
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ನಡುವೆ ಬಿಸಿಸಿಐ (BCCI) ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. ಮೊದಲನೆಯದ್ದು, ಏಕದಿನ ಸರಣಿ ಬಳಿಕ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಇದರ ಜೊತೆಗೆ 2026 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ (T20 World Cup 2026) ಟೀಂ ಇಂಡಿಯಾದ ನೂತನ ಜೆರ್ಸಿಯನ್ನು (Team India’s new jersey) ಸಹ ಅನಾವರಣಗೊಳಿಸಲಾಗಿದೆ. ರೋಹಿತ್ ಶರ್ಮಾ, ತಿಲಕ್ ವರ್ಮಾ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. 2026 ರ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದ ಎಂಟು ಸ್ಥಳಗಳಲ್ಲಿ ನಡೆಯಲಿರುವ 10 ನೇ ಆವೃತ್ತಿಯ ಟಿ20 ವಿಶ್ವಕಪ್‌ಗೆ ಈಗಿನಿಂದಲೇ ಬಿಸಿಸಿಐ ತನ್ನ ತಯಾರಿಯನ್ನು ಆರಂಭಿಸಿದೆ.
ಟೀಂ ಇಂಡಿಯಾದ ನೂತನ ಟಿ20 ಜೆರ್ಸಿಯೂ ಹಲವಾರು ಲಂಬ ಪಟ್ಟೆಗಳನ್ನು ಹೊಂದಿರುವ ಗಾಢ ನೀಲಿ ಬಣ್ಣವನ್ನು ಹೊಂದಿದೆ. ಹಾಗೆಯೇ ಎರಡು ತೋಳುಗಳ ಬದಿಯಲ್ಲಿರುವ ಕಿತ್ತಳೆ ಬಣ್ಣವು ಜೆರ್ಸಿಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ತಂಡದ ಜೆರ್ಸಿಯ ಕಾಲರ್ ಅನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಒಳಗೊಂಡಿರುವ ಭಾರತೀಯ ರಾಷ್ಟ್ರೀಯ ತಂಡದ ರಾಷ್ಟ್ರೀಯ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿದೆ. ಜೆರ್ಸಿಯ ಮುಂಭಾಗವು ಅಡಿಡಾಸ್, ಪ್ರಾಯೋಜಕ ಅಪೊಲೊ ಟೈರ್ಸ್ ಮತ್ತು ಬಿಸಿಸಿಐನ ಲೋಗೋಗಳನ್ನು ಒಳಗೊಂಡಿದೆ. ಅದರ ಮೇಲೆ “ಇಂಡಿಯಾ” ಎಂದು ಗಾಢ ಕಿತ್ತಳೆ ಬಣ್ಣದಲ್ಲಿ ಬರೆಯಲಾಗಿದೆ. ಒಟ್ಟಾರೆಯಾಗಿ, ಜೆರ್ಸಿ ತುಂಬಾ ಸ್ಟೈಲಿಶ್ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ.
Ladies & Gentlemen, presenting Team India’s new jersey for the T20 World Cup 2026! 🇮🇳 pic.twitter.com/pDVFWYUdFG
— Cricket Addictor (@AddictorCricket) December 3, 2025
ಟಿ20 ವಿಶ್ವಕಪ್ 2026 ಫೆಬ್ರವರಿ 7 ರಂದು ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾದ ಎಂಟು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ಒಟ್ಟು ಐದು ಸ್ಥಳಗಳು ಪಂದ್ಯಗಳನ್ನು ಆಯೋಜಿಸಿದರೆ, ಶ್ರೀಲಂಕಾದ ಮೂರು ಸ್ಥಳಗಳು ಈ ಜಾಗತಿಕ ಪಂದ್ಯಾವಳಿಗೆ ಪಂದ್ಯಗಳನ್ನು ಆಯೋಜಿಸಲಿವೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಅಹಮದಾಬಾದ್ ಭಾರತದಲ್ಲಿ ಪಂದ್ಯಗಳನ್ನು ಆಯೋಜಿಸಲಿವೆ. ಕೊಲಂಬೊದ ಆರ್. ಪ್ರೇಮದಾಸ ಮತ್ತು ಎಸ್. ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಪಂದ್ಯಗಳು ನಡೆಯಲಿದ್ದು, ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣವು ಸಹ ಒಂದು ಪಂದ್ಯವನ್ನು ಆಯೋಜಿಸಲಿದೆ.
IND vs SA: ರಾಯ್ಪುರದಲ್ಲೂ ಕಿಂಗ್ ಕೊಹ್ಲಿಯದ್ದೇ ಕಾರುಬಾರು; ಸತತ 2ನೇ ಶತಕ
ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಭಾರತದ ಜೊತೆಗೆ, ಗುಂಪು ಎಯಲ್ಲಿ ಪಾಕಿಸ್ತಾನ, ಯುನೈಟೆಡ್ ಸ್ಟೇಟ್ಸ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ಸೇರಿವೆ. ಗುಂಪು ಬಿಯಲ್ಲಿ ಆಸ್ಟ್ರೇಲಿಯಾ, ಸಹ-ಆತಿಥೇಯ ಶ್ರೀಲಂಕಾ, ಐರ್ಲೆಂಡ್, ಜಿಂಬಾಬ್ವೆ ಮತ್ತು ಓಮನ್ ಸೇರಿವೆ. ಗುಂಪು ಸಿಯಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ ಮತ್ತು ಇಟಲಿ ಸೇರಿವೆ. ಗುಂಪು ಡಿಯಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಕೆನಡಾ ಮತ್ತು ಯುಎಇ ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Wed, 3 December 25