಲೇ ಉಳಿದುಕೊಂಡಿದ್ದ ಭಾರತ ತಂಡ ಮತ್ತೆ ಬಯೋಬಬಲ್ ಸೇರಿದೆ. ಮತ್ತೊಮ್ಮೆ ಆಟಗಾರರು ಮುಂದಿನ ಒಂದೂವರೆ ತಿಂಗಳ ಕಾಲ ಕಟ್ಟುನಿಟ್ಟಾದ ಬಯೋ ಬಬಲ್‌ನಲ್ಲಿ ಬದುಕಬೇಕಾಗುತ್ತದೆ. ಕೊರೊನಾದ ಹೊಸ ರೂಪಾಂತರವಾದ ಓಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಕಾರಣ ಆತಂಕವೂ ಹೆಚ್ಚಾಗಿದೆ.