AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL 2025: ಸ್ಯಾಮ್ಸ್- ಕ್ಯಾಮರೋನ್ ನಡುವೆ ಡಿಕ್ಕಿ: ಇಲ್ಲಿದೆ ಭೀಭತ್ಸ ದೃಶ್ಯ

Daniel Sams - Cameron Bancroft: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಡೇನಿಯಲ್ ಸ್ಯಾಮ್ಸ್ - ಕ್ಯಾಮರೋನ್ ಬ್ಯಾಂಕ್ರಾಫ್ಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಯಾಚ್ ಹಿಡಿಯುವ ಯತ್ನದಲ್ಲಿ ಮುಖಾಮುಖಿಯಾದ ಸಿಡ್ನಿ ಥಂಡರ್ ತಂಡದ ಇಬ್ಬರು ಆಟಗಾರರು ಡಿಕ್ಕಿಯಾಗಿ ಬಿದ್ದು ಮೈದಾನದಲ್ಲೇ ನರಳಾಡಿದರು. ಇದೀಗ ಆಟಗಾರರ ನಡುವಣ ಈ ಡಿಕ್ಕಿ ವಿಡಿಯೋ ವೈರಲ್ ಆಗಿದೆ.

BBL 2025: ಸ್ಯಾಮ್ಸ್- ಕ್ಯಾಮರೋನ್ ನಡುವೆ ಡಿಕ್ಕಿ: ಇಲ್ಲಿದೆ ಭೀಭತ್ಸ ದೃಶ್ಯ
Daniel Sams - Cameron Bancroft
ಝಾಹಿರ್ ಯೂಸುಫ್
|

Updated on: Jan 04, 2025 | 10:32 AM

Share

ಬಿಗ್ ಬ್ಯಾಷ್ ಲೀಗ್​ನ 22ನೇ ಪಂದ್ಯದ ವೇಳೆ ಅವಘಡ ಸಂಭವಿಸಿದೆ. ಪರ್ತ್​ನಲ್ಲಿ ನಡೆದ ಈ ಪಂದ್ಯದಲ್ಲಿ ಸಿಡ್ನಿ ಥಂಡರ್ ಮತ್ತು ಪರ್ತ್ ಸ್ಕಾಚರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದ ಮೊದಲ ಇನಿಂಗ್ಸ್​ನ 16ನೇ ಓವರ್​ ವೇಳೆ ಡೇನಿಯಲ್ ಸ್ಯಾಮ್ಸ್ ಮತ್ತು ಕ್ಯಾಮರೋನ್ ಬ್ಯಾಂಕ್ರಾಫ್ಟ್ ಕ್ಯಾಚ್ ಹಿಡಿಯುವ ಯತ್ನದಲ್ಲಿ ಮುಖಾಮುಖಿಯಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಡ್ನಿ ಥಂಡರ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪರ್ತ್ ಸ್ಕಾಚರ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಹೀಗೆ ಸಾಗಿದ ಪಂದ್ಯದ 16ನೇ ಓವರ್​ನಲ್ಲಿ ಲಾಕಿ ಫರ್ಗುಸನ್ ಚೆಂಡು ಕೈಗೆತ್ತಿಕೊಂಡರು.

ಈ ಓವರ್​ನ ಎರಡನೇ ಎಸೆತದಲ್ಲಿ ಕೂಪರ್ ಕೊನೊಲಿ ಸ್ಕ್ವೇರ್ ಲೆಗ್​ನತ್ತ ಬಾರಿಸಲು ಯತ್ನಿಸಿದರು. ಗಾಳಿಯಲ್ಲಿ ತೇಲಿದ ಚೆಂಡನ್ನು ಹಿಡಿಯಲು ಒಂದು ಕಡೆಯಿಂದ ಕ್ಯಾಮರೋನ್ ಬ್ಯಾಂಕ್ರಾಫ್ಟ್ ಬಂದರೆ, ಇನ್ನೊಂದು ಕಡೆಯಿಂದ ಡೇನಿಯರ್ ಸ್ಯಾಮ್ಸ್ ಓಡಿ ಬಂದರು. ಆದರೆ ಚೆಂಡಿನ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಪರಸ್ಪರ ಗಮನಿಸಿರಲಿಲ್ಲ.

ಪರಿಣಾಮ ಡೇನಿಯಲ್ ಸ್ಯಾಮ್ಸ್ – ಕ್ಯಾಮರೋನ್ ಬ್ಯಾಂಕ್ರಾಫ್ಟ್ ಮುಖಾಮುಖಿಯಾಗಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಮೈದಾನದಲ್ಲಿ ಉರುಳಿ ಬಿದ್ದಿದ್ದಾರೆ. ಅದರಲ್ಲೂ ಬ್ಯಾಂಕ್ರಾಫ್ಟ್ ಅವರ ಮೂಗಿಂದ ರಕ್ತ ಚಿಮ್ಮಿದರೆ,​ ಡಿಕ್ಕಿಯ ರಭಸಕ್ಕೆ ಡೇನಿಯಲ್ ಸ್ಯಾಮ್ಸ್​ಗೆ ಎದ್ದು ನಿಲ್ಲಲು ಸಹ ಸಾಧ್ಯವಾಗಲಿಲ್ಲ.

