Rishabh Pant: ಮಾಸ್ಟರ್ ಪ್ಲಾನ್: ಭಾರತದ ಮೂವರು ಸ್ಟಾರ್ ಆಟಗಾರರನ್ನು ವಿದೇಶಕ್ಕೆ ಕಳುಹಿಸಿದ ಬಿಸಿಸಿಐ

Mohammed Shami: ಈಗಾಗಲೇ ಸೂರ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಿರುವ ಬಿಸಿಸಿಐ, ಇದೀಗ ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್ ಅವರನ್ನು ಕೂಡ ವಿದೇಶಕ್ಕೆ ಕಳುಹಿಸಲು ನಿರ್ಧಾರ ಮಾಡಿದೆ. ಈ ಮೂಲಕ ಆದಷ್ಟು ಬೇಗ ಇವರನ್ನು ಗುಣಪಡಿಸಿ ತಂಡಕ್ಕೆ ಕರೆತರುವ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.

Rishabh Pant: ಮಾಸ್ಟರ್ ಪ್ಲಾನ್: ಭಾರತದ ಮೂವರು ಸ್ಟಾರ್ ಆಟಗಾರರನ್ನು ವಿದೇಶಕ್ಕೆ ಕಳುಹಿಸಿದ ಬಿಸಿಸಿಐ
BCCI Team India
Follow us
Vinay Bhat
|

Updated on: Jan 20, 2024 | 7:42 AM

ಭಾರತ ಕ್ರಿಕೆಟ್ ತಂಡ ಕೆಲ ಅನುಭವಿ ಸ್ಟಾರ್ ಆಟಗಾರರು ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇವರಲ್ಲಿ ಮುಖ್ಯವಾದವರು ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ (Rishabh Pant). ಇವರನ್ನು ಆದಷ್ಟು ಬೇಗ ಗುಣಮುಖರಾಗಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸೂರ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಿರುವ ಬಿಸಿಸಿಐ, ಇದೀಗ ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್ ಅವರನ್ನು ಕೂಡ ವಿದೇಶಕ್ಕೆ ಕಳುಹಿಸಲು ನಿರ್ಧಾರ ಮಾಡಿದೆ. ಈ ಮೂಲಕ ಆದಷ್ಟು ಬೇಗ ಇವರನ್ನು ಗುಣಪಡಿಸಿ ತಂಡಕ್ಕೆ ಕರೆತರುವ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.

ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಎಸೆತಗಳಿಂದಲೇ ಸಂಚಲನ ಮೂಡಿಸಿದ್ದ ಶಮಿ ಪಾದದ ಗಾಯಕ್ಕೆ ಒಳಗಾಗಿದ್ದರು. ವಿಶ್ವಕಪ್ ಬಳಿಕ ಇವರು ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ಹೊರಗುಳಿದಿದ್ದರು. ಪ್ರಸ್ತುತ, ಶಮಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಶಮಿ ತಜ್ಞ ವೈದ್ಯರನ್ನು ಸಂಪರ್ಕಿಸಲು ಶಮಿ ಲಂಡನ್‌ಗೆ ತೆರಳಲಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಎನ್‌ಸಿಎಯ ಸ್ಪೋರ್ಟ್ಸ್ ಸೈನ್ಸ್ ಮುಖ್ಯಸ್ಥ ನಿತಿನ್ ಪಟೇಲ್ ಕೂಡ ಅವರೊಂದಿಗೆ ಲಂಡನ್‌ಗೆ ತೆರಳುತ್ತಾರೆ. ಪಟೇಲ್ ಅವರು ಶಮಿಯ ಗಾಯವನ್ನು ಸೂಕ್ಷ್ಮವಾಗಿ ಗಮನಿಸಿ ಲಂಡನ್‌ನಲ್ಲಿ ತಜ್ಞರಿಂದ ನೋಡುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಶಮಿ ಮತ್ತು ಪಟೇಲ್ ಲಂಡನ್‌ಗೆ ಯಾವಾಗ ತೆರಳುತ್ತಾರೆ ಎಂಬುದರ ಕುರಿತು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಗಾಯದ ವಿಚಾರವಾಗಿ ಶಮಿ ಲಂಡನ್‌ಗೆ ಭೇಟಿ ನೀಡುವುದು ಖಚಿತವಾಗಿದೆ.

