MS Dhoni: ಒಬ್ಬರಲ್ಲ, ಇಬ್ಬರಲ್ಲ: ಪಂದ್ಯದ ಬಳಿಕ 11 ಎಸ್ಆರ್ಹೆಚ್ ಆಟಗಾರರಿಗೆ ಧೋನಿಯಿಂದ ಕ್ಲಾಸ್
CSK vs SRH, IPL 2023: ಸಿಎಸ್ಕೆ ಹಾಗೂ ಎಸ್ಆರ್ಹೆಚ್ ನಡುವಣ ಈ ಪಂದ್ಯದಲ್ಲಿ ಧೋನಿ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ನಡೆದ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಅನೇಕ ಯುವ ಆಟಗಾರರಿಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಕತ್ತಲು ಕಳೆದು ಬೆಳಕಾಗುವಷ್ಟರಲ್ಲಿ ಅನೇಕ ಯುವ ಪ್ರತಿಭೆಗಳು ಇಲ್ಲಿ ಹುಟ್ಟಿಕೊಳ್ಳುತ್ತಾರೆ. ವಿದೇಶಿ ಪ್ಲೇಯರ್ಸ್ ಜೊತೆ, ಭಾರತದ ಅನುಭವಿ ಆಟಗಾರರಿಂದ ಸಾಕಷ್ಟು ವಿಚಾರಗಳನ್ನು ಕಲಿಯುತ್ತಾರೆ. ಹೆಚ್ಚಾಗಿ ಯುವ ಆಟಗಾರರಿಗೆ ತನ್ನಲ್ಲಿರುವ ಜ್ಞಾನವನ್ನು ದಾರೆ ಎರೆಯುವವರ ಪೈಕಿ ಎಂಎಸ್ ಧೋನಿ (MS Dhoni) ಮುಂಚೂಣಿಯಲ್ಲಿ ಕಾಣಸಿಗುತ್ತಾರೆ. ಇದಕ್ಕೆ ಮತ್ತೊಂದು ಅತ್ಯುತ್ತಮ ಉದಾಹರಣೆ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (CSK vs SRH) ನಡುವಣ ಪಂದ್ಯ.
ಸಿಎಸ್ಕೆ ಹಾಗೂ ಎಸ್ಆರ್ಹೆಚ್ ನಡುವಣ ಈ ಪಂದ್ಯದಲ್ಲಿ ಧೋನಿ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ನಡೆದ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಎಂಎಸ್ ಧೋನಿ ಹೈದರಾಬಾದ್ ತಂಡದ ಯುವ ಆಟಗಾರರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ವಿಶೇಷ ಎಂದರೆ ಇಲ್ಲಿ ಧೋನಿ ಮಾತನಾಡುವಾಗ ಕೇಳಿಸಿಕೊಳ್ಳಲು ಬರೋಬ್ಬರಿ 11 ಆಟಗಾರರಿದ್ದರು. ಧೋನಿ ಕೆಲವೊಂದು ಕ್ರಿಕೆಟ್ ಟಿಪ್ಸ್ ಅನ್ನು ಹೇಳುತ್ತಿದ್ದರೆ ಉಮ್ರಾನ್ ಮಲಿಕ್, ಅಬ್ದಲ್ ಸಮದ್ ಸೇರಿದಂತೆ ಎಲ್ಲ ಯುವ ಆಟಗಾರರು ಭಕ್ತಿಯಿಂದ ಕೇಳುತ್ತಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.
LSG vs GT, IPL 2023: ಐಪಿಎಲ್ನಲ್ಲಿಂದು ಡಬಲ್ ಧಮಾಕ: ಲಖನೌ-ಗುಜರಾತ್ ನಡುವೆ ಹೈವೋಲ್ಟೇಜ್ ಕದನ
When @msdhoni speaks, the youngsters are all ears ?
