Ravindra Jadeja: ರೋಚಕ ಕ್ಯಾಚ್ ಹಿಡಿಯುವಾಗ ಅಡ್ಡ ಬಂದ ಕ್ಲಾಸೆನ್: ರವೀಂದ್ರ ಜಡೇಜಾ ಕೋಪದಲ್ಲಿ ಏನು ಮಾಡಿದ್ರು ನೋಡಿ

CSK vs SRH, IPL 2023: ಹೆಚ್ಚಾಗಿ ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಳ್ಳದಿರುವ ರವೀಂದ್ರ ಜಡೇಜಾ ಸಿಎಸ್​ಕೆ ಮತ್ತು ಎಸ್​ಆರ್​ಹೆಚ್ ಪಂದ್ಯ ಆಗುವಾಗ ಎದುರಾಳಿಯ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಮೇಲೆ ಕೋಪಗೊಂಡ ಘಟನೆ ನಡೆಯಿತು.

Ravindra Jadeja: ರೋಚಕ ಕ್ಯಾಚ್ ಹಿಡಿಯುವಾಗ ಅಡ್ಡ ಬಂದ ಕ್ಲಾಸೆನ್: ರವೀಂದ್ರ ಜಡೇಜಾ ಕೋಪದಲ್ಲಿ ಏನು ಮಾಡಿದ್ರು ನೋಡಿ
ravindra jadeja and heinrich klaasen
Follow us
|

Updated on: Apr 22, 2023 | 8:41 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (CSK vs SRH) ನಡುವಣ ಪಂದ್ಯ ಕೂಡ ಹೈವೋಲ್ಟೇಜ್​ನಿಂದ ಕೂಡಿತ್ತು. ಇದರಲ್ಲಿ ಎಂಎಸ್ ಧೋನಿ ಪಡೆ 7 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನಕ್ಕೇರಿದೆ. ಬ್ಯಾಟಿಂಗ್​ನಲ್ಲಿ ಡೆವೋನ್ ಕಾನ್ವೆ ಮಿಂಚಿದರೆ, ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ (Ravindra Jadeja) 4 ಓವರ್​ಗೆ 22 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಬಾಚಿಕೊಂಡರು. ವಿಶೇಷ ಎಂದರೆ ಹೆಚ್ಚಾಗಿ ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಳ್ಳದಿರುವ ಜಡೇಜಾ ಈ ಪಂದ್ಯದಲ್ಲಿ ಎದುರಾಳಿಯ ಬ್ಯಾಟರ್ ಮೇಲೆ ಕೋಪಗೊಂಡ ಘಟನೆ ನಡೆಯಿತು.

ಎಸ್​ಆರ್​ಹೆಚ್ ಬ್ಯಾಟಿಂಗ್​ ಇನ್ನಿಂಗ್ಸ್ ವೇಳೆ 14ನೇ ಓವರ್​ ಅನ್ನು ರವೀಂದ್ರ ಜಡೇಜಾ ಮಾಡಲು ಬಂದರು. ಕ್ರೀಸ್​ನಲ್ಲಿ ಮಯಾಂಕ್ ಅಗರ್ವಾಲ್ ಇದ್ದರು. ಮಯಾಂಕ್ ಚೆಂಡನ್ನು ನೇರವಾಗಿ ಹೊಡೆಯಲು ಯತ್ನಿಸಿದರು. ಆದರೆ, ಸರಿಯಾಗಿ ಟೈಮ್ ಆಗದ ಕಾರಣ ಚೆಂಡು ಜಡೇಜಾ ಕಡೆ ಬಂತು. ಆದರೆ, ಜಡ್ಡು ಕ್ಯಾಚ್ ಡ್ರಾಪ್ ಮಾಡಿದರು. ವಿಶ್ವದ ಶ್ರೇಷ್ಠ ಫೀಲ್ಡರ್​ಗಳಲ್ಲಿ ಒಬ್ಬರಾಗಿರುವ ಜಡೇಜಾ ಕ್ಯಾಚ್ ಕೈಚೆಲ್ಲುವುದು ತೀರಾ ಕಡಿಮೆ. ಈ ಬಾರಿ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್​ ಅನ್ನು ಜಡೇಜಾ ಮಿಸ್ ಮಾಡಲು ಕಾರಣ ಎದುರಾಳಿ ಬ್ಯಾಟರ್, ನಾನ್​ಸ್ಟ್ರೈಕರ್​ನಲ್ಲಿದ್ದ ಹೆನ್ರಿಚ್ ಕ್ಲಾಸೆನ್.

