Most powerful Indians: ಜಯ್ ಶಾಗೆ 35ನೇ ಸ್ಥಾನ: ವಿರಾಟ್ ಕೊಹ್ಲಿಗೆ 38ನೇ ಸ್ಥಾನ..!

Most powerful Indians in 2024: ಇಂಡಿಯನ್ ಎಕ್ಸ್‌ಪ್ರೆಸ್ 2024ರ ಅತ್ಯಂತ ಶಕ್ತಿಶಾಲಿ ಭಾರತೀಯರ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾವುದೇ ಕ್ರಿಕೆಟಿಗ ಕಾಣಿಸಿಕೊಂಡಿಲ್ಲ. ಇನ್ನು ಅಗ್ರ ಐವತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಏಕೈಕ ಕ್ರಿಕೆಟಿಗ. ಹಾಗೆಯೇ ಟಾಪ್-100 ರಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:Feb 29, 2024 | 3:04 PM

ಇಂಡಿಯನ್ ಎಕ್ಸ್‌ಪ್ರೆಸ್ 2024ರ ಅತ್ಯಂತ ಶಕ್ತಿಶಾಲಿ ಭಾರತೀಯರ ಪಟ್ಟಿಯನ್ನು ಪ್ರಕಟಿಸಿದೆ. ಟಾಪ್- 100 ಪಟ್ಟಿಯಲ್ಲಿ ಭಾರತದ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಕ್ರಿಕೆಟ್ ವಿಭಾಗದಿಂದ ನಾಲ್ವರು ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಅಗ್ರಸ್ಥಾನದಲ್ಲಿರುವುದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಂಬುದು ವಿಶೇಷ.

1 / 6
ಇಂಡಿಯನ್ ಎಕ್ಸ್‌ಪ್ರೆಸ್ 2024 ರ 100 ಅತ್ಯಂತ ಶಕ್ತಿಶಾಲಿ ಭಾರತೀಯರ ಪಟ್ಟಿಯಲ್ಲಿ ಬಿಸಿಸಿಐ ಕಾರ್ಯದರ್ಶಿ/ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಅಧ್ಯಕ್ಷರಾಗಿರುವ ಜಯ್ ಶಾ 35ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

2 / 6
ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 38ನೇ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿಯನ್ನು ಹೊರತುಪಡಿಸಿದರೆ, ಭಾರತದ ಯಾವುದೇ ಕ್ರಿಕೆಟಿಗ ಟಾಪ್-50 ರಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಅಚ್ಚರಿ.

3 / 6
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಈ ಪಟ್ಟಿಯಲ್ಲಿ 58ನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರೂ ಪ್ರಭಾವಶಾಲಿ ಭಾರತೀಯರ ಪಟ್ಟಿಯಲ್ಲಿ ಈಗಲೂ ಧೋನಿ ಕಾಣಿಸಿಕೊಂಡಿರುವುದು ವಿಶೇಷ.

4 / 6
ಹಾಗೆಯೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಪ್-100 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಿಟ್​ಮ್ಯಾನ್ ಈ ಪಟ್ಟಿಯಲ್ಲಿ 68ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

5 / 6
ಇಂಡಿಯನ್ ಎಕ್ಸ್‌ಪ್ರೆಸ್ 2024 ರ ಅತ್ಯಂತ ಶಕ್ತಿಶಾಲಿ ಟಾಪ್-10 ಭಾರತೀಯರು: 1- ನರೇಂದ್ರ ಮೋದಿ (ಪ್ರಧಾನ ಮಂತ್ರಿ) , 2- ಅಮಿತ್ ಶಾ (ಕೇಂದ್ರ ಗೃಹ ಸಚಿವ), 3- ಮೋಹನ್ ಭಾಗವತ್ (ಆರೆಸ್ಸೆಸ್ ಮುಖ್ಯಸ್ಥ), 4- ಡಿವೈ ಚಂದ್ರಚೂಡ್ (ಭಾರತದ ಮುಖ್ಯ ನ್ಯಾಯಮೂರ್ತಿ), 5- ಎಸ್ ಜೈಶಂಕರ್ (ವಿದೇಶಾಂಗ ಸಚಿವ), 6- ಯೋಗಿ ಆದಿತ್ಯನಾಥ್ (ಉತ್ತರ ಪ್ರದೇಶ ಸಿಎಂ), 7- ರಾಜನಾಥ್ ಸಿಂಗ್ (ರಕ್ಷಣಾ ಸಚಿವ), 8- ನಿರ್ಮಲಾ ಸೀತಾರಾಮನ್ (ಹಣಕಾಸು ಸಚಿವೆ), 9- ಜೆಪಿ ನಡ್ಡಾ (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ), 10- ಗೌತಮ್ ಅದಾನಿ (ಉದ್ಯಮಿ).

6 / 6

Published On - 2:58 pm, Thu, 29 February 24

Follow us