Raise your hand ?? if you also want to be a part of this insightful session ?#CSKvSRH | @ChennaiIPL pic.twitter.com/ol83RdfbBg
— IndianPremierLeague (@IPL) April 21, 2023
ಇತಿಹಾಸ ನಿರ್ಮಿಸಿದ ಧೋನಿ:
ಈ ಪಂದ್ಯದಲ್ಲಿ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ಪ್ರದರ್ಶನ ತೋರಿದರು. ಒಂದು ಕ್ಯಾಚ್, ಒಂದು ರನೌಟ್ ಮತ್ತು ಸ್ಟಂಪ್ ಔಟ್ ಮಾಡಿ ವಿಕೆಟ್ ಹಿಂಭಾಗದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್-ಕೀಪರ್ ಎಂಬ ಸಾಧನೆಯನ್ನು 41 ವರ್ಷದ ಎಂಎಸ್ ಧೋನಿ ನಿರ್ಮಿಸಿದ್ದಾರೆ. ಈ ಹಿಂದೆ ಕ್ವಿಂಟನ್ ಡಿಕಾಕ್ ಅವರು ಈ ದಾಖಲೆಯನ್ನು ಹೊಂದಿದ್ದರು. ಇದೀಗ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮೀರಿಸಿದ್ದಾರೆ. ಈ ಪಂದ್ಯಕ್ಕು ಮುನ್ನ ಧೋನಿ ಹಾಗೂ ಡಿಕಾಕ್ ಒಟ್ಟು 207 ಕ್ಯಾಚ್‌ಗಳನ್ನು ಪಡೆದು ನಂಬರ್ 1 ಸ್ಥಾನದಲ್ಲಿದ್ದರು. ಮಹೇಶ್ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಆ್ಯಡಂ ಮಾರ್ಕ್ರಮ್ ಅವರ ಕ್ಯಾಚ್ ಅನ್ನು ಧೋನಿ ಪಡೆದ ಕೂಡಲೆ ಇತಿಹಾಸ ನಿರ್ಮಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಹೈದರಾಬಾದ್ ಆರಂಭ ನಿಧಾನ ಗತಿಯಿಂದ ಕೂಡಿತ್ತು. 13 ಎಸೆತಗಳಿಂದ 18 ರನ್ ಮಾಡಿ ಬ್ರೂಕ್ ಪೆವಿಲಿಯನ್ ಸೇರಿಕೊಂಡರು. ದ್ವಿತೀಯ ವಿಕೆಟಿಗೆ ಅಭಿಷೇಕ್ ಶರ್ಮ-ರಾಹುಲ್ ತ್ರಿಪಾಠಿ 36 ರನ್ ಪೇರಿಸಿದರು. 26 ಎಸೆತಗಳಲ್ಲಿ, 3 ಬೌಂಡರಿ, 1 ಸಿಕ್ಸರ್ ಮೂಲಕ 34 ರನ್ ಮಾಡಿದ ಅಭಿಷೇಕ್ ತಂಡದ ಪರ ಗರಿಷ್ಠ ಮೊತ್ತ ಕಲೆಹಾಕಿದರು. ತ್ರಿಪಾಠಿ ಆಟ 21 ರನ್ಗೆ ಅಂತ್ಯವಾಯಿತು. ನಾಯಕ ಮಾರ್ಕ್‌ರಮ್ (12), ಕೀಪರ್ ಕ್ಲಾಸೆನ್ (17), ಜಾನ್ಸೆನ್ (ಅಜೇಯ 17) ಸಿಡಿಯಲು ವಿಫಲರಾದರು. ಎಸ್ಆರ್ಹೆಚ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಜಡೇಜಾ 3 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ಕಾನ್ವೆ ಮತ್ತು ಗಾಯಕ್ವಾಡ್ (35 ರನ್) 87 ರನ್ಗಳ ಜೊತೆಯಾಟ ಮಾಡಿದರು. ರಹಾನೆ 9 ರನ್ಗೆ ವಿಕೆಟ್ ಒಪ್ಪಿಸಿದರು. ಅಂಬಟಿ ರಾಯುಡು ಸಹ 9 ರನ್ಗೆ ಪೆವಿಲಿಯನ್ ದಾರಿ ಹಿಡಿದರು. ಒಂದೆಡೆ ವಿಕೆಟ್ ಹೋಗುತ್ತಿದ್ದರೂ ಕಾನ್ವೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 57 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸ್ನಿಂದ ಅಜೇಯ 77 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಸಿಎಸ್ಕೆ 18.4 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವು ಸಾಧಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