ತಕ್ಷಣವೇ ವೈದ್ಯಕೀಯ ಸಿಬ್ಬಂದಿಗಳು ಮೈದಾನಕ್ಕೆ ಆಗಮಿಸಿ ಡೇಮಿಯಲ್ ಸ್ಯಾಮ್ಸ್​ಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಇದಾಗ್ಯೂ ಅವರು ನಡೆಯುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಸ್ಟ್ರೆಚರ್ ಮೂಲಕ ಅವರನ್ನು ಮೈದಾನದಿಂದ ಕರೆದುಕೊಂಡು ಹೋಗಲಾಯಿತು.

ಇದೀಗ ಡೇನಿಯಲ್ ಸ್ಯಾಮ್ಸ್ ಹಾಗೂ ಕ್ಯಾಮರೋನ್ ಬ್ಯಾಂಕ್ರಾಫ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಅವಘಡದ ಕಾರಣ ಸಿಡ್ನಿ ಥಂಡರ್ ಹಾಗೂ ಪರ್ತ್ ಸ್ಕಾರ್ಚರ್ಸ್ ನಡುವಣ ಪಂದ್ಯವು 12 ನಿಮಿಷಗಳ ಕಾಲ ಸ್ಥಗಿತಗೊಂಡಿತು.

ಡೇನಿಯಲ್ ಸ್ಯಾಮ್ಸ್ – ಕ್ಯಾಮರೋನ್ ಬ್ಯಾಂಕ್ರಾಫ್ಟ್ ಡಿಕ್ಕಿ ವಿಡಿಯೋ

ಗೆದ್ದು ಬೀಗಿದ ಡೇವಿಡ್ ವಾರ್ನರ್ ಪಡೆ

ಸಿಡ್ನಿ ಥಂಡರ್ಸ್ ಆಟಗಾರರ ಅವಘಡದ ಬಳಿಕ ಮುಂದುವರೆದ ಪಂದ್ಯದಲ್ಲಿ ಪರ್ತ್​ ಸ್ಕಾಚರ್ಸ್ ಪರ ಆರಂಭಿಕ ದಾಂಡಿಗ ಫಿನ್ ಅಲೆನ್ 31 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 68 ರನ್ ಬಾರಿಸಿದರು. ಇನ್ನು ಕೂಪರ್ ಕೊನೊಲಿ ಅಜೇಯ 43 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಪರ್ತ್​ ಸ್ಕಾಚರ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು.

178 ರನ್​​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಸಿಡ್ನಿ ಥಂಡರ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ (49) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಗಿಲ್ಕ್ಸ್ 43 ರನ್​ ಕಲೆಹಾಕಿದರು. ಆ ಬಳಿಕ ಕಣಕ್ಕಿಳಿದ ಶೆರ್ಫೇನ್ ರುದರ್​ಫೋರ್ಡ್ 19 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​​ಗಳೊಂದಿಗೆ ಅಜೇಯ 39 ರನ್ ಬಾರಿಸುವ ಮೂಲಕ ಕೊನೆಯ ಎಸೆತದಲ್ಲಿ ಸಿಡ್ನಿ ಥಂಡರ್ ತಂಡಕ್ಕೆ ಜಯ ತಂದುಕೊಟ್ಟರು.

ಪರ್ತ್​ ಸ್ಕಾಚರ್ಸ್​ ಪ್ಲೇಯಿಂಗ್ 11: ಮ್ಯಾಥ್ಯೂ ಹರ್ಸ್ಟ್ (ವಿಕೆಟ್ ಕೀಪರ್) , ಫಿನ್ ಅಲೆನ್ , ಕೂಪರ್ ಕೊನೊಲಿ , ಆರನ್ ಹಾರ್ಡಿ , ಆಶ್ಟನ್ ಟರ್ನರ್ (ನಾಯಕ) , ನಿಕ್ ಹಾಬ್ಸನ್ , ಮ್ಯಾಥ್ಯೂ ಸ್ಪೂರ್ಸ್ , ಮ್ಯಾಥ್ಯೂ ಕೆಲ್ಲಿ , ಆಂಡ್ರ್ಯೂ ಟೈ , ಜೇಸನ್ ಬೆಹ್ರೆಂಡಾರ್ಫ್ , ಲ್ಯಾನ್ಸ್ ಮೋರಿಸ್.

ಇದನ್ನೂ ಓದಿ: ಆವೇಶ, ಆಕ್ರೋಶ… ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ

ಸಿಡ್ನಿ ಥಂಡರ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (ನಾಯಕ) , ಬ್ಲೇಕ್ ನಿಕಿತಾರಸ್ , ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್) , ಮ್ಯಾಥ್ಯೂ ಗಿಲ್ಕ್ಸ್ , ಶೆರ್ಫೇನ್ ರುದರ್ಫೋರ್ಡ್ , ಕ್ರಿಸ್ ಗ್ರೀನ್ , ಟಾಮ್ ಆಂಡ್ರ್ಯೂಸ್ , ಲಾಕಿ ಫರ್ಗುಸನ್ , ವೆಸ್ ಅಗರ್ , ಕ್ಯಾಮರೋನ್ ಬ್ಯಾಂಕ್ರಾಫ್ಟ್ , ಡೇನಿಯಲ್ ಸ್ಯಾಮ್ಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