BCCI Contract List 2024: ಐವರು ವೇಗಿಗಳೊಂದಿಗೆ ಬಿಸಿಸಿಐ ವಿಶೇಷ ಒಪ್ಪಂದ

BCCI Contract List 2024: ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಆಟಗಾರರೊಂದಿಗಿನ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 30 ಆಟಗಾರರೊಂದಿಗೆ ಬಿಸಿಸಿಐ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ 11 ಹೊಸ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಇದೇ ವೇಳೆ 7 ಆಟಗಾರರು ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ.

BCCI Contract List 2024: ಐವರು ವೇಗಿಗಳೊಂದಿಗೆ ಬಿಸಿಸಿಐ ವಿಶೇಷ ಒಪ್ಪಂದ
Team India
Edited By:

Updated on: Feb 29, 2024 | 12:52 PM

ಭಾರತೀಯ ಕ್ರಿಕೆಟ್ ಮಂಡಳಿ (BCCI) ಪ್ರಕಟಿಸಿರುವ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ ಒಟ್ಟು 30 ಆಟಗಾರರು ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಐವರು ವೇಗದ ಬೌಲರ್​ಗಳನ್ನೂ ಸಹ ಕೇಂದ್ರ ಒಪ್ಪಂದಗಳಿಗೆ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಈ ಆಟಗಾರರನ್ನು ವಿಶೇಷ ಒಪ್ಪಂದ ಪಟ್ಟಿಯಲ್ಲಿಡಲಾಗಿದ್ದು, ಈ ಮೂಲಕ ವೇಗದ ಬೌಲರ್​ಗಳ ನೆರವಿಗೆ ನಿಲ್ಲಲು ಬಿಸಿಸಿಐ ಮುಂದಾಗಿದೆ.

ಈ ಐವರು ವೇಗಿಗಳಲ್ಲಿ ಇಬ್ಬರು ಕರ್ನಾಟಕದ ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಅಂದರೆ ಕರ್ನಾಟಕದ ಯುವ ವೇಗಿಗಳಾದ ವಿಧ್ವತ್ ಕಾವೇರಪ್ಪ ಹಾಗೂ ವಿಜಯಕುಮಾರ್ ವೈಶಾಕ್ ಹೆಸರುಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಇವರ ಜೊತೆಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿದಿರುವ ಆಕಾಶ್​ ದೀಪ್ ಹಾಗೂ ಉಮ್ರಾನ್ ಮಲಿಕ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಯಶಸ್ ದಯಾಳ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಸಿಸಿಐ ಕೇಂದ್ರ ಒಪ್ಪಂದ ಪಡೆದಿರುವ ಆಟಗಾರರ ಪಟ್ಟಿ ಇಲ್ಲಿದೆ:

  • ಗ್ರೇಡ್ A+ (ವಾರ್ಷಿಕ 7 ಕೋಟಿ ರೂ.)
  • ರೋಹಿತ್ ಶರ್ಮಾ
  • ವಿರಾಟ್ ಕೊಹ್ಲಿ
  • ಜಸ್ಪ್ರೀತ್ ಬುಮ್ರಾ
  • ರವೀಂದ್ರ ಜಡೇಜಾ.

 

  • ಗ್ರೇಡ್ A (ವಾರ್ಷಿಕ 5 ಕೋಟಿ ರೂ.)
  • ರವಿಚಂದ್ರನ್ ಅಶ್ವಿನ್
  • ಮೊಹಮ್ಮದ್ ಶಮಿ
  • ಮೊಹಮ್ಮದ್ ಸಿರಾಜ್
  • ಕೆಎಲ್ ರಾಹುಲ್
  • ಶುಭ್​ಮನ್ ಗಿಲ್
  • ಹಾರ್ದಿಕ್ ಪಾಂಡ್ಯ.

 

  • ಗ್ರೇಡ್ B (ವಾರ್ಷಿಕ 3 ಕೋಟಿ ರೂ.)
  • ಸೂರ್ಯ ಕುಮಾರ್ ಯಾದವ್
  • ರಿಷಬ್ ಪಂತ್
  • ಕುಲ್ದೀಪ್ ಯಾದವ್
  • ಅಕ್ಷರ್ ಪಟೇಲ್
  • ಯಶಸ್ವಿ ಜೈಸ್ವಾಲ್.

 

  • ಗ್ರೇಡ್ C (ವಾರ್ಷಿಕ 1 ಕೋಟಿ ರೂ.)
  • ರಿಂಕು ಸಿಂಗ್
  • ತಿಲಕ್ ವರ್ಮಾ
  • ರುತುರಾಜ್ ಗಾಯಕ್ವಾಡ್
  • ಶಾರ್ದೂಲ್ ಠಾಕೂರ್
  • ಶಿವಂ ದುಬೆ
  • ರವಿ ಬಿಷ್ಣೋಯ್
  • ಜಿತೇಶ್ ಶರ್ಮಾ
  • ವಾಷಿಂಗ್ಟನ್ ಸುಂದರ್
  • ಮುಖೇಶ್ ಕುಮಾರ್
  • ಸಂಜು ಸ್ಯಾಮ್ಸನ್
  • ಅರ್ಷದೀಪ್ ಸಿಂಗ್
  • ಕೆಎಸ್ ಭರತ್
  • ಪ್ರಸಿದ್ಧ್ ಕೃಷ್ಣ
  • ಅವೇಶ್ ಖಾನ್
  • ರಜತ್ ಪಾಟಿದಾರ್.

ವಿಶೇಷ ಒಪ್ಪಂದದಲ್ಲಿ ಸ್ಥಾನ ಪಡೆದ ಐವರು ವೇಗಿಗಳು:

  • ಉಮ್ರಾನ್ ಮಲಿಕ್
  • ವಿಜಯಕುಮಾರ್ ವೈಶಾಕ್
  • ವಿಧ್ವತ್ ಕಾವೇರಪ್ಪ
  • ಯಶ್ ದಯಾಳ್
  • ಆಕಾಶ್ ದೀಪ್

ಇದನ್ನೂ ಓದಿ: IPL 2024: ಟ್ರೇಡ್ ವಿಂಡೊ ಕ್ಲೋಸ್: ಮುಂಬೈ ತಂಡದಲ್ಲೇ ರೋಹಿತ್ ಶರ್ಮಾ

ವಾರ್ಷಿಕ ಒಪ್ಪಂದಿಂದ ಹೊರಬಿದ್ದ ಆಟಗಾರರು:

  • ಉಮೇಶ್ ಯಾದವ್
  • ಯುಜ್ವೇಂದ್ರ ಚಹಲ್
  • ಶ್ರೇಯಸ್ ಅಯ್ಯರ್
  • ಇಶಾನ್ ಕಿಶನ್
  • ಚೇತೇಶ್ವರ ಪೂಜಾರ
  • ಶಿಖರ್ ಧವನ್
  • ಉಮೇಶ್ ಯಾದವ್.