IPL 2022: ಐಪಿಎಲ್ 2022 ರ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಪಂದ್ಯಾವಳಿಯ ಪೂರ್ಣ ವಿವರ ಇಲ್ಲಿದೆ

| Updated By: ಪೃಥ್ವಿಶಂಕರ

Updated on: Feb 25, 2022 | 3:48 PM

IPL 2022: ಬಿಸಿಸಿಐ ಶುಕ್ರವಾರ ಅಧಿಕೃತವಾಗಿ ಐಪಿಎಲ್ 15ನೇ ಋತುವಿನ ದಿನಾಂಕಗಳನ್ನು ಪ್ರಕಟಿಸಿದೆ. ಈ ವರ್ಷ ವಿಶ್ವದ ಅತಿದೊಡ್ಡ ಲೀಗ್ ಐಪಿಎಲ್ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಲೀಗ್‌ನ ಅಂತಿಮ ಪಂದ್ಯ ಮೇ 29 ರಂದು ನಡೆಯಲಿದೆ.

IPL 2022: ಐಪಿಎಲ್ 2022 ರ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಪಂದ್ಯಾವಳಿಯ ಪೂರ್ಣ ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಐಪಿಎಲ್‌ನ 15ನೇ (IPL 2022) ಆವೃತ್ತಿ ನಡೆಯುವ ದಿನಾಂಕಗಳನ್ನು ಬಿಸಿಸಿಐ (BCCI) ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ವಿಶ್ವದ ಅತಿ ದೊಡ್ಡ ಲೀಗ್ IPL ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಅದೇ ಸಮಯದಲ್ಲಿ, ಅದರ ಅಂತಿಮ ಪಂದ್ಯವು ಮೇ 29 ರಂದು ನಡೆಯಲಿದೆ. ಈ ವರ್ಷ ಐಪಿಎಲ್ ತುಂಬಾ ಬದಲಾದ ಶೈಲಿಯಲ್ಲಿ ಕಂಡುಬರುತ್ತದೆ ಏಕೆಂದರೆ ಈ ಬಾರಿ 8 ಅಲ್ಲ 10 ತಂಡಗಳು ಇದರಲ್ಲಿ ಭಾಗವಹಿಸಲಿವೆ. ಕಳೆದ ಎರಡು ವರ್ಷಗಳಿಂದ, ಕೊರೊನಾದಿಂದಾಗಿ ಲೀಗ್‌ನ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಆಡಲಾಗಲಿಲ್ಲ. ಆದರೆ, ಈ ಬಾರಿಯ ಲೀಗ್‌ಗೆ ಬಿಸಿಸಿಐ ಸಂಪೂರ್ಣ ಸಿದ್ಧತೆ ನಡೆಸಿದೆ.

ಲೀಗ್ ಸುತ್ತಿನ ಎಲ್ಲಾ 70 ಪಂದ್ಯಗಳು ಮುಂಬೈ ಮತ್ತು ಪುಣೆ ಮೈದಾನದಲ್ಲಿ ನಡೆಯಲಿವೆ. ಮುಂಬೈನ ಮೂರು ಸ್ಥಳಗಳಾದ ವಾಂಖೆಡೆ ಸ್ಟೇಡಿಯಂ, ಡಿವೈ ಪಾಟೀಲ್ ಮತ್ತು ಬ್ರಬೋರ್ನ್‌ನಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಇದಲ್ಲದೇ ಪುಣೆಯಲ್ಲಿ 15 ಪಂದ್ಯಗಳು ನಡೆಯಲಿವೆ. ಎಲ್ಲಾ 10 ತಂಡಗಳು ವಾಂಖೆಡೆ ಮತ್ತು ಡಿವೈ ಪಾಟೀಲ್‌ನಲ್ಲಿ ತಲಾ 4 ಪಂದ್ಯಗಳನ್ನು ಆಡಲಿವೆ. ಇದಲ್ಲದೇ ಪುಣೆ ಮತ್ತು ಬ್ರಬೋರ್ನ್ ನಲ್ಲಿ ತಲಾ 3 ಪಂದ್ಯಗಳನ್ನು ಆಡಬೇಕಿದೆ.

