IPL 2024: ಟ್ರೇಡ್ ವಿಂಡೊ ಕ್ಲೋಸ್: ಮುಂಬೈ ತಂಡದಲ್ಲೇ ರೋಹಿತ್ ಶರ್ಮಾ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಸಾಂಪ್ರದಾಯಿಕ ಎದುರಾಳಿಗಳಾದ RCB - CSK ಐಪಿಎಲ್ ಅಭಿಮಾನ ಆರಂಭಿಸಲಿದೆ.
Updated on: Feb 26, 2024 | 12:35 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 (IPL 2024) ಟ್ರೇಡ್ ವಿಂಡೊ ಕ್ಲೋಸ್ ಆಗಿದೆ. ಐಪಿಎಲ್ ಹರಾಜಿನ ಬಳಿಕ ಓಪನ್ ಆಗಿದ್ದ ಟ್ರೇಡ್ ವಿಂಡೊ ಮೂಲಕ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳಲು ಅಥವಾ ಮಾರಾಟ ಮಾಡಲು ಫ್ರಾಂಚೈಸಿಗಳಿಗೆ ಅವಕಾಶವಿತ್ತು. ಇದೀಗ ಐಪಿಎಲ್ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಟ್ರೇಡ್ ವಿಂಡೋ ಕೂಡ ಕ್ಲೋಸ್ ಆಗಿದೆ.

ಇದರೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ರೋಹಿತ್ ಶರ್ಮಾ (Rohit Sharma) ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ಟ್ರೇಡ್ ಮಾಡಿಕೊಳ್ಳಲು ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಿದ್ದವು.

ಆದರೆ ಹಿಟ್ಮ್ಯಾನ್ ಅವರನ್ನು ಮಾರಾಟ ಮಾಡಲು ಅಥವಾ ಟ್ರೇಡಿಂಗ್ಗೆ ಇಡಲು ಮುಂಬೈ ಇಂಡಿಯನ್ಸ್ ಮುಂದಾಗಿಲ್ಲ. ಇದರೊಂದಿಗೆ ಈ ಬಾರಿ ರೋಹಿತ್ ಶರ್ಮಾ ಮುಂಬೈ ಪರ ಕೇವಲ ಆಟಗಾರನಾಗಿ ಕಣಕ್ಕಿಳಿಯಲಿರುವುದು ಖಚಿತವಾಗಿದೆ. ಅಂದರೆ ಹಾರ್ದಿಕ್ ಪಾಂಡ್ಯ ನಾಯಕತ್ವದಡಿಯಲ್ಲಿ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಆಡಲಿದ್ದಾರೆ.

ಇನ್ನು ಮುಂದಿನ ವರ್ಷ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, ಈ ವೇಳೆ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಐಪಿಎಲ್ 2025 ರ ಹರಾಜಿನಲ್ಲಿ ಹಿಟ್ಮ್ಯಾನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಶುರುವಾಗಲಿದೆ. ಮುಂಬರುವ ಲೋಕಸಭಾ ಚುನಾವಣಾ ನಿಮಿತ್ತ ಬಿಸಿಸಿಐ ಕೇವಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟವಾದ ಬಳಿಕ ಐಪಿಎಲ್ನ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸಲಾಗುತ್ತದೆ.

ಅದರಂತೆ ಈ ಬಾರಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಮಾರ್ಚ್ 22 ರಂದು ನಡೆಯಲಿರುವ ಈ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ.



















