AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025 ರ ಐಪಿಎಲ್ ರದ್ದಾದರೂ ಬಿಸಿಸಿಐ, ಫ್ರಾಂಚೈಸಿಗಳಿಗೆ ಯಾವ ನಷ್ಟವೂ ಆಗುವುದಿಲ್ಲ..! ಕಾರಣವೇನು ಗೊತ್ತಾ?

IPL 2025 Postponed: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಬಿಸಿಸಿಐ 2025ರ ಐಪಿಎಲ್ ಅನ್ನು ಒಂದು ವಾರ ಮುಂದೂಡಿದೆ. ಐಪಿಎಲ್‌ಗೆ ವಿಮೆ ಇರುವುದರಿಂದ ಬಿಸಿಸಿಐ ಅಥವಾ ಫ್ರಾಂಚೈಸಿಗಳಿಗೆ ಯಾವುದೇ ಆರ್ಥಿಕ ನಷ್ಟ ಉಂಟಾಗುವುದಿಲ್ಲ. ಪಂದ್ಯಗಳು ರದ್ದಾದರೂ, ವಿಮಾ ಪಾಲಿಸಿಯು ನಷ್ಟವನ್ನು ಸರಿದೂಗಿಸುತ್ತದೆ. ಈ ವಿಮಾ ನೀತಿಯು ಆಟಗಾರರ ಗಾಯಗಳು, ಪಂದ್ಯ ರದ್ದತಿ, ಮತ್ತು ಪ್ರಾಯೋಜಕತ್ವದ ನಷ್ಟಗಳನ್ನು ಒಳಗೊಂಡಿದೆ.

2025 ರ ಐಪಿಎಲ್ ರದ್ದಾದರೂ ಬಿಸಿಸಿಐ, ಫ್ರಾಂಚೈಸಿಗಳಿಗೆ ಯಾವ ನಷ್ಟವೂ ಆಗುವುದಿಲ್ಲ..! ಕಾರಣವೇನು ಗೊತ್ತಾ?
Ipl 2025
Follow us
ಪೃಥ್ವಿಶಂಕರ
|

Updated on:May 09, 2025 | 8:10 PM

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ (BCCI), 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಲು ನಿರ್ಧರಿಸಿದೆ. ಈ ಸೀಸನ್‌ನಲ್ಲಿ ಒಟ್ಟು 57 ಪಂದ್ಯಗಳು ಪೂರ್ಣಗೊಂಡಿದ್ದು, 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇಂದು ಮುಂದಿನ ಐಪಿಎಲ್ (IPL 2025) ಪಂದ್ಯಗಳ ಕುರಿತು ಮಾಹಿತಿ ನೀಡಿದ ಬಿಸಿಸಿಐ, ಒಂದು ವಾರ ಈ ಟೂರ್ನಿಯನ್ನು ಮುಂದೂಡಿದೆ. ಆದಾಗ್ಯೂ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಒಂದು ವೇಳೆ ರದ್ದಾದರೆ ಬಿಸಿಸಿಐ ಮತ್ತು ತಂಡದ ಮಾಲೀಕರು ಎಷ್ಟು ನಷ್ಟ ಅನುಭವಿಸುತ್ತಾರೆ ಎಂಬುದು ಎಲ್ಲರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ, ಐಪಿಎಲ್ ರದ್ದಾದರೆ ಬಿಸಿಸಿಐಗಾಗಲಿ ಅಥವಾ ಫ್ರಾಂಚೈಸಿಗಳಿಗಾಗಲಿ ಯಾವುದೇ ನಷ್ಟವಾಗುವುದಿಲ್ಲ ಎಂಬುದಾಗಿದೆ.

