ಚಾಂಪಿಯನ್ ಪಟ್ಟ ಕಳೆದುಕೊಂಡ ಟೀಂ ಇಂಡಿಯಾ! ಬಿಸಿಸಿಐ ನಿರ್ಧಾರದಿಂದ ಪಾಕ್ ತಂಡಕ್ಕೆ ಬಿಗ್ ರಿಲೀಫ್

|

Updated on: Apr 22, 2023 | 3:52 PM

Asian Games 2023: ಏಷ್ಯನ್ ಗೇಮ್ಸ್‌ಗೆ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿರುವುದು ಇದೇ ಮೊದಲಲ್ಲ. 2010 ಮತ್ತು 2014ರಲ್ಲೂ ಟೀಂ ಇಂಡಿಯಾ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ.

ಚಾಂಪಿಯನ್ ಪಟ್ಟ ಕಳೆದುಕೊಂಡ ಟೀಂ ಇಂಡಿಯಾ! ಬಿಸಿಸಿಐ ನಿರ್ಧಾರದಿಂದ ಪಾಕ್ ತಂಡಕ್ಕೆ ಬಿಗ್ ರಿಲೀಫ್
ಭಾರತ- ಪಾಕಿಸ್ತಾನ ತಂಡ
Follow us on

ಸದ್ಯ ಐಪಿಎಲ್​ನಲ್ಲಿ (IPL 2023 ) ಬ್ಯುಸಿಯಾಗಿರುವ ಟೀಂ ಇಂಡಿಯಾ ಆಟಗಾರರು ಆ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸೇರಿದಂತೆ, ಎರಡು ಪ್ರಮುಖ ಟೂರ್ನಿಗಳನ್ನು ಈ ವರ್ಷ ಆಡಲಿದೆ. ಮೊದಲು ಏಷ್ಯಾಕಪ್​ ನಡೆದರೆ, ಆ ನಂತರ ಏಕದಿನ ವಿಶ್ವಕಪ್ (Asia Cup and then ODI World Cup) ಭಾರತದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಘಾತಕಾರಿ ನಿರ್ಧಾರ ಕೈಗೊಂಡಿದ್ದು, ಏಷ್ಯಾದ ಅತಿದೊಡ್ಡ ಕ್ರೀಡಾಕೂಟವಾದ ಏಷ್ಯನ್​ ಗೇಮ್ಸ್​ಗೆ ಭಾರತದ ಮಹಿಳಾ ಮತ್ತು ಪುರುಷರ ತಂಡವನ್ನು ಕಳುಹಿಸದಿರಲು ಬಿಸಿಸಿಐ (BCCI) ನಿರ್ಧರಿಸಿದೆ. ಈ ವರ್ಷ ಏಷ್ಯನ್ ಗೇಮ್ಸ್ (Asian Games) ಚೀನಾದಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದ್ದು, ಈ ಕ್ರೀಡಾಕೂಟಕ್ಕೆ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ಈ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸುತ್ತಿರುವ ಕ್ರೀಡೆಗಳ ಬಗ್ಗೆ ಮುಖ್ಯಸ್ಥ ಭೂಪಿಂದರ್ ಬಾಜ್ವಾ ಮಾಹಿತಿ ನೀಡಿದ್ದು, ಆ ಮಾಹಿತಿಯ ಪ್ರಕಾರ ಕ್ರಿಕೆಟ್ ಹೊರತುಪಡಿಸಿ, ಎಲ್ಲಾ ಕ್ರೀಡೆಗಳಲ್ಲೂ ಭಾರತೀಯ ಸ್ಪರ್ಧಿಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಅಲ್ಲದೆ ಏಕೆ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್​ನಲ್ಲಿ ಆಡುತ್ತಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದು, ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕ್ರಿಕೆಟ್ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ ಎಂದಿದ್ದಾರೆ. ಅಲ್ಲದೆ ಏಷ್ಯನ್ ಗೇಮ್ಸ್​ಗೆ ತಂಡವನ್ನು ಕಳುಹಿಸುವ ಬಗ್ಗೆ ಸ್ಪಷ್ಟನೆ ಪಡೆಯುವ ಸಲುವಾಗಿ ಬಿಸಿಸಿಐಗೆ ಹಲವು ಮೇಲ್‌ಗಳನ್ನು ಕಳುಹಿಸಲಾಗಿದ್ದು, ಆ ಮೇಲ್​ಗಳಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ತಂಡವನ್ನು ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದಿದ್ದಾರೆ.

