ದೇಶಕ್ಕಿಂತ ಕ್ರಿಕೆಟ್ ದೊಡ್ಡದಲ್ಲ: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

IPL 2025 Suspended: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಭೀತಿಯಿಂದಾಗಿ 2025ರ ಐಪಿಎಲ್ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ . ಆಟಗಾರರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಬಹಳ ನಿರಾಶೆಯನ್ನು ತಂದಿದೆ. ಆರ್ಸಿಬಿ ಅಭಿಮಾನಿಗಳು ಕೂಡ ತೀವ್ರ ನಿರಾಸೆಗೊಂಡಿದ್ದಾರೆ.

ದೇಶಕ್ಕಿಂತ ಕ್ರಿಕೆಟ್ ದೊಡ್ಡದಲ್ಲ: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ
ಐಪಿಎಲ್

Updated on: May 09, 2025 | 12:41 PM

ಭಾರತ ಹಾಗೂ ಪಾಕ್ ನಡುವೆ ಯುದ್ಧ ಭೀತಿ ಇರುವುದರಿಂದ 2025ನೇ ಸಾಲಿನ ಐಪಿಎಲ್​ನ (IPL) ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ಆಗಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ. ವಿದೇಶಿ ಆಟಗಾರರು ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಅವರ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ವಿಚಾರ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ನೋವನ್ನು ತಂದಿದೆ.

ಪಂಜಾಬ್​ನ ಧರ್ಮಶಾಲಾದಲ್ಲಿ ಈ ವರ್ಷದ 58ನೇ ಪಂದ್ಯ ನಡೆಯುತ್ತಿತ್ತು. 10.1 ಓವರ್​ಗೆ ಫ್ಲಡ್​ಲೈಟ್ ಸಮಸ್ಯೆ ಆಯಿತು. ಆ ಬಳಿಕ ಭದ್ರತಾ ಕಾರಣದಿಂದ ಮ್ಯಾಚ್​ನ ರದ್ದು ಮಾಡಲಾಯಿತು. ಏಕಾಏಕಿ ಎಲ್ಲರನ್ನೂ ಕಳುಹಿಸಲಾಯಿತು.ಇದು ಮುಂದಿನ ಪಂದ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಅಂತೆಯೇ ಬಿಸಿಸಿಐ ಇಂದು (ಮೇ 9) ಮಹತ್ವದ ಸಭೆ ನಡೆಸಿ ಪಂದ್ಯವನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಭಾರತ ಹಾಗೂ ಪಾಕ್ ಮಧ್ಯೆ ಯುದ್ಧ ಭೀತಿ ಶುರವಾಗಿದೆ. ಪಹಲ್ಗಾಮ್​ನಲ್ಲಿ ನಡೆದ ದಾಳಿಗೆ ಭಾರತ ಪ್ರತಿ ದಾಳಿ ನಡೆಸಿ ಉಗ್ರರರ ನೆಲೆಯನ್ನು ನಾಶ ಮಾಡಿತು. ಆ ಬಳಿಕ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿತ್ತು. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ಎಲ್ಲಾ ಕಾರಣದಿಂದ ಯುದ್ಧ ಭೀತಿ ಶುರುವಾಗಿದ್ದು, ಬಿಸಿಸಿಐ ಐಪಿಎಲ್ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಇದನ್ನೂ ನೋಡಿ: ಆರ್​ಸಿಬಿ ಸೆಲೆಬ್ರೇಷನ್ ವೇಳೆ ರಾರಾಜಿಸಿತು ಕಿಚ್ಚ ಸುದೀಪ್ ಫೋಟೋ

ಈ ಬಾರಿ ಆರ್​ಸಿಬಿ ಪಾಯಿಂಟ್ ಟೇಬಲ್​​ನಲ್ಲಿ ಎರಡನೇ ಸ್ಥಾನದಲ್ಲಿ ಇತ್ತು. ಈ ಮೂಲಕ ಕಪ್ ಗೆಲ್ಲುವ ಕನಸನ್ನು ಕಾಣುತ್ತಿತ್ತು. ಈ ಮೂಲಕ 18 ವರ್ಷಗಳ ಕಪ್ ಗೆಲ್ಲುವ ಕನಸು ನನಸಾಗಲಿದೆ ಎಂದು ಆರ್​ಸಿಬಿ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಆದರೆ, ಈಗ ಐಪಿಎಲ್ ಪಂದ್ಯವೇ ರದ್ದಾಗಿ ಹೋಗಿರುವುದು ಆರ್​ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರು ಎರಚಿದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:24 pm, Fri, 9 May 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us