BBL 2021 Video: ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜೇಕ್..!

| Updated By: ಝಾಹಿರ್ ಯೂಸುಫ್

Updated on: Dec 07, 2021 | 7:13 PM

Big Bash League: ಮೊದಲ 5 ಓವರ್​ನಲ್ಲೇ ತಂಡದ ಮೊತ್ತವನ್ನು 50ರ ಗಡಿ ತಲುಪಿಸಿದ ಈ ಜೋಡಿ ತಂಡಕ್ಕೆ ಉತ್ತಮ ಓಪನಿಂಗ್ ನೀಡಿದ್ದರು. ಆದರೆ ಈ ವೇಳೆ ದಾಳಿಗಿಳಿದ ಜಹೀರ್ ಖಾನ್ ಎಸೆತದಲ್ಲಿ ಎಡಗೈ ದಾಂಡಿಗ ವೆಥರಾಲ್ಡ್ ಭರ್ಜರಿ ಹೊಡೆತ ಬಾರಿಸಿದ್ದರು.

BBL 2021 Video: ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜೇಕ್..!
BBL 2021
Follow us on

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ (BBL 2021) ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ಒಂದೆಡೆ ಬ್ಯಾಟರ್​ಗಳ ಅಬ್ಬರವಾದರೆ, ಮತ್ತೊಂದೆಡೆ ಬೌಲರುಗಳು ಕೂಡ ಯಶಸ್ಸು ಸಾಧಿಸುತ್ತಿದ್ದಾರೆ. ಇದರ ನಡುವೆ ಫೀಲ್ಡಿಂಗ್ ಮೂಲಕ ಯುವ ಆಟಗಾರ ಜೇಕ್ ಪ್ರೇಸರ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಮೆಲ್ಬೋರ್ನ್ ರೆನೆಗೇಡ್ಸ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್​ ಮೊದಲು ಬ್ಯಾಟ್ ಮಾಡಿತು. ಆರಂಭಿಕ ಆಟಗಾರ ಮೆಕಾನ್ಝಿ ಹಾರ್ವೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ಮ್ಯಾಥ್ಯೂ ಶಾರ್ಟ್ ಹಾಗೂ ವೆಥರಾಲ್ಡ್ ಅತ್ಯುತ್ತಮ ಆರಂಭ ಒದಗಿಸಿದ್ದರು.

ಮೊದಲ 5 ಓವರ್​ನಲ್ಲೇ ತಂಡದ ಮೊತ್ತವನ್ನು 50ರ ಗಡಿ ತಲುಪಿಸಿದ ಈ ಜೋಡಿ ತಂಡಕ್ಕೆ ಉತ್ತಮ ಓಪನಿಂಗ್ ನೀಡಿದ್ದರು. ಆದರೆ ಈ ವೇಳೆ ದಾಳಿಗಿಳಿದ ಜಹೀರ್ ಖಾನ್ ಎಸೆತದಲ್ಲಿ ಎಡಗೈ ದಾಂಡಿಗ ವೆಥರಾಲ್ಡ್ ಭರ್ಜರಿ ಹೊಡೆತ ಬಾರಿಸಿದ್ದರು. ಇನ್ನೇನು ಚೆಂಡು ಡೀಪ್ ಮಿಡ್​ ವಿಕೆಟ್ ಬೌಂಡರಿ ಮೂಲಕ ಸಿಕ್ಸ್ ಆಗಲಿದೆ ಅನ್ನುವಷ್ಟರಲ್ಲಿ 19 ವರ್ಷದ ಯುವ ಆಟಗಾರ ಜೇಕ್ ಫ್ರೇಸರ್ ಎಲ್ಲರ ಲೆಕ್ಕಚಾರಗಳನ್ನು ತಲೆಕೆಳಗಾಗಿಸಿದರು.

ಬೌಂಡರಿ ಲೈನ್​ನಲ್ಲಿ ಅದ್ಭುತವಾಗಿ ಜಿಗಿದ ಫ್ರೇಸರ್ ಒಂದೇ ಕೈಯಲ್ಲಿ ಚೆಂಡನ್ನು ಬಂಧಿಸಿದರು. ಇತ್ತ ಈ ಫೆಂಟಾಸ್ಟಿಕ್ ಕ್ಯಾಚ್ ನೋಡಿದ ಕಾಮೆಂಟೇಟರ್ಸ್​ ಕಡೆಯಿಂದ ಕೇಳಿಬಂದಿದ್ದು ಒಂದೇ ಮಾತು…ವಾಟ್ ಎ ಕ್ಯಾಚ್… ಹೌದು, ರಾಕೆಟ್ ವೇಗದಲ್ಲಿದ್ದ ಚೆಂಡನ್ನು ಅತ್ಯುತ್ತಮ ಟೈಮಿಂಗ್​ ಮೂಲಕ ಒಂದೇ ಕೈಯಲ್ಲಿ ಜೇಕ್ ಫ್ರೇಸರ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಇದೀಗ ಈ ಅತ್ಯುತ್ತಮ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್ ನೀಡಿದ 153 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಅಡಿಲೇಡ್ ಸ್ಟ್ರೈಕರ್ಸ್ 8 ವಿಕೆಟ್ ಕಳೆದುಕೊಂಡು 151 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಮೆಲ್ಬೋರ್ನ್​ ರೆನೆಗೇಡ್ಸ್ ತಂಡವು 2 ರನ್​ಗಳ ರೋಚಕ ಜಯವನ್ನು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

ಇದನ್ನೂ ಓದಿ: Aakash Chopra: ಚಹಲ್ ಬದಲಿಗೆ RCB ಇವರನ್ನು ಟಾರ್ಗೆಟ್ ಮಾಡಲಿದೆ..!

ಇದನ್ನೂ ಓದಿ: IPL 2022: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಮತ್ತೆ ಬರ್ತಾರಂತೆ ABD

(Big Bash stunned by epic one-handed catch)