AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ZIM: ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಶುಭ್​ಮನ್ ಗಿಲ್​ಗೆ ನಾಯಕತ್ವ

India tour of Zimbabwe: ಒಂದೆಡೆ ಟೀಂ ಇಂಡಿಯಾದ ಅನುಭವಿಗಳ ತಂಡ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ್ದರೆ, ಇನ್ನೊಂದೆಡೆ ಭಾರತದ ಯುವ ಪಡೆ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲು ಸನ್ನದ್ಧವಾಗಿದೆ. ಅದರಂತೆ ಇದೀಗ ಟೀಂ ಇಂಡಿಯಾದ ಜಿಂಬಾಬ್ವೆ ಪ್ರವಾಸಕ್ಕೆ ಇಂದು ಬಿಸಿಸಿಐ, 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

IND vs ZIM: ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಶುಭ್​ಮನ್ ಗಿಲ್​ಗೆ ನಾಯಕತ್ವ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Jun 24, 2024 | 6:34 PM

Share

ಒಂದೆಡೆ ಟೀಂ ಇಂಡಿಯಾದ ಅನುಭವಿಗಳ ತಂಡ ಟಿ20 ವಿಶ್ವಕಪ್​ನಲ್ಲಿ (T20 World Cup 2024) ಭಾಗವಹಿಸಿದ್ದರೆ, ಇನ್ನೊಂದೆಡೆ ಭಾರತದ ಯುವ ಪಡೆ ಜಿಂಬಾಬ್ವೆ ಪ್ರವಾಸ (India tour of Zimbabwe) ಕೈಗೊಳ್ಳಲು ಸನ್ನದ್ಧವಾಗಿದೆ. ಅದರಂತೆ ಇದೀಗ ಟೀಂ ಇಂಡಿಯಾದ ಜಿಂಬಾಬ್ವೆ ಪ್ರವಾಸಕ್ಕೆ ಇಂದು ಬಿಸಿಸಿಐ (BCCI), 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕತ್ವವನ್ನು ಶುಭ್​ಮನ್​ ಗಿಲ್​ಗೆ ನೀಡಲಾಗಿದೆ. ಉಳಿದಂತೆ ತಂಡದಲ್ಲಿ ಭಾಗಶಃ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಟಿ20 ವಿಶ್ವಕಪ್​ನಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿರುವ ಒಬ್ಬನೇ ಒಬ್ಬ ಆಟಗಾರ ಈ ಸರಣಿಗಾಗಿ ತಂಡದಲ್ಲಿ ಆಯ್ಕೆಯಾಗಿಲ್ಲ.

ಐವರಿಗೆ ಚೊಚ್ಚಲ ಅವಕಾಶ

ವೇಳಾಪಟ್ಟಿಯ ಪ್ರಕಾರ ಜುಲೈ 6ರಿಂದ ಸರಣಿ ಆರಂಭವಾಗಲಿದೆ.  ಈ ಸರಣಿಯಲ್ಲಿ ಐದು ಟಿ20 ಪಂದ್ಯಗಳು ನಡೆಯಲ್ಲಿವೆ. ಇದೀಗ ಆಯ್ಕೆಯಾಗಿರುವ ಭಾರತ ಟಿ20 ತಂಡದಲ್ಲಿ ಮೊದಲ ಬಾರಿಗೆ  ಐವರು ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಐವರು ಆಟಗಾರರು ಕಳೆದ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದವರಾಗಿದ್ದು, ಈ ಐವರಲ್ಲಿ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ನಿತೀಶ್ ರೆಡ್ಡಿ, ತುಷಾರ್ ದೇಶಪಾಂಡೆ ಮತ್ತು ಧ್ರುವ ಜುರೆಲ್‌ ಸೇರಿದ್ದಾರೆ.

ಈ ಆಟಗಾರರ ವಾಪಸ್ಸಾತಿ

ಜಿಂಬಾಬ್ವೆ ಸರಣಿಯೊಂದಿಗೆ ನಾಲ್ವರು ಆಟಗಾರರು ಟೀಂ ಇಂಡಿಯಾಕ್ಕೆ ಮರಳಿದ್ದು, ರುತುರಾಜ್ ಗಾಯಕ್ವಾಡ್‌ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ವೇಗಿ ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ತಂಡಕ್ಕೆ ಮರಳಿದ್ದಾರೆ.

ಕೆಎಲ್ ರಾಹುಲ್​ಗಿಲ್ಲ ಸ್ಥಾನ

ಪ್ರಕಟವಾಗಿರುವ ತಂಡವನ್ನು ನೋಡಿದರೆ, ಆಯ್ಕೆ ಮಂಡಳಿ ಸಂಪೂರ್ಣವಾಗಿ ಯುವ ಆಟಗಾರರಿಗೆ ಮಣೆ ಹಾಕಿದೆ. ಆದರೆ ಐಪಿಎಲ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್​ಗೆ ಮತ್ತೊಮ್ಮೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಟಿ20 ವಿಶ್ವಕಪ್​ನಿಂದಲೂ ರಾಹುಲ್​ರನ್ನು ಕೈಬಿಡಲಾಗಿತ್ತು. ಇದೀಗ ಜಿಂಬಾಬ್ವೆ ಸರಣಿಗೂ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

ಭಾರತದ ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿ

  • ಜುಲೈ 6 – 1ನೇ ಟಿ20, ಹರಾರೆ
  • 7 ಜುಲೈ – 2 ನೇ ಟಿ20, ಹರಾರೆ
  • ಜುಲೈ 10 – 3ನೇ ಟಿ20, ಹರಾರೆ
  • ಜುಲೈ 13 – 4ನೇ ಟಿ20, ಹರಾರೆ
  • ಜುಲೈ 14 – 5 ನೇ ಟಿ20, ಹರಾರೆ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Mon, 24 June 24