IPL 2022: ಇಬ್ಬರು ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳ ಕಣ್ಣು

| Updated By: ಝಾಹಿರ್ ಯೂಸುಫ್

Updated on: Jan 25, 2022 | 9:56 PM

ಈಗಾಗಲೇ ಐಪಿಎಲ್​ಗೆ ಹೆಸರು ನೀಡಿರುವ ವೆಸ್ಟ್ ಇಂಡೀಸ್​ನ 41 ಆಟಗಾರರ ಪಟ್ಟಿಯಲ್ಲಿ ಶೆಫರ್ಡ್ ಕೂಡ ಒಬ್ಬರು. ಅದರಲ್ಲೂ ಮೂಲಬೆಲೆ 75 ಲಕ್ಷದೊಂದಿಗೆ ರೊಮಾರಿಯೊ ಶೆಫರ್ಡ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

IPL 2022: ಇಬ್ಬರು ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳ ಕಣ್ಣು
Ben McDermott, Romario Shepherd
Follow us on

ಐಪಿಎಲ್ ಸೀಸನ್ 15 ಮೆಗಾ ಹರಾಜು ಮುಂದಿನ ತಿಂಗಳು ನಡೆಯಲಿದೆ. ಈ ಬಾರಿ ಮೆಗಾ ಹರಾಜಿನಲ್ಲಿ 10 ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಆಟಗಾರರ ಖರೀದಿಗೆ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಅದರಲ್ಲೂ ಈ ಬಾರಿ ಬಹುತೇಕ ತಂಡಗಳ ಮೊದಲ ಟಾರ್ಗೆಟ್ ಬಿಗ್ ಬ್ಯಾಷ್​ ಲೀಗ್​ನಲ್ಲಿ ಮಿಂಚಿದ ಆಟಗಾರರು ಎಂಬುದು ತಿಳಿದು ಬಂದಿದೆ. ಈ ಬಾರಿಯ ಬಿಗ್ ಬ್ಯಾಷ್​ ಲೀಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಬೆನ್ ಮೆಕ್‌ಡರ್ಮಾಟ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಆಸಕ್ತಿ ಹೊಂದಿದ್ದು, ಹೀಗಾಗಿ ಮೆಕ್​ಡಮಾರ್ಟ್​ಗಾಗಿ ಪೈಪೋಟಿ ಕಂಡು ಬರಲಿದೆ.

ಏಕೆಂದರೆ ಈ ಬಾರಿ 27 ವರ್ಷದ ಬೆನ್ ಮೆಕ್‌ಡರ್ಮಾಟ್ ಬಿಗ್ ಬ್ಯಾಷ್ ಲೀಗ್‌ನಲ್ಲಿ 577 ರನ್ ಬಾರಿಸಿ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. 153.86 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಬೆನ್ ಮೆಕ್‌ಡರ್ಮಾಟ್ ಇದೀಗ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇದೇ ಖುಷಿಯಲ್ಲಿ ಮೆಕ್​ಡಮಾರ್ಟ್​ ಕೂಡ ಚೊಚ್ಚಲ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

ಹಾಗೆಯೇ ಐಪಿಎಲ್ ಫ್ರಾಂಚೈಸಿಗಳ ಮತ್ತೋರ್ವ ಹಾಟ್ ಫೇವರೇಟ್ ಆಟಗಾರ ಎಂದರೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್. ಟಿ20 ಕ್ರಿಕೆಟ್​ನಲ್ಲಿ 20 ಇನ್ನಿಂಗ್ಸ್‌ ಆಡಿರುವ ಶೆಫರ್ಡ್ 21 ಬೌಂಡರಿ ಮತ್ತು 21 ಸಿಕ್ಸರ್‌ಗಳನ್ನು ಬಾರಿಸಿ ಮಿಂಚಿದ್ದಾರೆ. ಅಂದರೆ ಪ್ರತಿ ಪಂದ್ಯದಲ್ಲೂ ಸಿಕ್ಕ ಅವಕಾಶದಲ್ಲಿ ವಿಂಡೀಸ್​ ದಾಂಡಿಗ ಸಿಕ್ಸರ್ ಮತ್ತು ಬೌಂಡರಿ ಬಾರಿಸುತ್ತಿರುವುದು ವಿಶೇಷ. ಅಷ್ಟೇ ಅಲ್ಲದೆ ವೇಗದ ಬೌಲಿಂಗ್ ಮೂಲಕ 36 ಇನ್ನಿಂಗ್ಸ್‌ಗಳಲ್ಲಿ 49 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಆಲ್​ರೌಂಡರ್ ಹುಡುಕಾಟದಲ್ಲಿರುವ ಐಪಿಎಲ್​ ಫ್ರಾಂಚೈಸಿಗಳು ರೊಮಾರಿಯೊ ಶೆಫರ್ಡ್ ಅವರನ್ನು ಟಾರ್ಗೆಟ್ ಮಾಡಲಿದೆ.

ಈಗಾಗಲೇ ಐಪಿಎಲ್​ಗೆ ಹೆಸರು ನೀಡಿರುವ ವೆಸ್ಟ್ ಇಂಡೀಸ್​ನ 41 ಆಟಗಾರರ ಪಟ್ಟಿಯಲ್ಲಿ ಶೆಫರ್ಡ್ ಕೂಡ ಒಬ್ಬರು. ಅದರಲ್ಲೂ ಮೂಲಬೆಲೆ 75 ಲಕ್ಷದೊಂದಿಗೆ ರೊಮಾರಿಯೊ ಶೆಫರ್ಡ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಆಲ್​ರೌಂಡರ್ ಶೆಫರ್ಡ್ ಹಾಗೂ ಬೆನ್ ಮೆಕ್‌ಡರ್ಮಾಟ್ ಭರ್ಜರಿ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆಯಿದೆ.

ಈ ಬಾರಿಯ ಐಪಿಎಲ್ ಮೆಗಾ ಹರಾಜಿಗಾಗಿ ಒಟ್ಟು 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯಿಂದ ಫ್ರಾಂಚೈಸಿಗಳಿಗೆ ಬೇಡದ ಆಟಗಾರರ ಕೈಬಿಡಲಾಗುತ್ತದೆ. ಆ ಬಳಿಕ ಫೈನಲ್​ ಲೀಸ್ಟ್​ನೊಂದಿಗೆ ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಯಲಿದೆ.

ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!