ಇದನ್ನೂ ಓದಿ
Image
U19 ವಿಶ್ವಕಪ್​ನಲ್ಲಿಂದು ಭಾರತದ ಮೊದಲ ಪಂದ್ಯ: ಎಷ್ಟು ಗಂಟೆಗೆ?
Image
ಗುರು ದ್ರಾವಿಡ್ ಆದೇಶವನ್ನು ಮತ್ತೆ ಧಿಕ್ಕರಿಸಿದ್ರಾ ಇಶಾನ್ ಕಿಶನ್..!
Image
ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಝಾಕಾ ಅಶ್ರಫ್..!
Image
ರಣಜಿಯಲ್ಲಿ ಮುಂದುವರೆದ ರಹಾನೆ ಶೂನ್ಯ ಸಾಧನೆ

U19 World Cup: ಗುಂಪು ಹಂತದಲ್ಲಿ ಭಾರತ ಯಾವೆಲ್ಲ ತಂಡಗಳನ್ನು ಎದುರಿಸಲಿದೆ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಪಂತ್ ಕೂಡ ಲಂಡನ್​ಗೆ

ಪಂತ್ ಅವರನ್ನು ಕೂಡ ಬಿಸಿಸಿಐ ಶೀಘ್ರದಲ್ಲೇ ಲಂಡನ್‌ಗೆ ಕಳುಹಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. 30 ಡಿಸೆಂಬರ್ 2022 ರಂದು ದೆಹಲಿಯಿಂದ ರೂರ್ಕಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದಾಗ ಪಂತ್ ಕಾರು ಅಪಘಾತಕ್ಕೊಳಗಾದರು. ಈ ಅಪಘಾತದಲ್ಲಿ ಪಂತ್ ತೀವ್ರವಾಗಿ ಗಾಯಗೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ 2024ರ ಪುನರಾಗಮನವನ್ನು ಬಯಸುತ್ತಿರುವ ಪಂತ್ ಅವರ ಚೇತರಿಕೆಯ ಕುರಿತು ಬಿಸಿಸಿಐ ವಿಶೇಷ ಸಮಾಲೋಚನೆ ನಡೆಸುತ್ತಿದೆ.

ಮೂಲಗಳ ಪ್ರಕಾರ ರಿಷಬ್ ಪಂತ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲಿದ್ದಾರೆ. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ. ಇದರರ್ಥ ಪಂತ್ ಬ್ಯಾಟರ್ ಆಗಿ, ವಿಶೇಷವಾಗಿ ಫಿನಿಶರ್ ಆಗಿ ಮಾತ್ರ ಕಾಣಿಸುವ ಸಾಧ್ಯತೆ ಇದೆ. “ಪಂತ್ ಈಗ ಚೆನ್ನಾಗಿದ್ದಾರೆ. ಅವರು ಮುಂದಿನ ಋತುವಿನ ಐಪಿಎಲ್‌ನಲ್ಲಿ ಆಡಲಿದ್ದಾರೆ”, ಎಂದು ಸೌರವ್ ಗಂಗೂಲಿ ಡಿಸೆಂಬರ್‌ನಲ್ಲಿ ವರದಿಗಳಿಗೆ ತಿಳಿಸಿದ್ದರು. ರಿಷಭ್ ಅಭ್ಯಾಸಕ್ಕೆ ಇಳಿಯಲು ಇನ್ನೂ ಸಮಯವಿದೆ. ಜನವರಿ ಅಂತ್ಯದ ವೇಳೆಗೆ, ಅವರು ಇನ್ನಷ್ಟು ರಿಕವರಿ ಆಗುತ್ತಾರೆ ಎಂದು ಗಂಗೂಲಿ ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