ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಶ್ರೀಲಂಕಾ ವಿರುದ್ದ ಸರಣಿ ಆಡಲಿದೆ. ಫೆಬ್ರವರಿ 25 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ 3 ಟೆಸ್ಟ್ ಪಂದ್ಯ ಹಾಗೂ 2 ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಆದರೆ ಈ ಸರಣಿಗಾಗಿ ಆಯ್ಕೆ ಮಾಡಲಾಗುವ ತಂಡದಿಂದ ಕೆಲ ಪ್ರಮುಖ ಆಟಗಾರರನ್ನು ಕೈ ಬಿಡುವ ಸೂಚನೆ ನೀಡಿದೆ ಬಿಸಿಸಿಐ. ಅದರಂತೆ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಇಶಾಂತ್ ಶರ್ಮಾಗೆ ಅವಕಾಶ ಸಿಗುವುದು ಅನುಮಾನ. ಅಷ್ಟೇ ಅಲ್ಲದೆ ಈ ಪಟ್ಟಿಯಲ್ಲಿ ಅಜಿಂಕ್ಯ ರಹಾನೆ ಹೆಸರು ಕೂಡ ಇದ್ದು, ಹೀಗಾಗಿ ಈ ಇಬ್ಬರು ಆಟಗಾರರನ್ನು ಬಿಸಿಸಿಐ ಕೈ ಬಿಡುವ ಸಾಧ್ಯತೆಯಿದೆ.
ಇವರಲ್ಲದೆ ಈ ಪಟ್ಟಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹ ಹಾಗೂ ಚೇತೇಶ್ವರ ಪೂಜಾರಾ ಹೆಸರು ಕೂಡ ಇದೆ. ಈ ನಾಲ್ವರು ಆಟಗಾರರಿಗೆ ಈಗಾಗಲೇ ಬಿಸಿಸಿಐ ಸೂಚನೆ ನೀಡಿದ್ದು, ಅದರಂತೆ ಈ ಆಟಗಾರರು ರಣಜಿ ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ವರದಿಯಾಗಿದೆ.
“ಆಯ್ಕೆಗಾರರು ಕೆಲವು ಹೊಸ ಮುಖಗಳನ್ನು ಪರಿಚಯಿಸಲು ಬಯಸುತ್ತಿದೆ. ಹೀಗಾಗಿ ನಾಲ್ವರು ಹಿರಿಯ ಆಟಗಾರರಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗಿದೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ನ ಇತರ ಹಿರಿಯ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಅದರಂತೆ ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹ ಹಾಗೂ ಚೇತೇಶ್ವರ ಪೂಜಾರಾ ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೆ ರಣಜಿ ಕ್ರಿಕೆಟ್ ಮೂಲಕ ತಂಡಕ್ಕೆ ಕಂಬ್ಯಾಕ್ ಮಾಡುವ ಅವಕಾಶ ಕೂಡ ಇದೆ. ಆದರೆ ಅನೇಕ ಯುವ ಆಟಗಾರರು ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದು, ಅದರಂತೆ ಈ ಆಟಗಾರು ಪ್ಲೇಯಿಂಗ್ ಇಲೆವೆನ್ನಲ್ಲಿ ಮಿಂಚಿದರೆ ಹಿರಿಯ ಆಟಗಾರರ ಕಂಬ್ಯಾಕ್ ಮತ್ತಷ್ಟು ಕಠಿಣವಾಗಲಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
(BCCI Selectors ‘INFORM’ Rahane, Ishant, Saha, Pujara ‘will not be selected for Sri Lanka Series)