
ಭಾರತೀಯ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಡಿಸೆಂಬರ್ 24 ರಿಂದ ಪ್ರಾರಂಭವಾಗಿದೆ. ಈ ಆವೃತ್ತಿಯ ದೊಡ್ಡ ಹೈಲೈಟ್ ಎಂದರೆ ಟೀಂ ಇಂಡಿಯಾದ ಇಬ್ಬರು ದಂತಕಥೆಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಬಹಳ ಸಮಯದ ನಂತರ ಈ ಟೂರ್ನಿಯಲ್ಲಿ ಆಡಿದರು. ಈ ಇಬ್ಬರೂ ಸ್ಟಾರ್ ಆಟಗಾರರು ಮೊದಲ ಸುತ್ತಿನಲ್ಲಿ ತಮ್ಮ ರಾಜ್ಯ ತಂಡಗಳಾದ ಮುಂಬೈ ಮತ್ತು ದೆಹಲಿ ಪರ ಅದ್ಭುತ ಪ್ರದರ್ಶನ ನೀಡಿದರು. ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ 155 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮತ್ತೊಂದೆಡೆ ಡೆಲ್ಲಿ ಪರ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಆಂಧ್ರಪ್ರದೇಶ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಇವರಿಬ್ಬರ ಈ ಇನ್ನಿಂಗ್ಸ್ನಿಂದಾಗಿ ಇಬ್ಬರ ತಂಡಗಳು ಸುಲಭ ಗೆಲುವು ದಾಖಲಿಸಿದವು.
ದೇಶಿ ಕ್ರಿಕೆಟ್‌ನ ಇವರಿಬ್ಬರ ಆರ್ಭಟ ಅಭಿಮಾನಿಗಳಿಗೆ ಸಂತಸ ತಂದಿತ್ತಾದರೂ, ಬಿಸಿಸಿಐ ಮಾಡಿದ ಕಳಪೆ ಸಿದ್ಧತೆಗಳು ಅಭಿಮಾನಿಗಳನ್ನು ಕೆರಳಿಸಿದೆ. ವಾಸ್ತವವಾಗಿ ರೋಹಿತ್ ಮತ್ತು ವಿರಾಟ್ ಆಡಿದ ಪಂದ್ಯಗಳ ನೇರ ಪ್ರಸಾರ ಮಾಡಲಾಗಲಿಲ್ಲ ಹಾಗೆಯೇ ಆನ್‌ಲೈನ್ ಸ್ಟ್ರೀಮಿಂಗ್ ಕೂಡ ಇರಲಿಲ್ಲ. ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಆಯ್ದ ಪಂದ್ಯಗಳನ್ನು ಮಾತ್ರ ಪ್ರಸಾರ ಮಾಡಲಾಯಿತು, ಆದರೆ ಸ್ಟಾರ್ ಆಟಗಾರರನ್ನು ಒಳಗೊಂಡ ಪಂದ್ಯಗಳನ್ನು ನಿರ್ಲಕ್ಷಿಸಲಾಯಿತು. ಇದಲ್ಲದೆ, ವಿರಾಟ್ ಕೊಹ್ಲಿ ಆಡಿದ ಪಂದ್ಯಕ್ಕೆ ಅಭಿಮಾನಿಗಳಿಗೆ ಎಂಟ್ರಿ ಇರಲಿಲ್ಲ. ಇತ್ತ ಜೈಪುರದಲ್ಲಿ ರೋಹಿತ್ ಆಡಿದ ಪಂದ್ಯಕ್ಕೆ ಅಭಿಮಾನಿಗಳಿಗೆ ಪ್ರವೇಶವಿತ್ತಾದರೂ, ಗ್ಯಾಲರಿಯಲ್ಲಿ ದೂರದಲ್ಲಿ ಕುಳಿತಿದ್ದ ಅಭಿಮಾನಿಗಳು ಸ್ಕೋರ್ ನವೀಕರಣಗಳನ್ನು ಮಾತ್ರ ಅವಲಂಬಿಸಿದ್ದರು.
ಬಿಸಿಸಿಐನ ಈ ಕಳಪೆ ವ್ಯವಸ್ಥೆಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದರೂ, ಬಿಸಿಸಿಐನ ಇಂತಹ ನಿರ್ಲಕ್ಷ್ಯಕ್ಕಾಗಿ ಅನೇಕರು ಟೀಕಿಸಿದ್ದಾರೆ. ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವಾಗ, ಅವರ ಪಂದ್ಯಗಳನ್ನು ಪ್ರಸಾರ ಮಾಡುವುದು ಮಂಡಳಿಯ ಜವಾಬ್ದಾರಿಯಾಗಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಇದು ಕ್ರಿಕೆಟ್ ಅನ್ನು ಉತ್ತೇಜಿಸಲು ಮತ್ತು ಯುವ ಆಟಗಾರರಿಗೆ ಸ್ಫೂರ್ತಿ ನೀಡಲು ಒಂದು ಅವಕಾಶವಾಗಿತ್ತು. ಆದರೆ ಬಿಸಿಸಿಐನ ನಿರ್ಲಕ್ಷ ಅಭಿಮಾನಿಗಳು ಕೆರಳುವಂತೆ ಮಾಡಿದೆ.
Vijay Hazare Trophy: 412 ರನ್ ಬೆನ್ನಟ್ಟಿ ಚಾಂಪಿಯನ್ ತಂಡಕ್ಕೆ ಮಣ್ಣು ಮುಕ್ಕಿಸಿದ ಕರ್ನಾಟಕ
ವಾಸ್ತವವಾಗಿ ಬಿಸಿಸಿಐ,ಕೇಂದ್ರೀಯ ಒಪ್ಪಂದಕ್ಕೆ ಒಳಪಡುವ ಪ್ರತಿಯೊಬ್ಬ ಆಟಗಾರರು ದೇಶೀಯ ಪಂದ್ಯಗಳಲ್ಲಿ ಆಡುವುದನ್ನು ಕಡ್ಡಾಯಗೊಳಿಸಿದೆ. ಇದರ ಪರಿಣಾಮವಾಗಿ ರೋಹಿತ್ ಮತ್ತು ವಿರಾಟ್ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಇಬ್ಬರೂ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಆದ್ದರಿಂದ ಈ ಪಂದ್ಯಾವಳಿ ಅವರಿಗೆ ಪಂದ್ಯ ಅಭ್ಯಾಸವನ್ನು ಪಡೆಯಲು ಅತ್ಯುತ್ತಮ ಅವಕಾಶವಾಗಿತ್ತು. ಜೈಪುರದಲ್ಲಿ ಮುಂಬೈ ಪರ ಆಡಿದ ರೋಹಿತ್ ಆಕ್ರಮಣಕಾರಿ ಶೈಲಿಯನ್ನು ಪ್ರದರ್ಶಿಸಿದರೆ, ಬೆಂಗಳೂರಿನಲ್ಲಿ ದೆಹಲಿ ಪರ ಆಡಿದ್ದ ವಿರಾಟ್ ಸಂಯಮ ಮತ್ತು ಆಕ್ರಮಣಶೀಲತೆಯ ಆಟ ಪ್ರದರ್ಶಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