LSG vs GT Live Score IPL 2023: ಗುಜರಾತ್ ಮೊದಲ ವಿಕೆಟ್ ಪತನ

ಬಿಡುವಿಲ್ಲದ ವೇಳಾಪಟ್ಟಿ

ವಾಸ್ತವವಾಗಿ ಭಾರತ ಪುರುಷರ ತಂಡ ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಮತ್ತು ನಂತರ ಅಕ್ಟೋಬರ್‌ನಲ್ಲಿ ವಿಶ್ವಕಪ್ ಅನ್ನು ಆಡಬೇಕಾಗಿದೆ. ಆದರೆ ಈ ಬಾರಿಯ ಏಷ್ಯಾಕಪ್‌ ಪಾಕಿಸ್ತಾನದಲ್ಲಿ ನಡೆಯುತ್ತಿದ್ದು, ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಹೀಗಾಗಿ ಟೀಂ ಇಂಡಿಯಾ ಆಡಬೇಕಾದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಅದೇ ಸಮಯದಲ್ಲಿ, ಮಹಿಳಾ ಕ್ರಿಕೆಟ್‌ನ ಭವಿಷ್ಯದ ಪ್ರವಾಸ ಕಾರ್ಯಕ್ರಮವನ್ನು ಬಿಸಿಸಿಐ ಈಗಾಗಲೇ ಅಂತಿಮಗೊಳಿಸಿದೆ. ಹೀಗಾಗಿ ಏಷ್ಯನ್​ ಗೇಮ್ಸ್ ನಡೆಯುವ ಸಮಯದಲ್ಲಿ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಹೀಗಾಗಿ ಈ ಮಹಾ ಕ್ರೀಡಾಕೂಟಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ.

ಪಾಕಿಸ್ತಾನಕ್ಕೆ ಬಿಗ್ ರಿಲೀಫ್

ಏಷ್ಯನ್ ಗೇಮ್ಸ್‌ಗೆ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿರುವುದು ಇದೇ ಮೊದಲಲ್ಲ. 2010 ಮತ್ತು 2014ರಲ್ಲೂ ಟೀಂ ಇಂಡಿಯಾ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ. ಇನ್ನುಳಿದಂತೆ 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟವನ್ನು ಸೇರಿಸಿರಲಿಲ್ಲ. ಇದೀಗ ಬಿಸಿಸಿಐ, ಭಾರತ ಕ್ರಿಕೆಟ್ ತಂಡವನ್ನು ಏಷ್ಯನ್ ಗೇಮ್ಸ್​ಗೆ ಕಳುಹಿಸದಿರಲು ತೀರ್ಮಾನಿಸಿರುವುದು ಪಾಕಿಸ್ತಾನ ತಂಡಕ್ಕೆ ಬಿಗ್ ರಿಲೀಫ್ ತಂದುಕೊಟ್ಟಿದೆ. ಏಕೆಂದರೆ ಏಷ್ಯನ್ ರಾಷ್ಟ್ರಗಳಲ್ಲಿ ಕ್ರಿಕೆಟ್ ವಿಚಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಭಾರತ ಪ್ರಬಲ ಎದುರಾಳಿ. ಆದರೆ ಈ ಬಾರಿ ಟೀಂ ಇಂಡಿಯಾ ಹೋಗದಿರುವುದು ಪಾಕ್ ತಂಡದ ಕಪ್ ಗೆಲ್ಲುವ ಕನಸಿಗೆ ನೀರೆರಿದೆ. ಪಾಕಿಸ್ತಾನದ ಮಹಿಳಾ ತಂಡ ಎರಡೂ ಬಾರಿ ಪ್ರಶಸ್ತಿ ಗೆದ್ದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Sat, 22 April 23