74 ಲೀಗ್ ಪಂದ್ಯಗಳು

ಎಲ್ಲಾ 10 ತಂಡಗಳು ತಲಾ 14 ಪಂದ್ಯಗಳನ್ನು ಆಡಲಿವೆ. ಈ 14 ಪಂದ್ಯಗಳ ಪೈಕಿ ಏಳನ್ನು ತನ್ನ ತವರು ಮೈದಾನದಲ್ಲಿ ಮತ್ತು ಏಳನ್ನು ಇನ್ನೊಂದು ಮೈದಾನದಲ್ಲಿ ಆಡಲಿದ್ದಾರೆ. ಈ ರೀತಿಯಾಗಿ, ಈ ಬಾರಿ ಲೀಗ್ ಪಂದ್ಯಗಳ ಸಂಖ್ಯೆ 60 ರ ಬದಲಿಗೆ 74 ಆಗಿರುತ್ತದೆ. ಪ್ರತಿ ತಂಡವು ಐದು ತಂಡಗಳ ವಿರುದ್ಧ ಎರಡು ಬಾರಿ ಆಡುತ್ತದೆ ಮತ್ತು ಉಳಿದ ನಾಲ್ಕು ತಂಡಗಳು ಕೇವಲ ಒಂದು ಪಂದ್ಯವನ್ನು ಮಾತ್ರ ಆಡುತ್ತವೆ. ಲೀಗ್ ಸುತ್ತಿನ ನಂತರ, ನಾಲ್ಕು ಪ್ಲೇಆಫ್ ಪಂದ್ಯಗಳು ನಡೆಯಲಿದ್ದು, ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸಲಾಗಿಲ್ಲ.

2011ರಂತೆಯೇ ಈ ಬಾರಿಯೂ ಗುಂಪುಗಳಾಗಿ ಪಂದ್ಯಗಳು ನಡೆಯಲಿವೆ. 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ಎರಡೂ ಗುಂಪುಗಳಲ್ಲಿ ತಲಾ ಐದು ತಂಡಗಳು ಇರುತ್ತವೆ. ತಮ್ಮ ಗುಂಪಿನಲ್ಲಿ ಪರಸ್ಪರರ ವಿರುದ್ಧ ಎರಡು ಬಾರಿ ಆಡುವ ಅವಕಾಶವನ್ನು ತಂಡಗಳು ಪಡೆಯುತ್ತವೆ. ಇನ್ನೊಂದು ಗುಂಪಿನ ಯಾವುದೇ ಒಂದು ತಂಡದ ವಿರುದ್ಧ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಇದರ ನಂತರ, ಎರಡನೇ ಗುಂಪಿನ ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಬೇಕಾಗುತ್ತದೆ. ಕೊನೆಯ ದಿನಗಳಲ್ಲಿ ನಡೆದ ಹರಾಜಿನಲ್ಲಿ ಒಟ್ಟು 204 ಆಟಗಾರರನ್ನು ಖರೀದಿಸಲಾಗಿತ್ತು. ಮೊದಲು 33 ಉಳಿಸಿಕೊಂಡಿದ್ದರು. ಅಂದರೆ, ಟೂರ್ನಿಯಲ್ಲಿ ಒಟ್ಟು 237 ಆಟಗಾರರು ಆಡಲಿದ್ದಾರೆ.

ಪ್ರೇಕ್ಷಕರಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸುತ್ತದೆ

ಇದಕ್ಕೂ ಮುನ್ನ ಬಿಸಿಸಿಐ ಮೂಲವೊಂದು, “ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಪ್ರೇಕ್ಷಕರಿಗೆ ಅವಕಾಶ ನೀಡಲಾಗುವುದು ಎಂದಿತ್ತು. ಜೊತೆಗೆ ಆರಂಭದಲ್ಲಿ ಶೇಕಡಾ 40ರಷ್ಟು ಪ್ರೇಕ್ಷಕರಿಗೆ ಮೈದಾನಕ್ಕೆ ಅವಕಾಶ ನೀಡಲಾಗುವುದು ಎಂದು ವರದಿಯಾಗಿದೆ. ಕೋವಿಡ್ -19 ಪರಿಸ್ಥಿತಿಯು ನಿಯಂತ್ರಣದಲ್ಲಿ ಉಳಿದಿದ್ದರೆ ಮತ್ತು ಪ್ರಕರಣಗಳು ಕಡಿಮೆಯಾದರೆ, ಪಂದ್ಯಾವಳಿಯ ಕೊನೆಯಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 100 ಪ್ರತಿಶತದಷ್ಟು ಹೆಚ್ಚಿಸಬಹುದು.

ಇದನ್ನೂ ಓದಿ:IPL 2022: ಐಪಿಎಲ್ ಆರಂಭಕ್ಕೂ ಮುನ್ನ ಲುಕ್ ಬದಲಿಸಿದ ಧವನ್; ಗಬ್ಬರ್ ಹೊಸ ಹೇರ್ ಸ್ಟೈಲ್ ಹೇಗಿದೆ ಗೊತ್ತಾ?

Published On - 3:20 pm, Fri, 25 February 22