ಬಿಸಿಸಿಐಗೆ ಯಾವುದೇ ನಷ್ಟವಿಲ್ಲ

ಐಪಿಎಲ್ 2025 ಅನ್ನು ವಾರದವರೆಗೆ ಸ್ಥಗಿತಗೊಳಿಸಲಾಗಿದೆ. ವಾರದ ಬಳಿಕ ಪರಿಸ್ಥಿತಿ ತಿಳಿಯಾದರೆ ಈ ಸೀಸನ್ ಹೊಸ ವಿಂಡೋದಲ್ಲಿ ಪೂರ್ಣಗೊಳ್ಳುತ್ತದೆ. ಅಂದರೆ ಉಳಿದ ಪಂದ್ಯಗಳಿಗೆ ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಆದಾಗ್ಯೂ ಮುಂದಿನ ವಾರವೂ ಪರಿಸ್ಥಿತಿ ಸುಧಾರಿಸದೆ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗದೆ ಐಪಿಎಲ್ ರದ್ದಾದರೂ ಯಾರಿಗೂ ಯಾವುದೇ ನಷ್ಟವಾಗುವುದಿಲ್ಲ. ಇದರ ಹಿಂದಿನ ಕಾರಣ ಬಿಸಿಸಿಐನ ವಿಮಾ ಪಾಲಿಸಿ.

ಸ್ಲೀಪರ್ ಸೆಲ್‌ ಮೂಲಕ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಸ್ಫೋಟಿಸುವ ಬೆದರಿಕೆ

ಐಪಿಎಲ್‌ ವಿಮಾ ಪಾಲಿಸಿ

ವಾಸ್ತವವಾಗಿ, ಇಂತಹ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡೆ ಬಿಸಿಸಿಐ, ಮುಂಚಿತವಾಗಿಯೇ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಹೇಗೆ ಜನರು ಅನಾರೋಗ್ಯದ ಚಿಕಿತ್ಸೆಗಾಗಿ, ಕಾರು ಮತ್ತು ಬೈಕಿಗೆ ಅಥವಾ ದುಬಾರಿ ಮೊಬೈಲ್ ಫೋನ್‌ಗೆ ವಿಮೆಯನ್ನು ತೆಗೆದುಕೊಳ್ಳುತ್ತಾರೋ ಅದೇ ರೀತಿ ಐಪಿಎಲ್ ಕೂಡ ವಿಮೆಯನ್ನು ಮಾಡಿಸಲಾಗಿದೆ. ಇದರೊಂದಿಗೆ, ತಂಡಗಳು ತಮ್ಮ ಆಟಗಾರರಿಗೆ ವಿಮೆಯನ್ನು ಸಹ ಮಾಡಿಸಿಕೊಳ್ಳುತ್ತವೆ. ಇದರಿಂದಾಗಿ ಆಟಗಾರರು ಗಾಯಗೊಂಡರೆ ಆ ಆಟಗಾರರ ಇಡೀ ಚಿಕಿತ್ಸೆ ವಿಮೆ ಮೂಲಕವೇ ನಡೆಯಲಿದೆ. ಇದರಿಂದ ಯಾವುದೇ ಫ್ರಾಂಚೈಸಿಗೂ ನಷ್ಟವಾಗುವುದಿಲ್ಲ.

ಇಷ್ಟು ಮಾತ್ರವಲ್ಲದೆ ಐಪಿಎಲ್‌ನ ಪ್ರತಿಯೊಂದು ಪಂದ್ಯ ಮತ್ತು ಆಟಗಾರನಿಗೆ ವಿಮೆ ಮಾಡಿಸಲಾಗಿರುತ್ತದೆ. ಇದರಿಂದ ಯಾವುದೇ ನಷ್ಟವನ್ನು ಸರಿದೂಗಿಸಬಹುದು. ಹೀಗಾಗಿ ಯಾವುದೇ ಫ್ರಾಂಚೈಸಿಗೂ ನಷ್ಟವುಂಟಾಗುವುದಿಲ್ಲ. ಅದೇ ಸಮಯದಲ್ಲಿ, ಪಂದ್ಯ ರದ್ದಾದರೆ, ಬಿಸಿಸಿಐ ಪ್ರಾಯೋಜಕರಿಂದ ಪಡೆಯುವ ಹಣಕ್ಕೆ ಪರಿಹಾರವನ್ನು ಸಹ ಪಡೆಯುತ್ತದೆ. ಯಾವುದೇ ಪಂದ್ಯ ರದ್ದಾದರೆ ಆಯಾ ತಂಡಗಳಿಗೆ ವಿಮಾ ಮೂಲಕ ನಷ್ಟದ ಮೊತ್ತವನ್ನು ನೀಡಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Fri, 9 May 25

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