ಇದನ್ನೂ ಓದಿ
Image
LSG vs GT, IPL 2023: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಲಖನೌ-ಗುಜರಾತ್ ನಡುವೆ ಹೈವೋಲ್ಟೇಜ್ ಕದನ
Image
IPL 2023: ಎದುರಾಳಿ ಬ್ಯಾಟರ್ ಜೊತೆ ದೃಷ್ಟಿಯುದ್ಧಕ್ಕಿಳಿದ ಜಡೇಜಾ! ಸಮಾಧಾನ ಪಡಿಸಿದ ಧೋನಿ
Image
IPL 2023 Final: ಮೋದಿ ಮೈದಾನದಲ್ಲಿ ಫೈನಲ್! ಪ್ಲೇ ಆಫ್ ಪಂದ್ಯಕ್ಕೆ ಚೆನ್ನೈ ಆತಿಥ್ಯ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Image
SRH vs CSK Highlights IPL 2023: ಕಾನ್ವೇ ಅರ್ಧಶತಕ; ಸುಲಭ ತುತ್ತಾದ ಹೈದರಾಬಾದ್

IPL 2023: 1 ರನ್​ಗೆ 1 ಕೋಟಿ ಸಂಭಾವನೆ..! ಡೆಲ್ಲಿ ತಂಡಕ್ಕೆ ದುಬಾರಿಯಾದ ದುಬಾರಿ ಪ್ಲೇಯರ್

ಚೆಂಡು ನೇರವಾಗಿ ತನ್ನ ಕೈಗೆ ಬರುತ್ತಿರುವುದನ್ನು ಕಂಡ ಜಡೇಜಾ ಕ್ಯಾಚ್​ಗೆಂದು ಎರಡು ಕೈಗಳನ್ನು ಜೋಡಿಸಿದರು. ಆದರೆ, ಇದೇ ಸಂದರ್ಭ ನಾನ್​ಸ್ಟ್ರೈಕ್​ನಲ್ಲಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅಡ್ಡ ಬಂದರು. ಚೆಂಡು ಜಡೇಜಾ ಕೈಗೆ ಬಂದರೂ ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಕ್ಲಾಸೆನ್ ಅಡ್ಡ ಬಂದ ಪರಿಣಾಮ ಲಯಕಳೆದುಕೊಂಡು ಜಡ್ಡು ಕೆಳಕ್ಕೆ ಬಿದ್ದರು. ಇದರಿಂದ ಕೋಪಗೊಂಡ ಅವರು ಕ್ಲಾಸೆನ್​ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್‌ ಆರಂಭ ನಿಧಾನ ಗತಿಯಿಂದ ಕೂಡಿತ್ತು. 13 ಎಸೆತಗಳಿಂದ 18 ರನ್‌ ಮಾಡಿ ಬ್ರೂಕ್‌ ಪೆವಿಲಿಯನ್‌ ಸೇರಿಕೊಂಡರು. ದ್ವಿತೀಯ ವಿಕೆಟಿಗೆ ಅಭಿಷೇಕ್‌ ಶರ್ಮ-ರಾಹುಲ್‌ ತ್ರಿಪಾಠಿ 36 ರನ್‌ ಪೇರಿಸಿದರು. 26 ಎಸೆತಗಳಲ್ಲಿ, 3 ಬೌಂಡರಿ, 1 ಸಿಕ್ಸರ್‌ ಮೂಲಕ 34 ರನ್‌ ಮಾಡಿದ ಅಭಿಷೇಕ್‌ ತಂಡದ ಪರ ಗರಿಷ್ಠ ಮೊತ್ತ ಕಲೆಹಾಕಿದರು. ತ್ರಿಪಾಠಿ ಆಟ 21 ರನ್​ಗೆ ಅಂತ್ಯವಾಯಿತು. ನಾಯಕ ಮಾರ್ಕ್‌ರಮ್‌ (12), ಕೀಪರ್‌ ಕ್ಲಾಸೆನ್‌ (17), ಜಾನ್ಸೆನ್‌ (ಅಜೇಯ 17) ಸಿಡಿಯಲು ವಿಫ‌ಲರಾದರು. ಎಸ್​ಆರ್​ಹೆಚ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಜಡೇಜಾ 3 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ಕಾನ್ವೆ ಮತ್ತು​ ಗಾಯಕ್ವಾಡ್ (35 ರನ್) 87 ರನ್​ಗಳ ಜೊತೆಯಾಟ ಮಾಡಿದರು. ರಹಾನೆ 9 ರನ್​ಗೆ ವಿಕೆಟ್​ ಒಪ್ಪಿಸಿದರು. ಅಂಬಟಿ ರಾಯುಡು ಸಹ 9 ರನ್​ಗೆ ಪೆವಿಲಿಯನ್​ ದಾರಿ ಹಿಡಿದರು. ಒಂದೆಡೆ ವಿಕೆಟ್​ ಹೋಗುತ್ತಿದ್ದರೂ ಕಾನ್ವೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 57 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸ್​ನಿಂದ ಅಜೇಯ 77 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಸಿಎಸ್​ಕೆ 18.4 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವು ಸಾಧಿಸಿತು. ಎಸ್​ಆರ್​ಹೆಚ್ ಪರ ಮಯಾಂಕ್​ ಮಾರ್ಕಂಡೆ 2 ವಿಕೆಟ್​ ಕಿತ್ತರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್